Asianet Suvarna News Asianet Suvarna News

ಮದ್ಯ ವಹಿವಾಟಿಗೆ ಶುಕ್ರದೆಸೆ! ಮಾರಾಟ ಹೆಚ್ಚಳ

ಹೊಸ ವರ್ಷದ ಸಂದರ್ಭದಲ್ಲಿ ಮದ್ಯ ಮಾರಾಟ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸಾಮಾನ್ಯಕ್ಕಿಂತ ಹೊಸ ವರ್ಷಕ್ಕೆ ಕೊಳ್ಳುವವರ ಸಂಖ್ಯೆ ಹೆಚ್ಚಳವಾಗಲಿದೆ.

New Year 2020 Liquor Sale May increase In Bengaluru
Author
Bengaluru, First Published Dec 31, 2019, 9:06 AM IST
  • Facebook
  • Twitter
  • Whatsapp

ಬೆಂಗಳೂರು [ಡಿ.31]:  ಈ ಬಾರಿ ಹೊಸ ವರ್ಷದ ವೇಳೆ ಹೊಟೇಲ್‌, ರೆಸ್ಟೋರೆಂಟ್‌, ಶಾಪಿಂಗ್‌ ಹಾಗೂ ಪಾರ್ಟಿಗಳು ಸೇರಿದಂತೆ ಎಲ್ಲ ರೀತಿಯ ವಹಿವಾಟು ಕುಸಿತ ಕಾಣುವ ಲಕ್ಷಣ ತೋರಿರಬಹುದು. ಆದರೆ, ಮದ್ಯ ಮಾರಾಟದಲ್ಲಿ ಮಾತ್ರ ಅಂತಹ ಟ್ರೆಂಡ್‌ ಇಲ್ಲ. ಈ ಬಾರಿಯೂ ರಾಜ್ಯದಲ್ಲಿ ಮದ್ಯ ಮಾರಾಟ ವರ್ಷಾಂತ್ಯದ ವೇಳೆ ಶೇ.15ರಿಂದ 20ರಷ್ಟುಹೆಚ್ಚಾಗುವ ಅಂದಾಜು ಇದೆ.

ಬೆಂಗಳೂರು ನಗರದಲ್ಲಿಯೇ 70ರಿಂದ 80 ಪಬ್‌ಗಳು, ಬಾರ್‌ 15ರಿಂದ 20 ಬಾರ್‌ಗಳು ಹೆಚ್ಚಳವಾಗಿವೆ. ಇನ್ನು ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಸಹಜವಾಗಿಯೇ ಶೇ.15ರಿಂದ 20 ರಷ್ಟುಆದಾಯ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ವ್ಯಾಪಾರ ಇಳಿಕೆ ಸಾಧ್ಯತೆಯಿದ್ದರೂ ಮದ್ಯದ ಆದಾಯ ಮಾತ್ರ ಹೆಚ್ಚಳ ಹೇಗೆ ಸಾಧ್ಯ ಎಂದರೆ, ಇತ್ತೀಚಿಗೆ ಜನರು ಮದ್ಯ ಸೇವನೆಯನ್ನು ತಮ್ಮ ಮನೆಗಳಲ್ಲೇ ಮಾಡುವ ಧೋರಣೆ ಬೆಳೆಸಿಕೊಂಡಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಬಂಟ್ಸ್‌ ಹೋಟೆಲ್‌ ಸಂಘದ ಅಧ್ಯಕ್ಷ ಮಧುಕರ್‌ ಶೆಟ್ಟಿ. ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ, ಒಟ್ಟಾರೆ ವಹಿವಾಟು ತೆಗೆದುಕೊಂಡರೆ ಸರ್ಕಾರಕ್ಕೆ ಉತ್ತಮ ಆದಾಯವೇ ಬರಲಿದೆ ಎಂದು ಅವರು ವಿವರಿಸುತ್ತಾರೆ.

ಕಳೆದ ವರ್ಷ 360 ಕೋಟಿ ರು. ವಹಿವಾಟು:

2018ರ ಕೊನೆಯ ಒಂದು ವಾರ (ಡಿ.25ರಿಂದ 31) ಅವಧಿಯಲ್ಲಿ 360 ಕೋಟಿ ರು. ವಹಿವಾಟು ನಡೆದಿತ್ತು. ಈ ವಹಿವಾಟು ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ದೊಡ್ಡ ಮೊತ್ತದ ವಹಿವಾಟು ನಡೆದಿತ್ತು. ಅಂದರೆ 2017ರಲ್ಲಿ ಕೊನೆಯ ಒಂದು ವಾರದಲ್ಲಿ 302 ಕೋಟಿ ರು., 2016ರಲ್ಲಿ 306 ಕೋಟಿ ರು. ವಹಿವಾಟು ನಡೆದಿತ್ತು. ಹೀಗಾಗಿ ಸುಮಾರು 58 ಕೋಟಿ ರು. ವಹಿವಾಟು ಹೆಚ್ಚಳವಾಗಿತ್ತು. ಆದ್ದರಿಂದ ಇದಕ್ಕೆ ಹೋಲಿಸಿಕೊಂಡಲ್ಲಿ ಶೇ.15ರಿಂದ 20ರಷ್ಟುಅಂದರೆ ಈ ಬಾರಿ ಅಂದಾಜು 400 ರಿಂದ 420 ಕೋಟಿ ವಹಿವಾಟು ಅಂದಾಜಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ..

ಬಿಯರ್‌ ಮಾರಾಟ ಹೆಚ್ಚಳ ನಿರೀಕ್ಷೆ :  2017ರಲ್ಲಿ ಕೊನೆಯ ಒಂದು ವಾರದಲ್ಲಿ 12.34 ಲಕ್ಷ ಕೇಸ್‌ (ಮದ್ಯ) ಹಾಗೂ 11.59 ಲಕ್ಷ ಬಿಯರ್‌ ಮತ್ತು 2018ರಲ್ಲಿ ವರ್ಷದ ಕೊನೆಯ ಮೂರು ದಿನಗಳಲ್ಲಿ 16.15 ಲಕ್ಷ ಕೇಸ್‌ (ಮದ್ಯ) ಹಾಗೂ 12.01 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿತ್ತು. ಈ ಬಾರಿ ಶೇ.15ರಷ್ಟುಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios