ಟಫ್ ರೂಲ್ಸ್ ಅಧಿಕೃತ; ಮದುವೆಗೆ 100, ಅಂತ್ಯಕ್ರಿಯೆಗೆ 25 ಜನ ಮಾತ್ರ!

ಕೊರೋನಾ  ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೊಂದು ಮಾರ್ಗಸೂಚಿ ಹೊರಡಿಸಿದೆ/ ಮದುವೆ, ಅಂತ್ಯಸಂಸ್ಕಾರಕ್ಕೆ ಜನ ನಿಗದಿ/ ಧಾರ್ಮಿಕ ಆಚರಣೆಗೆ ನಿಷೇಧ/ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್

New rules and regulations to control corona in karnataka mah

ಬೆಂಗಳೂರು (ಏ. 16) ಕರ್ನಾಟಕದಲ್ಲಿ  ಕೊರೋನಾ ಹಿಂದಿನ ಎಲ್ಲ ದಾಖಲೆ ಮುರಿದು ಮುಂದಕ್ಕೆ ಹೋಗಿದೆ. ನಿರೀಕ್ಷೆಯಂತೆ ಸರ್ಕಾರ ಮತ್ತೊಂದು ಮಾರ್ಗಸೂಚಿ  ಹೊರಡಿಸಿದೆ. ವಿಶೇಷವಾಗಿ ಮದುವೆ, ಜನ್ಮದಿನ ಮತ್ತು ಅಂತ್ಯಸಂಸ್ಕಾರದ ಸಂದರ್ಭಕ್ಕೆ ಇದು ಅನ್ವಯವಾಗುತ್ತದೆ.

ಸಾರ್ವಜನಿಕ ಸಮಾರಂಭ, ಆಚರಣೆ ಮತ್ತು ಮನರಂಜನೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಸಿಎಂ ಯಡಿಯೂರಪ್ಪ

 ಮದುವೆಗೆ ತೆರೆದ ಪ್ರದೇಶದಲ್ಲಿ ಗರಿಷ್ಠ 200 ಮಂದಿಗೆ ಅನುಮತಿ ನೀಡಲಾಗಿದೆ.  ಕಲ್ಯಾಣ ಮಂಟಪ ಅಥವಾ ಸಭಾಂಗಣ ಅಥವಾ ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಠ 100 ಮಂದಿಗೆ ಮಾತ್ರ ಅವಕಾಶ ಇದೆ.

ಜನ್ಮದಿನ ಇತರೇ ಆಚರಣೆಗೆ ಸಂಬಂಧಿಸಿಯೂ ನಿಯಮ ತಿಳಿಸಲಾಗಿದೆ.  ತೆರೆದ ಪ್ರದೇಶದಲ್ಲಿ 50 ಮಂದಿಗೆ ಅನುಮತಿ. ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅನುಮತಿ ನೀಡಲಾಗಿದೆ.

ನಿಧ ಮತ್ತು ಶವಸಂಸ್ಕಾರಕ್ಕೂ ನಿಯಮಾವಳಿ ತರಲಾಗಿದೆ.  ತೆರೆದ ಪ್ರದೇಶದಲ್ಲಿ 50 ಮಂದಿ, ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅವಕಾಶ. ಅಂತ್ಯ ಕ್ರಿಯೆಯಲ್ಲಿ 25 ಮಂದಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇತರೇ ಸಮಾರಂಭಗಳಿಗೆ 50 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ.  ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದೆ ಇದೆ. ಸಿಎಂ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು  ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

 

 

Latest Videos
Follow Us:
Download App:
  • android
  • ios