Asianet Suvarna News Asianet Suvarna News

ಪ್ರೀತಿಸಿ ನಿಖಾ ಆದವರಿಗೆ ಹುಡುಗಿ ಕುಟುಂಬಸ್ಥರಿಂದ ಜೀವಭಯ: ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಲವ್‌ ಬರ್ಡ್ಸ್..!

ಪ್ರೀತಿಗೆ ಮನೆಯವರು ಒಪ್ಪದೆ ಇದ್ದಾಗ ಓಡಿ ಹೋಗಿ ನಿಖಾ ಆಗಿದ್ದರು. ಆದ್ರೀಗ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದ್ದು, ರಕ್ಷಣೆಗಾಗಿ ವಿಜಯಪುರ ಎಸ್ಪಿ ಮೊರೆ ಹೋಗಿದ್ದಾರೆ. 

Newly Married Couple Request to Police for Protection in Vijayapura grg
Author
First Published Nov 17, 2023, 10:15 PM IST

ವಿಜಯಪುರ(ನ.17):  ಅವನು ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕ್ಯಾನಿಕ್‌ ಆಗಿದ್ದವನು, ಅವಳು ಬಿಫಾರ್ಮಸಿ ಮುಗಿಸಿ ಇನ್ನೇನು ಒಳ್ಳೆಯ ಜಾಬ್‌ಗೆ ಸೇರ್ಬೇಕಿತ್ತು. ಎದುರು ಬದರು ಮನೆಯಲ್ಲಿದ್ದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇವರ ಪ್ರೀತಿಗೆ ಮನೆಯವರು ಒಪ್ಪದೆ ಇದ್ದಾಗ ಓಡಿ ಹೋಗಿ ನಿಖಾ ಆಗಿದ್ದರು. ಆದ್ರೀಗ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದ್ದು, ರಕ್ಷಣೆಗಾಗಿ ವಿಜಯಪುರ ಎಸ್ಪಿ ಮೊರೆ ಹೋಗಿದ್ದಾರೆ. 

ತಾಳಿಕೋಟೆಯ ಪ್ರೇಮಿಗಳಿಗೆ ಜೀವಭಯ..!

ಈ ಫೋಟೋದಲ್ಲಿ ಇರೋರ ಹೆಸ್ರು ಇಸಾಕ್‌ ಜನ್ನಳ್ಳಿ ಹಾಗೂ ಲತಾ(ಹೆಸರು ಬದಲಾಯಿಸಲಾಗಿದೆ) ಅಂತಾ.. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಂಬಾವಿ ಕಾಲೋನಿ ನಿವಾಸಿಗಳು. ಪ್ರೀತಿಸಿ ಮದುವೆಯಾಗಿರೋ ಇವರಿಗೆ ಲತಾ ಕುಟುಂಬದಿಂದ ಜೀವ ಭಯವಿದೆಯಂತೆ. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತಾ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮೊರೆ ಹೋಗಿದ್ದಾರೆ. ಪರಸ್ಪರ ಮೆಚ್ಚಿ ಪ್ರೀತಿ ಮಾಡಿದ್ದಾರೆ. ಇಬ್ಬರಿಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ಇದ್ದರು, ಸಹ ಯುವತಿ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ಪ್ರೇಮಿಗಳಿಬ್ಬರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ‌‌.

ವಿಜಯಪುರದಲ್ಲಿ ಭೀಕರ ಬರ: ಫೀಲ್ಡಿಗಿಳಿದ ಸಚಿವ ಎಂ.ಬಿ.ಪಾಟೀಲ್..!‌

ಮನೆ ಬಿಟ್ಟು ಬಂದು ನಿಖಾ ಆಗಿರೋ ಜೋಡಿ..!

ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡ್ತಿದ್ದ ಇವರು ಕಳೆದ ಕೆಲ ದಿನಗಳ ಹಿಂದೆ ಮನೆಯಿಂದ ಓಡಿ ಬಂದು ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಆದ್ರೀಗ ಮನೆಯವರಿಂದ ಬೆದರಿಕೆ ಕರೆ ಬರ್ತಿವೆಯಂತೆ, ಇಬ್ಬರನ್ನು ಮುಗಿಸಿ ಬಿಡುವುದಾಗಿ ಲತಾ ತಂದೆ ಸೇರಿದಂತೆ ಕುಟುಂಬದವರು ಧಮ್ಕಿ ಹಾಕ್ತಿದ್ದಾರಂತೆ. ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ.

ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ: ಗೋವಿಂದ ಕಾರಜೋಳ

ಎದುರು ಮನೆಯಲ್ಲಿ ಅರಳಿದ ಪ್ರೀತಿಗೆ ಅಡ್ಡಿ ಆಗಲಿಲ್ಲ‌ ಶಿಕ್ಷಣ, ..!

ತಾಳಿಕೋಟೆಯ ಕೆಂಬಾವಿ ಕಾಲೋನಿಯಲ್ಲಿ ಇಸಾಕ್‌ ಅಜ್ಜ-ಅಜ್ಜಿ ಇರ್ತಾರೆ, ಎದುರಲ್ಲೆ ಲತಾ ಮನೆ ಇದೆ. ಇಸಾಕ್‌ ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕಾನಿಕಲ್‌ ಕೆಲ್ಸಾ ಮಾಡ್ತಿದ್ದಾನೆ. ಲತಾ ಈಗಷ್ಟೇ ಬೀ ಪಾರ್ಮಸಿ ಓದು ಮುಗಿಸಿದ್ದು ಜಾಬ್‌ ಸಿಗೋವ ಭರವಸೆಯಲ್ಲಿದ್ದಾಳೆ. ಪ್ರೀತಿಗೆ ಕಣ್ಣಿಲ್ಲ ಅನ್ನೋ ಹಾಗೇ ಇಬ್ಬರ ಶಿಕ್ಷಣ, ಕೌಟುಂಬಿಕ ಹಿನ್ನಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರು ಇಬ್ಬರು ಪ್ರೀತಿಸಿ ಈಗ ಮದುವೆಯನ್ನು ಮಾಡಿಕೊಂಡಿದ್ದಾರೆ.

ಯುವತಿ ಕುಟುಂಬದಿಂದಲೇ ಜೀವ ಬೆದರಿಕೆ ಆರೋಪ..!

ತಾಳಿಕೋಟೆಯಲ್ಲಿರುವ ಲತಾಳ ಡೋಣಿ ಕುಟುಂಬಸ್ಥರು ಶ್ರೀಮಂತರಿದ್ದು, ಪ್ರಭಾವಿಗಳಾಗಿದ್ದಾರೆ. ಲತಾ ಕಿಡ್ನಾಪ್‌ ಆಗಿದೆ ಎಂದು ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರಿಂದ ಇಸಾಕ್‌ ಅಜ್ಜ-ಅಜ್ಜಿಗೆ ಟಾರ್ಚರ್ ಕೊಡಿಸ್ತಿದ್ದಾರಂತೆ. ಸಧ್ಯ ಪ್ರೀತಿ ಮದುವೆಯಾಗಿರೋ ಇಬ್ಬರಿಗೂ ಹುಡುಗಿ ಕುಟುಂಬಸ್ಥರಿಂದ ಜೀವಭಯ ಕಾಡ್ತಿದೆ. ಡೋಣಿ ಕುಟುಂಬದವರು ಪ್ರಭಾವಿಗಳು ಆಗಿರೋದ್ರಿಂದ ಏನಾದ್ರೂ ಮಾಡಿ ಬಿಟ್ಟಾರು ಎನ್ನುವ ಭಯ ಹುಡುಗನ ಕುಟುಂಬಸ್ಥರಲ್ಲಿದೆ. ನಮಗೆ ನ್ಯಾಯ ಬೇಕು ಅಂತ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ್ದಾರೆ. 

Follow Us:
Download App:
  • android
  • ios