Asianet Suvarna News Asianet Suvarna News

ರಕ್ಕಸನಾದ ಪೊಲೀಸಪ್ಪ, ಕಂಪ್ಲೇಂಟ್ ಕೊಡಲು ಠಾಣೆಗೆ ಬಂದ ಬಾಲಕಿಯ ರೇಪ್!

* ರಕ್ಷಕನಾಗಬೇಕಾದವರೇ ರಕ್ಕಸರಾದಾಗ

* ಕಂಪ್ಲೇಂಟ್ ಕೊಡಲು ಠಾಣೆಗೆ ಬಂದ ಬಾಲಕಿಯ ರೇಪ್ ಮಾಡಿದ ಪೊಲೀಸ್

* ಬಾಲಕಿಯ ಬಾಯ್‌ಫ್ರೆಂಡ್‌ಗೂ ಕಿರುಕುಳ

22 year old woman accuses police head constable of rape in Rajasthan; case registered pod
Author
Bangalore, First Published Sep 6, 2021, 4:19 PM IST
  • Facebook
  • Twitter
  • Whatsapp

ಜೈಪುರ(ಸೆ.06): ರಾಜಸ್ಥಾನದನ ಸಿಕಾರ್‌ನಲ್ಲಿ, ಒಬ್ಬ ಪೋಲಿಸ್‌ ನಾಚಿಕೆಗೇಡಿನ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಹುಡುಗಿಯನ್ನು ಪೊಲೀಸ್ ಠಾಣೆಯಲ್ಲಿಯೇ ಹೆಡ್ ಕಾನ್ಸ್ಟೇಬಲ್ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಹುಡುಗನಿಗೂ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಇನ್ನು ಮಾಧ್ಯಮ ವರದಿಗಳ ಪ್ರಕಾರ, ಹೇಳಿಕೆ ಪಡೆಯುವ ನೆಪದಲ್ಲಿ ಹುಡುಗಿಯನ್ನು ಠಾಣೆಗೆ ಕರೆದಿದ್ದ ಎನ್ನಲಾಗಿದೆ. 

ಯುವತಿಗೆ ಬೆದರಿಸಿ ಹಿಂದಕ್ಕೆ ಕಳುಹಿಸಿದ್ದ

ಮಾಧ್ಯಮ ವರದಿಗಳ ಪ್ರಕಾರ, ಪೋಲೀಸರು ಬಾಲಕಿನ್ನು ಬೆದರಿಸಿ ಹಿಂದಕ್ಕೆ ಕಳುಹಿಸಿದ್ದ ಎನ್ನಲಾಗಿದೆ. ಆಗಸ್ಟ್ 29 ಕ್ಕೆ ನಡೆದಿದೆ ಎನ್ನಲಾದ ಈ ಘಟನೆ ಸಿಕಾರಿನ ಸಿಂಗ್ರಾವತ್ ಹೊರಠಾಣೆಯಲ್ಲಿ ನಡೆದಿದೆ. ಇನ್ನು ಅತ್ಯಾಚಾರಕ್ಕೊಳಗಾದ ಬಾಲಕಿ ಮರುದಿನ ತನ್ನ ಪ್ರಿಯಕರನೊಂದಿಗೆ ಪೊಲೀಸ್ ಠಾಣೆಯನ್ನು ತಲುಪಿದಾಗ, ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿದೆ. ಆದೆ ಇದನ್ನು ಮುಚ್ಚಿಡಲಾಗಲಿಲ್ಲ, ಕೊನೆಗೂ ಈ ಮಾಹಿತಿ ಉನ್ನತ ಅಧಿಕಾರಿಗಳನ್ನು ತಲುಪಿದೆ.

ಆಗಸ್ಟ್ 12 ರಂದು ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ

ವಾಸ್ತವವಾಗಿ, ಆಗಸ್ಟ್ 12 ರಂದು, ಹುಡುಗಿ ಮನೆಯಿಂದ ನಾಪತ್ತೆಯಾಗಿದ್ದಳು. ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊನೆಯದಾಗಿ ಶ್ರೀಗಂಗಾನಗರ ಜಿಲ್ಲೆಯಲ್ಲಿ ಇದ್ದರೆಂದು ತಿಳಿದು ಬಂದಿದೆ. ಬಳಿಕ ಸಿಂಗ್ರಾವತ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುಭಾಷ್ ಕುಮಾರ್ ಹುಡುಗಿಯನ್ನು ಕರೆತರಲು ಶ್ರೀಗಂಗಾನಗರಕ್ಕೆ ಹೋಗಿದ್ದಾರೆ. ಈ ವೇಳೆ ಆತ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಕಾರಿನ ಮುಂದಿನ ಸೀಟಿನಲ್ಲಿ ಕೂರಿಸುವಂತೆ ಒತ್ತಾಯಿಸಿದ್ದಲ್ಲದೇ, ಹಾದಿಯುದ್ದಕ್ಕೂ ಕಾಟ ಕೊಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿಯನ್ನು ಕಾರಿನಲ್ಲಿಯೇ ಥಳಿಸಿ ಪೊಲೀಸರು 

ತನ್ನ ಮೇಲಿನ ದೌರ್ಜನ್ಯದ ವಿರುದ್ಧ ಹುಡುಗಿ ಪ್ರತಿಭಟಿಸಿದಾಗ ಪೊಲೀಸ್ ಸಿಬ್ಬಂದಿ ಆಕೆಯನ್ನು ಥಳಿಸಿದ್ದಾನೆ. ಇದಾದ ಬಳಿಕ ಆಗಸ್ಟ್ 29 ರಂದು ಹುಡುಗಿ ಪೊಲೀಸ್ ಠಾಣೆಗೆ ಬಂದಾಗ, ಆಕೆಯ ಪ್ರೇಮಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಕಳುಹಿಸಲಾಗಿದೆ. ಬಳಿಕ ಬಾಲಕಿಯನ್ನು ಒಳ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ. ಸದ್ಯ ಈ ಪ್ರಕರಣ ಎಸ್‌ಪಿಗೆ ತಲುಪಿದೆ. ಹೀಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಆರೋಪಿ ಸುಭಾಷ್ ನನ್ನು ಪೊಲೀಸ್ ಠಾಣೆಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎನ್ನಲಾಗಿದೆ. 

Follow Us:
Download App:
  • android
  • ios