ಕೆಆರ್‌ಎಸ್ ಭರ್ತಿಗೆ ಒಂದೇ ಅಡಿಯಷ್ಟೇ ಬಾಕಿ

KRS ಜಲಾಶಯ ಭರ್ತಿಯಾಗುತ್ತಿದ್ದು ಸಂಪೂರ್ಣ ತುಂಬಲು ಇನ್ನು ಒಂದು ಅಡಿಯಷ್ಟೇ ಬಾಕಿ ಉಳಿದಿದೆ. ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ.

KRS Dam fills 123 feets Due to good Monsoon Rain

ಮಂಡ್ಯ (ಆ.14) : ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಕೇವಲ 7 ದಿನಗಳ ಅಂತರದಲ್ಲಿ 15 ಅಡಿಗೂ ಹೆಚ್ಚು ನೀರು ಹರಿದುಬಂದಿದ್ದು ಇದೀಗ ಜಲಾಶಯ ಭರ್ತಿಗೆ ಇನ್ನು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಗರಿಷ್ಠ 12.80 ಅಡಿ ಇರುವ ಜಲಾಶಯದಲ್ಲಿ ಪ್ರಸ್ತುತ 123.82 ಅಡಿ ದಾಖಲಾಗಿದೆ.

ದಾಖಲೆಯ ಮಳೆ: ಮುಂಗಾರಲ್ಲಿ ಮುಳುಗಿದ ಭಾರತ..!...

ಅಣೆಕಟ್ಟೆಗೆ 16180 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 3807 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 48.090 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೆಆರ್‌ಎಸ್‌ ಜಲಾಶಯ ಆ.17ರಂದು ಭರ್ತಿಯಾಗಿತ್ತು. ತುಂಬಿದ ಕಾವೇರಿಗೆ ಆ.29ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಗಿನ ಸಮರ್ಪಿಸಿದ್ದರು. ಈ ವರ್ಷ ಇನ್ನಷ್ಟುಶೀಘ್ರವಾಗಿ ಜಲಾಶಯ ಭರ್ತಿಯಾಗಿರುವುದು ಎಲ್ಲರಲ್ಲೂ ಮಂದಹಾಸ ಮೂಡಿಸಿದೆ.

ನೊರೆ ಹಾಲಿನಂತ ಜಲಧಾರೆ, ಮಳೆಗಾಲದಲ್ಲಿ ಮೈದುಂಬಿ ನಿಂತ ಕಲ್ಲೇರಿಮೂಲೆ ಜಲಪಾತ

ಈ ವರ್ಷ ಜು.8ರ ವೇಳೆಗೆ 100 ಅಡಿ ತಲುಪಿದ್ದ ಕೆಆರ್‌ಎಸ್‌ ನೀರಿನ ಮಟ್ಟಹಂತ ಹಂತವಾಗಿ ತುಂಬುತ್ತಾ ಬಂದಿತ್ತು. ಆ.5 ರಿಂದ ಆ.10ರವರೆಗೆ ಕೊಡಗು ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರೀ ವರ್ಷಧಾರೆಯಾಗಿದೆ.

Latest Videos
Follow Us:
Download App:
  • android
  • ios