ತುಮಕೂರು-ಬೆಂಗಳೂರು: ವಿದ್ಯುತ್‌ ಚಾಲಿತ ಮೆಮು ರೈಲು ಆರಂಭ

ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದ ಜಿ.ಎಸ್‌.ಬಸವರಾಜು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

Memu Rail Service Started Tumkur To Bengaluru From April 8th gvd

ತುಮಕೂರು (ಏ.09): ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ತುಮಕೂರು- ಬೆಂಗಳೂರು ನಡುವಿನ ವಿದ್ಯುತ್‌ ಚಾಲಿತ ಮೆಮು ರೈಲು (Memu Rail) ಶುಕ್ರವಾರ ಆರಂಭವಾಯಿತು. ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು-ಬೆಂಗಳೂರು (Tumkur To Bengaluru) ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದ ಜಿ.ಎಸ್‌.ಬಸವರಾಜು (GS Basavaraju) ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ. ತುಮಕೂರು ಮತ್ತು ಬೆಂಗಳೂರಿನ ಕೆಎಸ್‌ಆರ್‌ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್‌ಚಾಲಿತ ರೈಲು ಸೇವೆ(ಮೆಮು)ಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬೆಂಗಳೂರು-ತುಮಕೂರು 8 ಬೋಗಿಗಳುಳ್ಳ ಡೆಮು ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 16 ಬೋಗಿಗಳುಳ್ಳ ಮೆಮು ರೈಲನ್ನಾಗಿ ಪರಿವರ್ತಿಸಲಾಗಿದೆ. ಸುಮಾರು 20 ವರ್ಷಗಳ ಹೋರಾಟದ ಶ್ರಮದಿಂದ ಎರಡು ಪ್ರಮುಖ ನಗರಗಳ ನಡುವೆ ಸಂಚರಿಸುವ ಈ ಮೆಮು ರೈಲು ಸೇವೆ ಸಾಕಾರವಾಗಿದೆ. 2024ರೊಳಗಾಗಿ ರಾಷ್ಟ್ರದ ಎಲ್ಲಾ ರೈಲು ಮಾರ್ಗಗಳು ಡೀಸೆಲ್‌ ಮುಕ್ತ ವಿದ್ಯುತ್‌ ಚಾಲಿತ ರೈಲು ಮಾರ್ಗಗಳಾಗಬೇಕೆಂದು ಪ್ರಧಾನಿ ಮೋದಿಯವರ (PM Narendra Modi) ದೊಡ್ಡ ಕನಸಾಗಿದೆ. ಇದನ್ನು ನನಸಾಗಿಸಲು ಪ್ರಯಾಣಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು.

Kodihalli Chandrashekar: ಏ.21 ರಂದು ಬೆಂಗಳೂರಿನಲ್ಲಿ ರೈತರ ಬೃಹತ್‌ ಸಮಾವೇಶ

ತುಮಕೂರು ರೈಲು ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 30 ರೈಲುಗಳು ಸಂಚರಿಸುತ್ತಿದ್ದರೂ, ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸಂಚಾರ ಸೌಲಭ್ಯಕ್ಕಾಗಿ ಮನವಿಗಳು ಬರುತ್ತಲೇ ಇದ್ದವು. ತುಮಕೂರು-ಬೆಂಗಳೂರು ನಡುವೆ ಪ್ರತಿ 1 ಗಂಟೆಗೊಮ್ಮೆ ಪ್ರತ್ಯೇಕ ರೈಲು ಸಂಚಾರಕ್ಕೆ ಕೇಂದ್ರದ ರೈಲ್ವೆ ಸಚಿವರಲ್ಲಿ ಮನವಿ ಮಾಡಿದಾಗ ಅವರು ಶಾಶ್ವತ ರೈಲು ಸಂಚಾರಕ್ಕೆ ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲಿ ಕಾರ್ಯಗತವಾಗಲಿದೆ ಎಂದು ತಿಳಿಸಿದರು. ನಗರದ ರೈಲು ನಿಲ್ದಾಣದ ದಕ್ಷಿಣ ಭಾಗದಲ್ಲಿ ಗೇಟ್‌ ತೆರೆಯಬೇಕೆಂದು ಸಾರ್ವಜನಿಕರಿಂದ ಮನವಿಗಳು ಬರುತ್ತಿದೆ. 

ಒಂದಕ್ಕಿಂತ ಹೆಚ್ಚು ಗೇಟ್‌ಗಳನ್ನು ತೆರೆದಲ್ಲಿ ಪ್ರಯಾಣಿಕರು ಟಿಕೇಟ್‌ ರಹಿತ ಪ್ರಯಾಣ ಮಾಡುವ ಸಾಧ್ಯತೆ ಇರುವುದರಿಂದ ರೈಲ್ವೆ ನಿಯಮಾವಳಿ ಪ್ರಕಾರ ಪ್ರಯಾಣಿಕರು ಹೋಗಿ ಬರಲು ಒಂದೇ ಕಡೆ ಗೇಟ್‌ ವ್ಯವಸ್ಥೆ ಮಾಡಲಾಗಿದೆ. ತುಮಕೂರು ನಗರ ರೈಲು ನಿಲ್ದಾಣವನ್ನು ಮೈಸೂರು, ಬೆಂಗಳೂರು ಮಾದರಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌, ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಬಾ.ಹ.ರಮಾಕುಮಾರಿ ಹಾಗೂ ಕಾರ್ಯದರ್ಶಿ ಕರ್ಣಂ ರಮೇಶ್‌, ರೈಲ್ವೆ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು. ರೈಲ್ವೆ ಬಳಕೆದಾರರ ಸಮಾಲೋಚಕರ ಸಮಿತಿ ಸದಸ್ಯ ಡಿ.ಆರ್‌.ರಘೋತ್ತಮ್‌ ರಾವ್‌ ಮಾತನಾಡಿದರು. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ನಿರ್ವಹಣೆ) ಅಮನ್‌ದೀಪ್‌ ಕಪೂರ್‌ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Vijayapura: ಭಲೇ ಬಸವ: ರೈತನಿಗೆ ಚಿನ್ನ ಗೆದ್ದುಕೊಟ್ಟ ಬಂಗಾರದಂತ ಎತ್ತುಗಳು..!

ಬೆಂಗಳೂರಿಗೆ ಬೆಳಿಗ್ಗೆ 11.15ಕ್ಕೆ ರೈಲು: ತುಮಕೂರಿನಿಂದ ಪ್ರತಿದಿನ ಬೆಳಿಗ್ಗೆ 11.15 ಗಂಟೆಗೆ ಹೊರಟು 13.25 ಗಂಟೆಗೆ ಬೆಂಗಳೂರು ತಲುಪಲಿದ್ದು, ಬೆಂಗಳೂರಿನಿಂದ ಮಧ್ಯಾಹ್ನ 13.50ಕ್ಕೆ ಹೊರಟು 15.40 ಗಂಟೆಗೆ ತುಮಕೂರು ತಲುಪಲಿದೆ. ತುಮಕೂರಿನಿಂದ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಈ ರೈಲು ಕ್ಯಾತ್ಸಂದ್ರ, ಹಿರೇಹಳ್ಳಿ, ಡಾಬಸ್‌ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಬೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಯಶವಂತಪುರ, ಮಲ್ಲೇಶ್ವರಂ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

Latest Videos
Follow Us:
Download App:
  • android
  • ios