ಕೊರೋನಾದಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಕಾಣಿಸಿಕೊಂಡ ಹೊಸ ರೋಗ ಲಕ್ಷಣಗಳು..!

* ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ‘ಮಲ್ಟಿಸಿಸ್ಟಮ್‌ ಇನ್‌ಫ್ಲೆಮೆಟೋರಿ ಸಿಂಡ್ರೋಮ್‌ ಇನ್‌ ಚಿಲ್ಡ್ರನ್‌'
* ಆಸ್ಪತ್ರೆಯಲ್ಲಿ ದಾಖಲಾಗಿದ್ದ 29 ಮಕ್ಕಳ ಪೈಕಿ ಓರ್ವ ಮಗು ಸಾವು
* ರೋಗ ತೀವ್ರ ಉಲ್ಬಣಗೊಂಡ ಮಕ್ಕಳು ಮಾತ್ರ ಮೃತಪಡುವ ಸಾಧ್ಯತೆ

New Symptoms in Children Recovered from Coronavirus in Ballari grg

ಬಳ್ಳಾರಿ(ಜು.04): ಕೊರೋನಾ ವೈರಸ್‌ ಕಾಣಿಸಿಕೊಂಡು ಗುಣಮುಖವಾದ ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ‘ಮಲ್ಟಿಸಿಸ್ಟಮ್‌ ಇನ್‌ಫ್ಲೆಮೆಟೋರಿ ಸಿಂಡ್ರೋಮ್‌ ಇನ್‌ ಚಿಲ್ಡ್ರನ್‌’ (mis-c) ಹಾಗೂ ANEC ಎನ್ನುವ ಕಾಯಿಲೆಯಿಂದಾಗಿ ಇಲ್ಲಿನ ವಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ 29 ಮಕ್ಕಳ ಪೈಕಿ ಓರ್ವ ಮಗು ಮೃತಪಟ್ಟಿದ್ದು, ಮೂವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 25 ಮಕ್ಕಳು ಗುಣಮುಖರಾಗಿದ್ದಾರೆ.

ಜ್ವರ, ವಾಂತಿ- ಭೇದಿ, ಕೈಕಾಲು ಊತ, ಜೋರಾಗಿ ಉಸಿರಾಡುವುದು, ತುಟಿ-ನಾಲಿಗೆ ಕೆಂಪಾಗುವುದು ಈ ರೋಗದ ಲಕ್ಷಣವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಈ ಕಾಯಿಲೆ ನಿನ್ನೆ- ಮೊನ್ನೆ ಕಾಣಿಸಿಕೊಂಡ ಕಾಯಿಲೆ ಅಲ್ಲ. ಕೊರೋನಾ ವೈರಸ್‌ನಿಂದ ಬಳಲಿ, ಗುಣಮುಖವಾದ ಅನೇಕ ಮಕ್ಕಳಲ್ಲಿ ಇದು ಕಾಣಿಸಿಕೊಂಡಿದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಈ ಕಾಯಿಲೆ ಇದೆ.

‘ಮಿಸ್‌- ಸಿ’ ಕಾಯಿಲೆಗೆ ರಾಜ್ಯದಲ್ಲಿ ಮೊದಲ ಬಲಿ: ಕೋವಿಡ್‌ ಗೆದ್ದ ಮಕ್ಕಳನ್ನು ಕಾಡುವ ರೋಗ!

ಮಕ್ಕಳ ವೈದ್ಯರು ಇದಕ್ಕೆ ಚಿಕಿತ್ಸೆ ನೀಡಲಿದ್ದು, ಬಳಿಕ ಮಕ್ಕಳು ಚೇತರಿಸಿಕೊಳ್ಳುತ್ತಾರೆ. ರೋಗ ತೀವ್ರ ಉಲ್ಬಣಗೊಂಡ ಮಕ್ಕಳು ಮಾತ್ರ ಮೃತಪಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.

ಜಿಲ್ಲೆಯ 29 ಮಕ್ಕಳಲ್ಲಿ (mis-c) ಹಾಗೂ ANEC ರೋಗ ಕಾಣಿಸಿಕೊಂಡಿತ್ತು. ಓರ್ವ ಮಗು ಮಾತ್ರ ಮೃತಪಟ್ಟಿದೆ. ಇದು ಹೊಸದಾಗಿ ಕಾಣಿಸಿಕೊಂಡ ಕಾಯಿಲೆ ಅಲ್ಲ. ಎಲ್ಲ ಕಡೆಯಲ್ಲೂ ಇದೆ ಎಂದು ಬಳ್ಳಾರಿ ಡಿಎಚ್‌ಒ ಡಾ. ಜನಾರ್ದನ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios