ಫೇಸ್‌ಬುಕ್‌ ಲವ್‌, ಮದುವೆ: ನವವಿವಾಹಿತೆ ಸಾವು, ಕೊಲೆ ಆರೋಪ

  •  ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಮದುವೆಯಾದ ಏಳು ತಿಂಗಳಲ್ಲೇ ಯುವತಿ ಸಾವು
  • ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿರುವ ಯುವತಿ ಶವ
  • ಆತ್ಮಹತ್ಯೆಯಲ್ಲ, ಕೊಲೆ ಎಂದು ಯುವತಿ ಕುಟುಂಬದ ಆರೋಪ
Newly Married girl suspected Death In Shivamogga snr

ಹೊಸನಗರ (ಜೂ.28): ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಮದುವೆಯಾದ ಏಳು ತಿಂಗಳಲ್ಲೇ ಯುವತಿಯೊಬ್ಬಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿರುವ ಘಟನೆ ಇಲ್ಲಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ. ಯುವಕ ಮತ್ತು ಆತನ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆಂದು ಯುವತಿ ಕುಟುಂಬಸ್ಥರು ಪೊಲೀಸರು ದೂರು ನೀಡಿದ್ದಾರೆ.

ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದ ಶಿಕ್ಷಕ, ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ ಕೆಲಸ .

ಸೌಂದರ್ಯ (21) ಮೃತ ರ್ದುದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗೋಳಗೂಂಡ ಗ್ರಾಮದ ಸೌಂದರ್ಯ ಮತ್ತು ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿಯ ಉಮೇಶ್‌ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಂತರ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಆದರೆ, ಮದುವೆಯಾಗಿ 7 ತಿಂಗಳಲ್ಲೇ ಸೌಂದರ್ಯಳ ಶವ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳಿಗೆ ಆಕೆಯ ಗಂಡ, ಮನೆಯವರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಾಜಿ ಬಾಯ್‌ಫ್ರೆಂಡ್ ಮದುವೆಯಾಬೇಕಿದ್ದವಳ ನಗ್ನ ಪೋಟೋ ಶೇರ್ ಮಾಡಿದಳು! ...

ಇದೀಗ ಮಗಳನ್ನು ಕೊಲೆ ಮಾಡಿ ಶವವನ್ನು ಫ್ಯಾನಿಗೆ ನೇತು ಹಾಕಲಾಗಿದೆ ಎಂದು ಸೌಂದರ್ಯಳ ತಂದೆ ಉದಯ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios