ಕೊರೋನಾ ಎರಡನೇ ಅಲೆ ಆರ್ಭಟ/ ಸಿಎಂ ಯಡಿಯೂರಪ್ಪಗೆ ಕೊರೋನಾ ಪಾಸಿಟಿವ್/ ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಸಿಎಂ/ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು

ಬೆಂಗಳೂರು(ಏ. 16) ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿದೆ. ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದರು. 

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಎರಡನೇ ಸಾರಿ ಕೊರೋನಾ ಪಾಸಿಟಿವ್ ಬಂದಿದೆ. ಸೋಮವಾರದಿಂದಲೇ ಯಡಿಯೂರಪ್ಪ ಜ್ವರದಿಂದ ಬಳಲುತ್ತಿದ್ದರು. ಬೆಂಗಳೂರಿಗೆ ಬಂದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ಕೊರೋನಾ ಇರುವುದು ಗೊತ್ತಾಗಿದೆ. ಸದ್ಯ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 78 ವರ್ಷದ ಸಿಎಂ ಕ್ರಿಯಾಶೀಲರಾಗಿಯೇ ಇದ್ದಾರೆ.

ಬೆಂಗಳೂರಿನಲ್ಲಿ ಕೈ ಮೀರಿದ ಪರಿಸ್ಥಿತಿ

ಜವರದ ಲಕ್ಷಣ ಮತ್ತು ಸುಸ್ತು ಇದ್ದು ಯಡಿಯೂರಪ್ಪ ಅವರೇ ನಡೆದುಕೊಂಡು ಹೋಗಿದ್ದಾರೆ. ತುರ್ತು ಚಿಕಿತ್ಸೆ ಕಲ್ಪಿಸಿಕೊಡಲಾಗಿದೆ. ಯಡಿಯೂರಪ್ಪ ಮೇಲಿಂದ ಮೇಲೆ ಸಭೆ ಮಾಡಿಸಿದ್ದು ಅವರ ಜತೆ ಸಂಪರ್ಕದಲ್ಲಿದ್ದವರಿಗೂ ಆತಂಕ ಕಾಡಲು ಆರಂಭಿಸಿದೆ. 

ರಾಜ್ಯದಲ್ಲಿ ಗುರುವಾರ ಹದಿನಾಲ್ಕು ಸಾವಿರ ಪ್ರಕರಣಗಳು ದಾಖಲಾಗಿದ್ದು ಸಿಎಂ ಸರ್ವ ಪಕ್ಷ ಸಭೆಯನ್ನು ಕರೆದಿದ್ದರು. ಆದರೆ ಈಗ ಸಿಎಂ ಆಸ್ಪತ್ರೆಯಲ್ಲಿ ಇರಬೇಕಾದ್ದರಿಂದ ಸರ್ಕಾರದ ಮುಂದಿನ ಹೆಜ್ಜೆ ಏನಾಗಿರುಗತ್ತದೆ ಎನ್ನುವುದನ್ನು ನೋಡಬೇಕಿದೆ. 

Scroll to load tweet…