Asianet Suvarna News Asianet Suvarna News

Shivamogga: ಇಂದಿನಿಂದ ಶಿವಮೊಗ್ಗ ತಿರುಪತಿ- ಚೆನ್ನೈ ಹೊಸ ರೈಲು

*  ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿರುವ ಸಂಸದ ರಾಘವೇಂದ್ರ
*  ಚೆನ್ನೈ ಮತ್ತು ಯಾತ್ರಿ ಕೇಂದ್ರ ತಿರುಪತಿಗೆ ನೇರ ಸಂಪರ್ಕ
*  ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ 

New Train From Shivamogga to Tirupati - Chennai on April 17th Onwards grg
Author
Bengaluru, First Published Apr 17, 2022, 9:31 AM IST

ಶಿವಮೊಗ್ಗ(ಏ.17):  ನೈಋುತ್ಯ ರೈಲ್ವೆಯು(South Western Railway) ಶಿವಮೊಗ್ಗದಿಂದ(Shivamogga) ವಾರಕ್ಕೆ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ(Chennai) ಹೋಗುವ ಹೊಸ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಎಕ್ಸ್‌ಪ್ರೆಸ್‌ ರೈಲು ಮೆಟ್ರೋಪಾಲಿಟನ್‌ ನಗರವಾದ ಚೆನ್ನೈ ಮತ್ತು ಯಾತ್ರಿ ಕೇಂದ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದೆ.

ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಿನ ಉದ್ಘಾಟನಾ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ(BY Raghavendra) ಅವರು ಶಿವಮೊಗ್ಗ ಟೌನ್‌ ರೈಲು ನಿಲ್ದಾಣದಲ್ಲಿ ಇಂದು(ಭಾನುವಾರ) ಸಂಜೆ 6 ಗಂಟೆಗೆ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸುವರು.

ತುಮಕೂರು-ಬೆಂಗಳೂರು: ವಿದ್ಯುತ್‌ ಚಾಲಿತ ಮೆಮು ರೈಲು ಆರಂಭ

ಶಿವಮೊಗ್ಗದಿಂದ ಚೆನ್ನೈ ಮತ್ತು ತಿರುಪತಿಗೆ(Tirupati) ನೇರ ರೈಲು ಸಂಪರ್ಕದ ಬೇಡಿಕೆಯನ್ನು ನ. 2019 ರಲ್ಲಿ ಪೂರೈಸಿದ್ದು, ಕೋವಿಡ್‌(Covid-19) ಕಾರಣದಿಂದಾಗಿ ಈ ರೈಲುಗಳ(Railway) ಸೇವೆಗಳನ್ನು ಕೊನೆಗೊಳಿಸಲಾಗಿತ್ತು. ಆದರೆ ರೈಲು ಸಂಪರ್ಕ ಸೇವೆಯ ಹೆಚ್ಚಿನ ಬೇಡಿಕೆ ಇದ್ದ ಕಾರಣ ಮೆಟ್ರೋಪಾಲಿಟನ್‌ ನಗರವಾದ ಚೆನ್ನೈ ಮತ್ತು ಯಾತ್ರಿಕ ತಾಣವಾದ ತಿರುಪತಿ (ರೇಣಿಗುಂಟ)ಗಳಿಗೆ ರೈಲನ್ನು ಮರು ಪ್ರಾರಂಭಿಸಲು ಲೊಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರ ಬೇಡಿಕೆಯಿಂದ ಈಗ ನೈಋುತ್ಯ ರೈಲ್ವೆಯ ಮೈಸೂರು ವಿಭಾಗವು ಹೊಸ ರೈಲನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯದ ಒಪ್ಪಿಗೆಯನ್ನು ಪಡೆಯಲು ಯಶಸ್ವಿಯಾಗಿದೆ.

ರೈಲು ಗಾಡಿ ಸಂ. 06223/06224 ಎರಡು ಎಸ್‌.ಎಲ್‌.ಆರ್‌.ಡಿ., ನಾಲ್ಕು ಸಾಮಾನ್ಯ ಕೋಚ್‌ಗಳು, ಆರು ಸ್ಲೀಪರ್‌ ಕೋಚ್‌ಗಳು, ಒಂದು ಎರಡನೆಯ ದರ್ಜೆ ಹವಾನಿಯಂತ್ರಿತ ಮತ್ತು ಒಂದು ಮೂರನೆಯ ದರ್ಜೆ ಹವಾ ನಿಯಂತ್ರಿತ ಕೋಚ್‌ಗಳನ್ನು ಒಳಗೊಂಡಿರುವ ಸಂಯೋಜನೆಯ 14 ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿರುತ್ತದೆ.

ವಿಶೇಷ ಎಕ್ಸ್‌ಪ್ರೆಸ್‌ ರೈಲು ಗಾಡಿ ಸಂಖ್ಯೆ. 06223 17.04.2022 ರಿಂದ 28.06.2022 ರವರೆಗೆ (22 ಸಂಚಾರಗಳು) ವಾರದಲ್ಲಿ ಎರಡು ದಿನ ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಹೊರಟು ರೇಣಿಗುಂಟಾ (ತಿರುಪತಿ) ಮಾರ್ಗವಾಗಿ ಪುರಚಿ ತಲೈವರ್‌ ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ನಿಲ್ದಾಣ ತಲುಪುವುದು.

ವಿಶೇಷ ಎಕ್ಸ್‌ಪ್ರೆಸ್‌ ರೈಲು ಗಾಡಿ ಸಂಖ್ಯೆ. 06224 18.04.2022 ರಿಂದ 29.06.2022 ರವರೆಗೆ (22 ಸಂಚಾರಗಳು) ಪ್ರತಿ ಸೋಮವಾರ ಮತ್ತು ಬುಧವಾರ ಈ ಎರಡು ದಿನ ಪುರಚಿ ತಲೈವರ್‌ ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಹೊರಟು ರೇಣಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗಟೌನ್‌ ತಲುಪುತ್ತದೆ.

South Western Railway: ನೈಋುತ್ಯ ರೈಲ್ವೆಯಿಂದ ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಾಣ

ರೈಲು ಸಂಖ್ಯೆ 06223 ಮತ್ತು 06224 ವಿಶೇಷ ಎಕ್ಸ್‌ಪ್ರೆಸ್‌ ರೈಲು(Special Express Train) ಸೇವೆಗಳನ್ನು ಪ್ರಾರಂಭದಲ್ಲಿ ಶಿವಮೊಗ್ಗ ಟೌನ್‌ನಿಂದ 17.04.2022 ರಿಂದ 28.06.2022 (22 ಸಂಚಾರಗಳು) ಮತ್ತು ಚೆನ್ನೈನಿಂದ 18.04.2022 ರಿಂದ 29.06.2022 (22 ಸಂಚಾರಗಳು) ಅವಧಿಗೆ ಜನರ ಬಳಕೆ ಪರೀಕ್ಷಿಸಲು ಚಾಲನೆ ನೀಡಲಾಗುತ್ತಿದೆ.

ಪ್ರಾಯೋಗಿಕ ಅವಧಿಯ ನಂತರ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಖಾಯಂಗೊಳಿಸಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ನೈರುತ್ಯ ರೈಲ್ವೇ, ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
 

Follow Us:
Download App:
  • android
  • ios