ಅವರ ಮಾತುಗಳೇ ಸಂಸ್ಕೃತಿ ತೋರಿಸುತ್ತೆ : ನಿಖಿಲ್ ತಿರುಗೇಟು

  • ಶಾಸಕ ಜಮೀರ್ ಅಹಮದ್ ಖಾನ್ ಅವರು ಆಡುವ ಮಾತುಗಳಿಂದಲೇ ಅವರ ಸಂಸ್ಕೃತಿ ತಿಳಿಯುತ್ತದೆ 
  •  ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು
  • ಮಾತನಾಡುವಾಗ ಎಚ್ಚರಿಕೆ ಇರಬೇಕು.  ಏಕವಚನದಲ್ಲಿ ಮಾತನಾಡಿ ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆಂದ ನಿಖಿಲ್
Nikhil Kumaraswamy Reacts On Zameer Ahmed Statement snr

 ರಾಮನಗರ (ಜೂ.12): ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರು ಆಡುವ ಮಾತುಗಳಿಂದಲೇ ಅವರ ಸಂಸ್ಕೃತಿ ತಿಳಿಯುತ್ತದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು. 

 ರಾಮನಗರದಲ್ಲಿ ಶುಕ್ರವಾರ ಮಾತನಾಡಿದ ಅವರು  ಮಾತನಾಡುವಾಗ ಎಚ್ಚರಿಕೆ ಇರಬೇಕು.  ಏಕವಚನದಲ್ಲಿ ಮಾತನಾಡಿ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೇವೆ ಎಂಬುದನ್ನು ಆಲೋಚನೆ ಮಾಡಲಿ ಎಂದರು.

ಬೆಂಗಳೂರಿನ ಮೇಕ್ರಿ ಸರ್ಕಲ್‌ನಲ್ಲಿರುವ ಮನೆಯನ್ನು ಕುಮಾರಸ್ವಾಮಿಯವರು ಗೆಸ್ಟ್ ಹೌಸ್ ರೀತಿ ಬಳಸುತ್ತಿದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆನಂತರ ನನ್ನ ಕಡೆ ಹುಡುಗರು ಅಲ್ಲಿ ವಾಸವಾಗಿದ್ದರು. ಅಲ್ಲಿ ನನಗೆ ಸೇರಿದ್ದ ಶೂಟಿಂಗ್ ಪರಿಕರಗಳು ಇದ್ದವು. ಅದು ಜಮೀರ್ ಅವರಿಗೆ ಸೇರಿದ್ದರಿಂದ ಮೂರು ನಾಲ್ಕು ದಿನಗಳ ಹಿಂದೆ ಖಾಲಿ ಮಾಡಿಕೊಡುವಂತೆ ಕೇಳಿದ್ದರು. 

ಗೆಸ್ಟ್‌ಹೌಸ್‌ ವಿಷಯಕ್ಕೆ ಎಚ್‌ಡಿಕೆ - ಜಮೀರ್‌ ಗಲಾಟೆ ...

ಅವರೇ ಬೀಗ ಒಡೆದು ಪರಿಕರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ನಮ್ಮ ಹುಡುಗರು ಕೇಳಿದ್ದಕ್ಕೆ ಕೇವಲ ಮಾತುಕತೆ ನಡೆದಿದೆ ಅಷ್ಟೆ. ಜಗಳವಾಗಲಿ ರಂಪಾಟವಾಗಲಿ ನಡೆದಿಲ್ಲ. ಈಗ ಅವರು ದೊಡ್ಡವರಾಗಿದ್ದಾರೆ, ಅವರ ವಸ್ತು ಕೇಳಿದ್ದಾರೆ ವಾಪಸ್ ನೀಡುತ್ತಿದ್ದೇವೆ ಎಂದು ನಿಖಿಲ್ ಉತ್ತರಿಸಿದರು.

Latest Videos
Follow Us:
Download App:
  • android
  • ios