ಇಂದು ನಿಖಿಲ್ - ರೇವತಿ ಸರಳ ವಿವಾಹ: ಮುಖ್ಯದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್‌ ವಿವಾಹ ಶುಕ್ರವಾರ ಬಿಡದಿ ಸಮೀಪದ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ನೆರ​ವೇ​ರ​ಲಿದ್ದು, ಸಕಲ ಸಿದ್ಧ​ತೆ​ ಮಾಡಿಕೊಳ್ಳಲಾಗಿದೆ.

Nikhil kumarswamy and revathi simple marriage in Ramanagar

ರಾಮ​ನ​ಗರ(ಏ.17): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್‌ ವಿವಾಹ ಶುಕ್ರವಾರ ಬಿಡದಿ ಸಮೀಪದ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ನೆರ​ವೇ​ರ​ಲಿದ್ದು, ಸಕಲ ಸಿದ್ಧ​ತೆ​ ಮಾಡಿಕೊಳ್ಳಲಾಗಿದೆ.

ಬೆಳಗ್ಗೆ 9.15ರಿಂದ 9.40 ಗಂಟೆ​ಯೊ​ಳಗೆ ಸಲ್ಲುವ ಶುಭ ವೃಷಭ ಲಗ್ನ​ದಲ್ಲಿ ನಿಖಿಲ್‌, ರೇವತಿ ಅವರನ್ನು ವರಿಸಲಿದ್ದಾರೆ. ಉಭಯ ಕುಟುಂಬದ 40ರಿಂದ 50 ಮಂದಿ ವಿವಾ​ಹ​ದಲ್ಲಿ ಪಾಲ್ಗೊ​ಳ್ಳಲಿದ್ದಾರೆ. ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳುವ ಉದ್ದೇ​ಶ​ದಿಂದ 3-4 ಅಡಿ ಅಂತ​ರ​ದಲ್ಲಿ 40 ಮಂದಿಗೆ ಆಸನ ವ್ಯವಸ್ಥೆ ಮಾಡ​ಲಾ​ಗಿದೆ.

ಒಟ್ಟು 100 ಮಂದಿಗೆ ಬೆಂಗ​ಳೂ​ರಿನ ಹೋಟೆಲ್‌ನಲ್ಲಿ ಅಡುಗೆ ಆರ್ಡರ್‌ ನೀಡ​ಲಾ​ಗಿದೆ. ಮುಖ್ಯದ್ವಾರ​ದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿ​ಟೈ​ಸರ್‌, ಮಾಸ್ಕ್‌ ವ್ಯವಸ್ಥೆ ಮಾಡ​ಲಾ​ಗಿದೆ. ಬಿಡದಿ ಬಳಿಯ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ಶುಕ್ರ​ವಾರ ನೆರ​ವೇ​ರ​ಲಿ​ರುವ ಮಾಜಿ ಸಿಎಂ ಕುಮಾ​ರ​ಸ್ವಾಮಿ ಪುತ್ರ ಕೆ.ನಿಖಿಲ್‌-ಎಂ.ರೇವತಿ ವಿವಾಹ ಕಾರ್ಯದ ಸಕಲ ಸಿದ್ಧ​ತೆ​ಗಳು ಪೂರ್ಣ​ಗೊಂಡಿವೆ.

ನಿಖಿಲ್-ರೇವತಿ ಕಲ್ಯಾಣೋತ್ಸವಕ್ಕೆ ಯಾರೆಲ್ಲ ಬಂದಿದ್ದಾರೆ? ಚಿತ್ರಗಳಲ್ಲಿ

ಬೆಳಗ್ಗೆ 8 ಗಂಟೆ ವೇಳೆಗೆ ವಧು-ವರ ಸೇರಿ​ದಂತೆ ಕುಟುಂಬ​ದ​ವರು ಬೆಂಗ​ಳೂ​ರಿ​ನಿಂದ ಬಿಡ​ದಿಯ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆಗೆ ಆಗ​ಮಿ​ಸು​ವರು. ಬೆಳಿಗ್ಗೆ 9.15ರಿಂದ 9.40 ಗಂಟೆ​ಯೊ​ಳಗೆ ಸಲ್ಲುವ ಶುಭ ವೃಷಭ ಲಗ್ನ​ದಲ್ಲಿ ನಿಖಿಲ್‌-ರೇವತಿ ಮಾಂಗಲ್ಯ ಧಾರಣೆ ನಂತರ ಸಪ್ತ​ಪದಿ ತುಳಿ​ಯ​ಲಿ​ದ್ದಾರೆ. ಕುಮಾ​ರ​ಸ್ವಾಮಿ ಕುಟುಂಬಕ್ಕೆ ಆಪ್ತ​ರಾ​ಗಿ​ರುವ ಪುರೋ​ಹಿ​ತರು ಮದುವೆಯ ಶಾಸ್ತ್ರ ಕಾರ್ಯ ನೆರ​ವೇ​ರಿ​ಸು​ವರು.

ಕುಮಾ​ರ​ಸ್ವಾ​ಮಿ​ರ​ವರು ತಂದೆ ಮಾಜಿ ಪ್ರಧಾನಿ ದೇವೇ​ಗೌಡ, ತಾಯಿ ಚನ್ನಮ್ಮ, ಸಹೋ​ದ​ರ​ರಾದ ಬಾಲ​ಕೃ​ಷ್ಣೇ​ಗೌಡ, ಎಚ್‌.ಡಿ.​ರೇ​ವಣ್ಣ, ರಮೇಶ್‌, ಸಹೋ​ದ​ರಿ​ಯ​ರಾದ ಅನು​ಸೂಯ, ಶೈಲಜಾ ಕುಟುಂಬ​ದ​ವರು ಹಾಗೂ ವಧು ರೇವತಿ ತಂದೆ ಮಂಜು​ನಾಥ್‌, ತಾಯಿ ಶ್ರೀದೇ​ವಿ, ಮಾಜಿ ಸಚಿವ ಕೃಷ್ಣಪ್ಪ ಸೇರಿ​ದಂತೆ 40ರಿಂದ 50 ಮಂದಿ ಮಾತ್ರ ವಿವಾ​ಹ​ದಲ್ಲಿ ಪಾಲ್ಗೊ​ಳ್ಳು​ತ್ತಿ​ದ್ದಾರೆ.

ಮತ್ತೆ ನಿಖಿಲ್-ರೇವತಿ ಮದ್ವೆ ಸ್ಥಳ ಬದಲು: ಎಚ್‌ಡಿಕೆ ಸೆಂಟಿಮೆಂಟ್ ಮಾತ್ರ ಬಿಡಲೇ ಇಲ್ಲ

ಜೆಡಿ​ಎಸ್‌ ಸೇರಿ​ದಂತೆ ಯಾವುದೇ ರಾಜ​ಕೀಯ ಪಕ್ಷ​ಗಳ ಸಂಸ​ದರು, ಶಾಸ​ಕರು ಹಾಗೂ ಮುಖಂಡ​ರಿ​ಗಾ​ಗಲಿ ಅಥವಾ ಅಧಿ​ಕಾರ ವರ್ಗ​ದ​ವ​ರಿ​ಗಾ​ಗಲಿ ಆಹ್ವಾನ ನೀಡಿಲ್ಲ. ದೇವೇ​ಗೌಡ, ಕುಮಾ​ರ​ಸ್ವಾಮಿ ಹಾಗೂ ರೇವ​ಣ್ಣ​ರ​ವರ ಆಪ್ತ ಸಹಾ​ಯ​ಕರು, ಚಾಲ​ಕರಿಗೆ ಮದುವೆ ನೋಡುವ ಅವ​ಕಾಶ ಕಲ್ಪಿ​ಸ​ಲಾ​ಗಿದೆ.

ತೋಟದ ಮನೆಯ ಮುಖ್ಯ ದ್ವಾರ​ದಲ್ಲಿ ಪ್ರತಿ​ಯೊ​ಬ್ಬರ ಥರ್ಮಲ್‌ ಸ್ಕ್ರೀನಿಂಗ್‌ ನಡೆ​ಯ​ಲಿದೆ. ಸ್ಯಾನಿ​ಟೈ​ಸರ್‌, ಮಾಸ್ಕ್‌ ವ್ಯವಸ್ಥೆ ಮಾಡ​ಲಾ​ಗಿದೆ. ಇದ​ಕ್ಕಾ​ಗಿಯೇ ವೈದ್ಯಾ​ಧಿ​ಕಾ​ರಿ​ಗಳ ತಂಡ​ವೊಂದನ್ನು ನಿಯೋ​ಜಿ​ಸ​ಲಾ​ಗಿದೆ.

ಮದುವೆ ಕಾರ್ಯ ವೀಕ್ಷಿ​ಸಲು ಅನು​ಕೂ​ಲ​ವಾ​ಗ​ಲೆಂದು ಹಾಗೂ ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳುವ ಉದ್ದೇ​ಶ​ದಿಂದ 3-4 ಅಡಿ ಅಂತ​ರ​ದಲ್ಲಿ ಆಸನ ವ್ಯವಸ್ಥೆ ಮಾಡ​ಲಾ​ಗಿದೆ. ಮದುವೆ ಮಂಟ​ಪದ ವೇದಿಕೆ ಮುಂಭಾ​ಗ​ದಲ್ಲಿ 40 ಮಂದಿಗೆ ಮಾತ್ರ ಆಸನ ವ್ಯವಸ್ಥೆ ಮಾಡ​ಲಾ​ಗಿದೆ. ತೋಟದ ಮುಖ್ಯ​ದ್ವಾ​ರ​ದಿಂದ ಮಂಟ​ಪದವರೆಗೆ ಚಪ್ಪರ ಹಾಕ​ಲಾ​ಗಿದ್ದು, ಹೂವಿನ ವಿಶೇಷ ಅಲಂಕರಿ​ಸ​ಲಾ​ಗಿದೆ. ತೋಟದ ಮನೆ​ಯನ್ನೂ ವಿಶೇ​ಷ​ವಾಗಿ ಅಲಂಕಾರ ಮಾಡ​ಲಾ​ಗಿದೆ.

ಊಟ ಪಾರ್ಸಲ್‌:

ವಿವಾಹ ಕಾರ್ಯ​ದಲ್ಲಿ ಪಾಲ್ಗೊಂಡ​ವ​ರಿ​ಗಾಗಿ ವಿಶೇಷ ಮೆನು ಸಿದ್ಧ ಮಾಡ​ಲಾ​ಗು​ತ್ತಿದೆ. ಸಂಬಂಧಿ​ಕರು,ಆಪ್ತ ಸಹಾ​ಯ​ಕರು, ಕೆಲ​ಸ​ಗಾ​ರರು ಸೇರಿ​ದಂತೆ ಒಟ್ಟು 100 ಮಂದಿಗೆ ಬೆಂಗ​ಳೂ​ರಿನ ಪ್ರತಿ​ಷ್ಠಿತ ಹೋಟೆಲ್‌ನಲ್ಲಿ ಅಡುಗೆ ತಯಾ​ರಿ​ಸಲು ಆರ್ಡರ್‌ ನೀಡ​ಲಾ​ಗಿದೆ. ಎರಡು ಪಂಥಿಯಲ್ಲಿ ಭೋಜನ ವ್ಯವಸ್ಥೆ ಮಾಡ​ಲಾ​ಗಿದೆ.

ತೋಟದ ಸುತ್ತಲು ಶಾಮಿ​ಯಾನ ಸೈಡ್‌ ವಾಲ್‌ ಹಾಕ​ಲಾ​ಗಿದೆ. ಮನೆ​ಯ ಆವ​ರ​ಣ​ದಲ್ಲಿ ಅತಿ​ಥಿ​ಗಳ ವಾಹ​ನ​ಗಳ ನಿಲು​ಗ​ಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡ​ಲಾ​ಗಿದೆ. ಬೆಳಗ್ಗೆ 8 ರಿಂದ 12 ಗಂಟೆ​ಯೊ​ಳಗೆ ಮದುವೆ ಮುಗಿಸಿ ಎಲ್ಲರೂ ಬೆಂಗ​ಳೂ​ರಿಗೆ ವಾಪ​ಸ್ಸಾ​ಗುವರು.

ಬಿಗಿ ಪೊಲೀಸ್‌ ಬಂದೋ​ಬಸ್ತ್‌:

ನಿಖಿಲ್‌-ರೇವತಿ ವಿವಾಹ ನೆರ​ವೇ​ರ​ಲಿ​ರುವ ತೋಟದ ಮನೆಯ ಬಳಿ ಪೊಲೀಸ್‌ ಬಂದೋ​ಬಸ್‌್ತ ಮಾಡ​ಲಾ​ಗಿದೆ. ಡಿವೈ​ಎಸ್ಪಿ ಪುರು​ಷೋ​ತ್ತಮ್‌ ನೇತೃ​ತ್ವ​ದಲ್ಲಿ ಪೊಲೀ​ಸರು ಬಂದೋ​ಬ​ಸ್ತಿ​ನಲ್ಲಿ ತೊಡ​ಗಿ​ದ್ದಾರೆ. ತೋಟದ ಮನೆಗೆ ಸಂಪರ್ಕ ಕಲ್ಪಿ​ಸುವ ರಸ್ತೆ​ಗ​ಳ​ಲ್ಲಿ ಬ್ಯಾರಿ​ಕೇಟ್‌ ಹಾಕಿ ಅನ್ಯ​ರು ಪ್ರವೇ​ಶಿ​ಸ​ದಂತೆ ನಿರ್ಬಂಧ ಹೇರ​ಲಾ​ಗಿ​ದೆ.

Latest Videos
Follow Us:
Download App:
  • android
  • ios