Bengaluru: ಪೀಣ್ಯ ಫ್ಲೈಓವರಲ್ಲಿ ವಾಹನಗಳಿಗೆ ನೈಟ್‌ ಕರ್ಫ್ಯೂ..!

*  ಮಧ್ಯರಾತ್ರಿ 12ರಿಂದ ಮುಂಜಾನೆ 5 ಗಂಟೆವರೆಗೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ 
 *  ನಡುರಾತ್ರಿ ವಾಹನಗಳು ವೇಗವಾಗಿ ಚಲಿಸುವ ಕಾರಣ ಭಾರೀ ವಾಹನಗಳ ಮಾರ್ಗ ಬದಲಾವಣೆ 
*  ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌. ರವಿಕಾಂತೇಗೌಡ ಆದೇಶ
 

Night curfew for vehicles in Peenya Flyover in Bengaluru grg

ಬೆಂಗಳೂರು(ಮಾ.13):  ಬೆಂಗಳೂರು-ತುಮಕೂರು ಹೆದ್ದಾರಿಯ ಪೀಣ್ಯ ಮೇಲ್ಸೇತುವೆಯಲ್ಲ(Peenya Flyover) ಮತ್ತೆ ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 5ರ ತನಕ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ವಾಹನ ಸಂಚಾರ ನಿರ್ಬಂಧ ಕುರಿತು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌. ರವಿಕಾಂತೇಗೌಡ ಆದೇಶಿಸಿದ್ದಾರೆ.

ಪೀಣ್ಯ ಮೇಲ್ಸೇತುವೆಯ ಪಿಲ್ಲರ್‌ ಸಂಖ್ಯೆ 102 ಮತ್ತು 103ರ ಮಧ್ಯೆ ಅಳವಡಿಸಿರುವ ಕೇಬಲ್‌ ದುರಸ್ತಿ ಕಾರ್ಯದ(Cable Repair Work) ಹಿನ್ನೆಲೆಯಲ್ಲಿ ಕಳೆದ ಡಿ.25ರಿಂದ ಮೇಲ್ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(National Highway Authority) ಮೊದಲ ಹಂತದ ದುರಸ್ತಿ ಮುಗಿಸಿದ್ದು, ಎರಡನೇ ಹಂತದ ದುರಸ್ತಿ ಕಾರ್ಯಕ್ಕೆ ಇನ್ನೂ ಐದಾರು ತಿಂಗಳ ಕಾಲಾವಕಾಶ ಕೇಳಿದೆ.

Peenya Flyover ಸಂಚಾರಕ್ಕೆ ಸುರಕ್ಷಿತವಲ್ಲ: ಸಿಎಂ ಬೊಮ್ಮಾಯಿ

ಈ ನಡುವೆ ಫೆ.16ರಿಂದ ಈ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ರಾತ್ರಿ ವೇಳೆ ವಾಹನಗಳು ಬಹಳ ವೇಗವಾಗಿ ಚಲಿಸುವುದರಿಂದ ಮೇಲ್ಸೇತುವೆ ವಿಡಿಯಾ ಅಪ್ಪರ್‌ ರಾರ‍ಯಂಪ್‌ ಮತ್ತು ಎಸ್‌ಆರ್‌ಎಸ್‌ ಅಪ್ಪರ್‌ ರಾರ‍ಯಂಪ್‌ ಬಳಿ ಭಾರೀ ವಾಹನಗಳ ಮಾರ್ಗ ಬದಲಾವಣೆ ಅತ್ಯಂತ ಕಷ್ಟಕರವಾಗಿದೆ. ಈಗಾಗಲೇ ಮೇಲ್ಸೇತುವೆಯ ಎರಡೂ ಕಡೆ ಭಾರೀ ವಾಹನಗಳು ಮೇಲ್ಸೇತುವೆ ಪ್ರವೇಶಿಸಲು ಯತ್ನಿಸಿ ಹೈಟ್‌ ರಿಸ್ಟ್ರಿಕ್ಷನ್‌ ಗ್ಯಾಂಟ್ರಿ(ಕಬ್ಬಿಣದ ಕಮಾನು)ಗೆ ಡಿಕ್ಕಿ ಹೊಡೆದು ಆ ಗ್ಯಾಂಟ್ರಿಗಳು ಬಾಗಿವೆ.

ಮೇಲ್ಸೇತುವೆಯಲ್ಲಿ ರಾತ್ರಿ ವೇಳೆ ಭಾರೀ ವಾಹನಗಳು(Vehicles) ಹಾಗೂ ಲಘು ವಾಹನಗಳನ್ನು ಪ್ರತ್ಯೇಕಿಸಿ ಕಳುಹಿಸುವುದು ಸಂಚಾರ ಪೊಲೀಸರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಭಾರೀ ವಾಹನಗಳ ತಡೆಗೆ ಅಳವಡಿಸಿದ್ದ ಗ್ಯಾಂಟ್ರಿ ಪದೇ ಪದೆ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ಮಧ್ಯರಾತ್ರಿ 12ರಿಂದ ಮುಂಜಾನೆ 5 ಗಂಟೆವರೆಗೆ ಎಲ್ಲಾ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರ್ಯಾಯ ವ್ಯವಸ್ಥೆ:

* ಕೆನ್ನಮೆಟಲ್‌ ವೀಡಿಯಾ ಅಪ್ಟರ್‌ ರಾರ‍ಯಂಪ್‌ನಿಂದ ಎಸ್‌ಆರ್‌ಎಸ್‌ ಡೌನ್‌ ರಾರ‍ಯಂಪ್‌ ಕಡೆಗೆ ಸಾಗುವ ವಾಹನಗಳು ಕೆನ್ನಮೆಟಲ್‌ ವಿಡಿಯಾದಿಂದ ಸವೀರ್‍ಸ್‌ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, ಪೀಣ್ಯ ಪೊಲೀಸ್‌ ಠಾಣೆ ವೃತ್ತ, ಎಸ್‌ಆರ್‌ಎಸ್‌ ಜಂಕ್ಷನ್‌ ಮೂಲಕ ಗೊರಗುಂಟೆ ಪಾಳ್ಯ ತಲುಪಬಹುದು.

* ಅದೇ ರೀತಿಯಲ್ಲಿ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್‌ ವಿಡಿಯಾ ತಲುಪಲು ಸರ್ವೀಸ್ ರಸ್ತೆಯಲ್ಲಿ ಎಸ್‌ಆರ್‌ಎಸ್‌ ಜಂಕ್ಷನ್‌, ಪೀಣ್ಯ ಪೊಲೀಸ್‌ ಠಾಣೆ ವೃತ್ತ, ಜಾಲಹಳ್ಳಿ ಕ್ರಾಸ್‌, ದಾಸರಹಳ್ಳಿ , 8ನೇ ಮೈಲಿ ಮೂಲಕ ಸಂಚರಿಸಬಹುದು.
* ಗೊರಗುಂಟೆ ಪಾಳ್ಯದಿಂದ ಮೇಲ್ಸೇತುವೆ ಮೂಲಕ ಸಾಗುವ ವಾಹನಗಳು ವರ್ತುಲ ರಸ್ತೆ ಮೂಲಕ ಸಾಗಲು ಹಾಗೂ ತುಮಕೂರು ಕಡೆಯಿಂದ ಬೆಂಗಳೂರು ನಗರ ಪ್ರವೇಶಿಸುವ ವಾಹನಗಳು ಮಾದಾವರ ಬಳಿ ನೈಸ್‌ ರಸ್ತೆ ಮೂಲಕ ಬೆಂಗಳೂರು ನಗರಕ್ಕೆ ಆಗಮಿಸಬಹುದಾಗಿದೆ.

Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

ಪೀಣ್ಯ ಫ್ಲೈಓವರ್‌ ಟೆಸ್ಟ್‌ಗೇ 9 ತಿಂಗಳು ಬೇಕು..!

ಪೀಣ್ಯ ಮೇಲ್ಸೇತುವೆಯಲ್ಲಿ(Peenya Flyover) ಲಘು ವಾಹನ ಸಂಚಾರಕ್ಕೆ ಸಮಸ್ಯೆಯಿಲ್ಲ. ಆದರೆ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಿಗಬೇಕೆಂದರೆ ಇನ್ನಷ್ಟು ವಿಸ್ತೃತ ಪರೀಕ್ಷೆ ನಡೆಸಬೇಕು. ಇದಕ್ಕೆ 6ರಿಂದ 9 ತಿಂಗಳು ಸಮಯಾವಕಾಶ ಬೇಕಾಗುವುದರಿಂದ ಅಲ್ಲಿಯವರೆಗೂ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಸಿಗುವುದಿಲ್ಲ.

ಮೇಲ್ಸೇತುವೆ(Flyover) ಹೆಚ್ಚು ಭಾರವನ್ನು ತಡೆದುಕೊಳ್ಳುತ್ತದೆಯೇ, ಬಾಗಿರುವ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕೇ, ಪಿಲ್ಲರ್‌ಗಳ ಸಮಸ್ಯೆಯಿಲ್ಲವೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಬೇಕಿದೆ. ರಾಸಾಯನಿಕ ವಿಶ್ಲೇಷಣೆ, ನಿರ್ಮಾಣ ಮತ್ತು ವಿಫಲತೆ ಪರೀಕ್ಷೆಯನ್ನೂ(Test) ನಡೆಸಬೇಕಾಗಿದ್ದು, ಇದಕ್ಕೆ ಸಮಯಾವಕಾಶ ಬೇಕಿರುವುದರಿಂದ ಭಾರೀ ವಾಹನ ಸಂಚಾರಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕಿದೆ. ಒಂದೊಮ್ಮೆ ಕೇಬಲ್‌ ಬದಲಿಸಿದರೆ ಸಾಕೇ ಅಥವಾ ಪಿಲ್ಲರ್‌ಗಳನ್ನೇ ಬದಲಿಸಬೇಕೇ ಅಥವಾ ಪೂರ್ಣ ಪ್ರಮಾಣದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್‌ ಹಾಕಬೇಕೇ ಎಂಬ ಬಗ್ಗೆ ತಜ್ಞರ ತಂಡ ಸುಧೀರ್ಘವಾಗಿ ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಲಿದೆ.
 

Latest Videos
Follow Us:
Download App:
  • android
  • ios