ದೇಗುಲ ಧ್ವಂಸ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಶಾಸಕ

  • ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ
  • ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಇದೀಗ ದೇವಾಲಯ ತೆರವು ವಿಚಾರ ತಿರುವು ಪಡೆದುಕೊಂಡಿದೆ
New Twist for Huchagani Mahadevamma temple demolition snr

ಮೈಸೂರು (ಸೆ.29) : ಹುಚ್ಚಗಣಿ ಮಹದೇವಮ್ಮ ದೇವಾಲಯ (Huchchagani Mahadevamma Temple ) ತೆರವು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.  ದೇವಾಲಯ ತೆರವು ಮಾಡಲು ಡಿಸಿಯಿಂದಲೇ ಆರ್ಡರ್ ಆಗಿತ್ತು ಎಂದು ಇದೀಗ ದೇವಾಲಯ ತೆರವು ವಿಚಾರ ತಿರುವು ಪಡೆದುಕೊಂಡಿದೆ. 

"

 ನಂಜನಗೂಡಿನಲ್ಲಿಂದು ಮಾತನಾಡಿದ ಶಾಸಕ ಹರ್ಷವರ್ಧನ್ (Harshavardhan) ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಡುವ ಹೇಳಿಕೆ ನೀಡಿದ್ದಾರೆ.  ದೇವಸ್ಥಾನ ಉಳಿಸಲು ಡಿಸಿಗೆ, ತಹಶೀಲ್ದಾರ್ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದರು.  ತಹಶೀಲ್ದಾರ್ ಡಿಸಿಗೆ ವರದಿ ಕೊಟ್ಟಾಗ, ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತಿರಾ? ಎಂದು ಡಿಸಿ ಪ್ರಶ್ನಿಸಿದ್ದಾರೆ. ದೇವಾಲಯ ತೆರವು ಮಾಡಲು ಜಿಲ್ಲಾಧಿಕಾರಿಯೇ ಕಾರಣ ಎಂದು ಹೇಳಿದ್ದಾರೆ. 

'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'

ದೇವಾಲಯ ತೆರವು ವಿಚಾರವಾಗಿ ಡಿಸಿ ಪ್ರಶ್ನೆ ಮಾಡಿದಾಗ ತಹಶೀಲ್ದಾರ್ (Tahasildar) ಬಳಿ ಉತ್ತರ ಇರಲಿಲ್ಲ. ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಿದ್ದಿವಿ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ.  ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಡಿಸಿ ಆರ್ಡರ್ ಮಾಡಿದ್ದಾರೆ ಎಂದು ಹರ್ಷವರ್ಧನ್ ಹೇಳಿದರು. 

ಠಾಣಾ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಹಿನ್ನೆಲೆಯಲ್ಲಿ 13 ದೇವಸ್ಥಾನಗಳನ್ನು ಉಳಿಸಲಾಯಿತು. ಮಹದೇವಮ್ಮ ದೇವಸ್ಥಾನವನ್ನು ಉಳಿಸುವಂತೆ ತಹಶೀಲ್ದಾರ್ ರಿಗೆ ರಿಪೋಟ್೯ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಅವರು ಡಿಸಿಗೆ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಇದರಲ್ಲಿ ಅವರದ್ದು ತಪ್ಪಿಲ್ಲವೆಂದು ಹೇಳಿದರು. 

  ಯಾವುದೇ ದಾಖಲಾತಿ ಇಲ್ಲದೇ ದೇವಸ್ಥಾನ ಹೇಗೆ ಉಳಿಸುತ್ತೀರಾ? ಎಂದು ಪ್ರಶ್ನಿಸಿ ದೇವಾಲಯ ತೆರವಿಗೆ ಡಿಸಿ ಆರ್ಡರ್ ಕೊಟ್ಟಿದ್ದಾರೆ. ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಮಾಡಿರುವುದಕ್ಕೆ ನನಗೂ ಬೇಸರವಿದೆ. ಈ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಶಾಸಕ ಹರ್ಷವರ್ಧನ್ ಹೇಳಿದರು. 

ಸೂಚನೆ ಕೊಟ್ಟವರು ಬಚಾವ್ :

 ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ  ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇವಸ್ಥಾನ (Temple) ತೆರವು ಪ್ರಕರಣದಲ್ಲಿ ತಹಶೀಲ್ದಾರ್‌ಗೆ ಶಿಕ್ಷೆಯಾಗಿದೆ. 

 ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು  ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆ (transfe) ಮಾಡಿ ಕಂದಾಯ ಇಲಾಖೆ ಇಂದು (ಸೆ.27) ಆದೇಶ ಹೊರಡಿಸಲಾಗಿದೆ. 

ನಂಜನಗೂಡು ತಹಶೀಲ್ದಾರ್​ ಹುದ್ದೆಯನ್ನು ಸರ್ಕಾರ ಖಾಲಿ ಉಳಿಸಿದೆ. ಸೂಕ್ತ ಪ್ರಭಾರ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ಗೆ ಸೂಚನೆ ನೀಡಲಾಗಿದೆ.

ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷದ ಹಲವು ನಾಯಕರು ಕೂಡ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದರು.

ಮೈಸೂರು ದೇಗುಲ ಧ್ವಂಸ : ಅಧಿಕಾರಿಗಳ ತಲೆದಂಡ ಶೀಘ್ರ?

ಕೋರ್ಟ್ ಆದೇಶವಿದೆ ಎಂದು ದೇವಸ್ಥಾನ ತೆರವು ಮಾಡುವಂತೆ ಮೇಲಿಂದ ದೊಡ್ಡ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಂತೆ ನಂಜನಗೂಡಿನ ತಹಶೀಲ್ದಾರ್ ಮೋಹನ ಕುಮಾರಿ ಅವರು ಹುಚ್ಚಗಣಿ ಮಹದೇವಮ್ಮ ದೇವಸ್ಥಾನವನ್ನು ತೆರವು ಮಾಡಿಸಿದ್ದಾರೆ.

ಆದ್ರೆ, ಶಿಕ್ಷೆಗೆ ಗುರಿಯಾಗಿದ್ದು ಮಾತ್ರ ತಹಶೀಲ್ದಾರ್​. ದೇಗುಲ ತೆರವು ಮಾಡುವಂತೆ ಸೂಚಿಸಿದ ಇನ್ನುಳಿದ ಅಧಿಕಾರಿಗಳಿಗೆ ಯಾವ ಶಿಕ್ಷೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Latest Videos
Follow Us:
Download App:
  • android
  • ios