ವಿವಾಹವಾಗಿರುವ ಯುವ ಪ್ರೇಮಿಗಳಿಬ್ಬರು ಇದೀಗ ತಮ್ಮ ಕುಟುಂಬದಿಂದ ತಮಗೆ ರಕ್ಷಣೆ ಬೇಕೆಂದು ಮನವಿ ಮಾಡಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನ [ನ.29]: ಕೆಲ ದಿನಗಳ ಹಿಂದಷ್ಟೇ ಕುರಿಗಾಹಿಯೊಂದಿಗೆ ಸ್ನಾತಕೋತ್ತರ ಪದವೀಧರೆ ವಿವಾಹವಾದ ಬೆನ್ನಲ್ಲೇ ಇದೀಗ ಇಲ್ಲೊಂದು ಜೋಡಿ ಪೋಷಕರ ವಿರೋಧದ ನಡುವೆ ವಿವಾಹವಾಗಿ ರಕ್ಷಣೆಗೆ ಮನವಿ ಮಾಡಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಪ್ರೇಮಿಗಳು ತಾವು ಒಂದೂವರೆ ವರ್ಷದಿಂದ ಪ್ರೀತಿ ಮಾಡಿ ವಿವಾಹವಾಗಿದ್ದು, ಇದೀಗ ತಮಗೆ ಮನೆಯವರಿಂದ ಬೆದರಿಕೆ ಇದೆ. ಈ ನಿಟ್ಟಿನಲ್ಲಿ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಹಾಸನದ ಯುವತಿ ಇಲ್ಲಿನ ರಾಕೇಶ್ ಜೊತೆ ವಿವಾಹವಾಗಿದ್ದು ನಮಗೆ ನಮ್ಮ ಕುಟುಂಬದವರಿಂದ ರಕ್ಷಣೆ ಬೇಕಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ವಿವಾಹದ ನೋಂದಣಿ ಪತ್ರವನ್ನು ತೋರಿಸಿದ್ದು, ಮನೆಯವರ ಭಯದಿಂದ ನಮಗೆ ನೆಮ್ಮದಿಯಾಗಿ ಬದುಕಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. 

ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!...

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ಇದೀಗ ಪ್ರೇಮಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಚಿತ್ರದುರ್ಗದಲ್ಲಿಯೂ ಕೂಡ ಕುರಿಗಾಹಿಯೊಂದಿಗೆ ಸ್ನಾತಕೋತ್ತರ ಪದವೀಧರೆ ವಿವಾಹವಾಗಿದ್ದಳು. ಕುರಿಕಾಯುತ್ತಿರುವ ಜಾಗದಲ್ಲಿಯೇ ಸಿನಿಮೀಯ ರೀತಿಯಲ್ಲಿ ವಿವಾಹ ನಡೆದಿತ್ತು. ಇದೀಗ ಮತ್ತೊಂದು ಪ್ರೇಮಿಗಳ ವಿಡಿಯೋ ವೈರಲ್ ಆಗಿದೆ. 

"