Asianet Suvarna News Asianet Suvarna News

ವ್ಯಾಪಕ ಮಳೆ: ತುಂಗಭದ್ರಾ ಭರ್ತಿಗೆ ಕ್ಷಣಗಣನೆ

ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಾಗುತ್ತಿದೆ. ತುಂಗಭದ್ರಾ ಜಲಾಶಯ ತುಂಬಲು ಕ್ಷಣಗಣನೆ ಆರಂಭವಾಗಿದೆ.

Heavy Monsoon Rain Tungabhadra Dam Filled Up
Author
Bengaluru, First Published Aug 15, 2020, 10:00 AM IST

ಮುನಿರಾಬಾದ್‌ (ಆ.15): ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದಿದೆ.

ಜಲಾಶಯ ಇನ್ನು 2ರಿಂದ 3 ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ. 1633 ಅಡಿ ಗರಿಷ್ಠಮಟ್ಟಇರುವ ಜಲಾಶಯದಲ್ಲಿ ಶುಕ್ರವಾರದಂದು ನೀರಿನ ಮಟ್ಟ1630.63 ಅಡಿಗೇರಿದೆ.

ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ...

ಪ್ರಸ್ತುತ 51177 ಕ್ಯು.ಒಳಹರಿವು ಇದ್ದು ಸಂಪೂರ್ಣ ಭರ್ತಿಯಾಗಲು ಕೇವಲ 2 ಅಡಿ ನೀರಿನ ಅವಶ್ಯಕತೆ ಇದೆ. ಪ್ರತಿವರ್ಷ ಅಗಸ್ಟ್‌ 2ನೇ ವಾರದಲ್ಲಿ ತುಂಗಭದ್ರಾ ಜಲಾಶಯವು ಭರ್ತಿಯಾಗುತ್ತದೆ.

ಹಾಗೂ ಅಗಸ್ಟ್‌ 15 ರಂದು ಜಲಾಶಯದ ಎಲ್ಲ 33 ಗೇಟುಗಳ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ಇನ್ನೂ 2 ಅಡಿಗಳಷ್ಟುನೀರು ಬರಬೇಕು. ಹಾಗೂ ಇನ್ನೂ 9 ಟಿಎಂಸಿ ಯಷ್ಟುನೀರು ಸಂಗ್ರಹವಾಗಬೇಕಿದೆ.

Follow Us:
Download App:
  • android
  • ios