ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕನಕಪುರಕ್ಕೆ ಭೇಟಿ ನೀಡಿ ವೈಕ್ತಿಕ ಹಣವನ್ನು ದೇಣಿಗೆ ನೀಡಿ ಬಂದಿದ್ದಾರೆ.
ಕನಕಪುರ (ಮಾ.16): ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಳವಾಡಿ ಹೋಬಳಿಯ ಹಲವು ದೇವಸ್ಥಾನಗಳಿಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಿಳಿಗನಕುಪ್ಪೆ ಗ್ರಾಮಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ, ಗ್ರಾಮ ದೇವತೆ ಶ್ರೀಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ವೈಯಕ್ತಿಕವಾಗಿ 50 ಸಾವಿರ ದೇಣಿಗೆ ನೀಡಿದರು.
ಯಲ್ಲಾಪುರದ ಅರಣ್ಯ ಸರಹದ್ದಿನಲ್ಲಿ ರೈಡರ್ 'ನಿಖಿಲ್'!
ಉಳಿದಂತೆ ತಟ್ಟೆಕೆರೆ ಗ್ರಾಮದ ಶ್ರೀಬಲಮುರಿ ಗಣಪತಿ ದೇವಸ್ಥಾನ, ಕೋಳಲಾಗೊಂದಿ ಗ್ರಾಮದ ಶ್ರೀ ಮಾರಮ್ಮ ದೇವಿ ದೇವಸ್ಥಾನ, ಜುಟ್ಟಿಗೌಡನದೊಡ್ಡಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ, ಅರೇಕದಕಲ್ಲು ಗ್ರಾಮದ ಶ್ರೀಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
