ಉಡುಪಿ (ಆ.15): ಕೇಂದ್ರ ಮತ್ತು ರಾಜ್ಯ ಹವಾಮಾನ ಇಲಾಖೆಗಳು ಆ.15ರಿಂದ 19ರ ವರೆಗೆ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. 

ಈ ದಿನಗಳಲ್ಲಿ 65 ಮಿ.ಮೀ.ಗೂ ಮಿಕ್ಕಿ ಮಳೆಯಾಗುವ ಸಾಧ್ಯತೆ ಎಂದು ಎಚ್ಚರಿಕೆ ನೀಡಲಾಗಿದೆ.

ಶುಕ್ರವಾರ ಜಿಲ್ಲೆಯಲ್ಲಿ ಮಳೆಯಾಗಿಲ್ಲ, ದಿನವಿಡೀ ಬಿಸಿಲಿನ ವಾತಾವರಣವಿತ್ತು, ಆದರೆ ಗುರುವಾರ ರಾತ್ರಿ ಸ್ವಲ್ಪಪ್ರಮಾಣದಲ್ಲಿ ಮಳೆಯಾಗಿತ್ತು. ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ವ್ಯಾಪಕ ಮಳೆ: ತುಂಗಭದ್ರಾ ಭರ್ತಿಗೆ ಕ್ಷಣಗಣನೆ...

ಬೈಂದೂರು ತಾಲೂಕಿನ ನಾಡ ಗ್ರಾಮದ ರತ್ನಾ ಅನಂತ ಅವರ ಮನೆಗೆ 40 ಸಾವಿರ ರು., ಹಡವು ಗ್ರಾಮದ ಬಾಬು ದೇವಾಡಿಗ ಅವರ ಮನೆಗೆ 25 ಸಾವಿರ ರು., ಶಿರೂರು ಗ್ರಾಮದ ಗೋವಿಂದ ಮೇಸ್ತ ಅವರ ದನದ ಕೊಟ್ಟಿಗೆಗೆ 25 ಸಾವಿರ ರು., ಬೈಂದೂರು ತಾಲೂಕಿನ ಶಿರೂರು ಗ್ರಾಮದ ಜಯಂತಿ ಮೇಸ್ತ ಅವರ ಮನೆಗೆ 40 ಸಾವಿರ ರು., ಕೊಲ್ಲೂರು ಗ್ರಾಮದ ಶೀಲಾ ಶಿವಕುಮಾರ ಅವರ ಮನೆಗೆ 40 ಸಾವಿರ ರು, ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಯಶೋದಾ ಸೋಮ ನಾಯಕ್‌ ಅವರ ವಾಸ್ತವ್ಯದ ಮನೆಯ ಗೋಡೆ ಗಾಳಿಮಳೆಗೆ ಕುಸಿದು ಭಾಗಶಃ ಹಾನಿಯಾಗಿ 20 ಸಾವಿರ ರು.ನಷ್ಟವಾಗಿದೆ. 

ಕೆಆರ್‌ಎಸ್ ಭರ್ತಿಗೆ ಒಂದೇ ಅಡಿಯಷ್ಟೇ ಬಾಕಿ ...

ಶುಕ್ರವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಕೇವಲ 8 ಮಿ.ಮೀ.ನಷ್ಟುಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 8 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 7 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 10 ಮಿ.ಮೀ. ನಷ್ಟುಮಳೆ ಆಗಿದೆ.