ತುಮಕೂರು(ನ.18): ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹೇಳಿದ್ದಾರೆ. ಹೊನ್ನುಡಿಕೆ ಗ್ರಾಮದಲ್ಲಿ ‌ನಡೆದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರನೇ ಮುಂದಿನ ಮಖ್ಯಮಂತ್ರಿ ಎಂದು ಹೆಳಿದ್ದಾರೆ.

ಇಂದಿನ ರಾಜಕೀಯ ಪರಿಸ್ಥಿತಿ ಗಳನ್ನ ಗಮನಿಸಿದಾಗ ಕುಮಾರಸ್ವಾಮಿ ಅವರು ಎವರ್ ಗ್ರಿನ್ ಮುಖ್ಯಮಂತ್ರಿ. ಆದರ ನಾನು ವೈಯಕ್ತಿಕವಾಗಿ ಹೇಳೋದಾದ್ರೆ ನನ್ನ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ. ನಿಖಿಲ್ ಕುಮಾರಸ್ವಾಮಿ ಯುವಕರ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.

ನನ್ನ ಸೋಲಿಸೋಕೆ ಊಟ, ನಿದ್ದೆ ಬಿಟ್ಟು ಷಡ್ಯಂತ್ರ ಮಾಡಿದ್ರು: ನಿಖಿಲ್ ಕುಮಾರಸ್ವಾಮಿ

ಈ ದೇಶದಲ್ಲಿ ಟೀ ಮಾರಿದವರು ಪ್ರಧಾನಿಯಾಗಿದ್ದಾರೆ. ಹಾಗಿರುವಾಗ ರೈತರ ಸಾಲ ಮನ್ನಾ ಮಾಡಿರುವ ಕುಮಾರಣ್ಣ ಅವರನ್ನು ಏಕಚಕ್ರಾಧಿಪತಿ ಮಾಡಲು ಆಗಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.

ಇದು ನಮ್ಮ ಸವಾಲು, ನಾವು ತಯಾರಿದ್ದೇವೆ. ಕುಮಾರಣ್ಣನ ಒಳ್ಳೆತನ  ಕರ್ನಾಟಕ ರಾಜ್ಯದಲ್ಲಿ ಮತ್ತೆ ಗೆದ್ದೇ ಗೆಲ್ಲುತ್ತದೆ ಎಂದು ಅವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆ. ಆರ್. ಪೇಟೆ: ನಾಮಪತ್ರ ಸಲ್ಲಿಕೆ ಭರಾಟೆ ಜೋರು, ಮದ್ಯ ಮಾರಾಟಕ್ಕೆ ಬ್ರೇಕ್