ಕಂಟೋನ್ಮೆಂಟ್‌ ಅಭಿವೃದ್ಧಿ ಶೀಘ್ರ ಕಾರಾರ‍ಯರಂಭ, ಮೇ ಎರಡನೇ ವಾರದಿಂದ 485ಕೋಟಿ ಮೊತ್ತದ ನಿಲ್ದಾಣ ನವೀಕರಣ, ಎರಡು ಹಂತದಲ್ಲಿ ನಿಲ್ದಾಣದ ಅಭಿವೃದ್ಧಿ, ಜಿ+5 ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ, 30 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣ ಸಾಧ್ಯತೆ. 

ಮಯೂರ್‌ ಹೆಗಡೆ

ಬೆಂಗಳೂರು(ಏ.14): ದಂಡು ರೈಲ್ವೇ ನಿಲ್ದಾಣದ ಪುನರ್‌ ಅಭಿವೃದ್ಧಿಗೆ ಮುಹೂರ್ತ ನಿಗದಿಯಾಗಿದ್ದು, ಮೇ ತಿಂಗಳಿಂದ ಕಾಮಗಾರಿ ಪ್ರಾರಂಭವಾಗಲಿದೆ. ನಿಲ್ದಾಣದ ಅಭಿವೃದ್ಧಿ ಪ್ರಮುಖವಾಗಿ ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಭಾಗವಾಗಿ ಈಗಾಗಲೇ ಪಿಎಂ ಗತಿಶಕ್ತಿ ಯೋಜನೆಯಡಿ ನಿಲ್ದಾಣದಲ್ಲಿ ಎರಡು ಪ್ಲಾಟ್‌ಫಾರ್ಮ್‌ ನಿರ್ಮಾಣ ಪ್ರಗತಿಯಲ್ಲಿದೆ. ಇದರ ಜೊತೆಗೀಗ ಮೇ ಎರಡನೇ ವಾರದಿಂದ 485 ಕೋಟಿ ಮೊತ್ತದ ನಿಲ್ದಾಣ ನವೀಕರಣ ಕಾರ್ಯ ಆರಂಭವಾಗಲಿದೆ. ಅದಕ್ಕೂ ಮುನ್ನ ನಿಲ್ದಾಣದ ಪಾರಂಪರಿಕ ಭಾಗ ಉಳಿಸಿಕೊಂಡು ಇನ್ನುಳಿದ ಕಟ್ಟಡ ತೆರವು ಮಾಡಲು ನಿರ್ಧರಿಸಲಾಗಿದೆ.

ಕಾಮಗಾರಿ ಗುತ್ತಿಗೆ ಪಡೆದ ದೆಹಲಿಯ ವರಿಂದ್ರಾ ಕನ್ಸ್‌ಟ್ರಕ್ಷನ್‌ ಲಿ. ಸಿಬ್ಬಂದಿ ಆಗಮಿಸಿ ನಿಲ್ದಾಣದ ಪಕ್ಕದಲ್ಲಿ ಕಾಂಕ್ರೀಟಿಕರಣ, ಕಟ್ಟಡದ ಕಚ್ಚಾವಸ್ತುಗಳ ದಾಸ್ತಾನು, ಕಾರ್ಮಿಕರು ನೆಲೆಸಲು ಸ್ಥಳಾವಕಾಶ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ವೇಳೆ ಧೂಳು, ಕಚ್ಚಾ ವಸ್ತುಗಳು ಹೊರ ಬೀಳದಂತೆ 6ಮೀಟರ್‌ ಎತ್ತರದ ಶೀಟ್‌ಗಳನ್ನು ನಿಲ್ಲಿಸಿಕೊಳ್ಳಲು ಸಿದ್ಧತೆ ನಡೆದಿದೆ. ರೈಲ್ವೆ ಇಲಾಖೆ ಕೂಡ ತನ್ನ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದೆ. ಪ್ಲಾಟ್‌ಫಾಮ್‌ರ್‍ ಕಾಮಗಾರಿ ಅಂತಿಮ ಘಟ್ಟತಲುಪುತ್ತಿದ್ದಂತೆ ನಿಲ್ದಾಣದ ಮರು ಅಭಿವೃದ್ಧಿಯ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.

ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಟ್ವೀಟ್‌ಗೆ ಸ್ಪಂದಿಸಿ ವೈದ್ಯರ ಕಳಿಸಿದ ರೈಲ್ವೆ ಇಲಾಖೆ

ಉದ್ದೇಶಿತ ನಿಲ್ದಾಣದ ಕಟ್ಟಡ ಜಿ+5 ಮಾದರಿಯಲ್ಲಿರಲಿದೆ. ಪಾರ್ಕಿಂಗ್‌, ಹವಾನಿಯಂತ್ರಿತ 216 ಮೀ. ಅಗಲದ ಸಭಾಂಗಣ, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು, ವಾಣಿಜ್ಯ ಚಟುವಟಿಕೆಗೆ ಸ್ಥಳಾವ ಕಾಶದೊಂದಿಗೆ ಪ್ಲಾಟ್‌ಫಾಮ್‌ರ್‍ ಮೇಲೆ ರೂಫ್‌ಪ್ಲಾಜಾ ನಿರ್ಮಾಣ ಆಗಲಿದೆ. ವೈ-ಫೈ ಸೌಲಭ್ಯ, ಅಂಗವಿಕಲರಿಗೆ ರಾರ‍ಯಂಪ್‌, ಪ್ರಯಾಣಿಕರಿಗೆ ಲಿಫ್ಟ್‌, ಎಸ್ಕಲೇಟರ್‌, ಸಬ್‌ವೇ ವ್ಯವಸ್ಥೆ ಇರಲಿದೆ. ಜತೆಗೆ ಮಳೆ ನೀರು ಕೊಯ್ಲು, ಹಸಿರು ಕಟ್ಟಡ, ಎಲ…ಇಡಿ ಲೈಟಿಂಗ್‌ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕವಿರಲಿದೆ. ಸ್ಥಳೀಯ ಸಾರ್ವಜನಿಕ ಸಾರಿಗೆ ಜೊತೆ ಬಹು ಮಾದರಿ ಸಂಯೋಜನೆ ವ್ಯವಸ್ಥೆಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುನರಾಭಿವೃದ್ಧಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ಸಿಗುವ ಹಂತದಲ್ಲಿದೆ. ಕಾಮಗಾರಿ 30 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಹೊಸ ಪ್ಲಾಟ್‌ಫಾರ್ಮ್‌ ಕಾಮಗಾರಿ ಮುಗಿದ ತಕ್ಷಣ ರೈಲುಗಳ ಸಂಚಾರ ಆರಂಭವಾಗಲಿದೆ. ಇದರಿಂದ ಸಿಟಿ ರೈಲ್ವೆ ಹಾಗೂ ಎಸ್‌ಎಂವಿಬಿ ನಿಲ್ದಾಣದ ಮೇಲಿನ ಹೊರೆ ಇಳಿಯಲಿದೆ. ಅಲ್ಲದೆ, ಹೊಸದಾಗಿ ಇಲ್ಲಿಂದಲೆ ರೈಲುಗಳನ್ನು ಆರಂಭಿಸಲು ಅವಕಾಶವಾಗಲಿದೆ ಎಂದರು.

ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್‌ ರೈಲು ಸೇವೆ

ಜೂನ್‌ನಲ್ಲಿ 4 ಹೊಸ ಪ್ಲಾಟ್‌ಫಾರ್ಮ್‌

45 ಕೋಟಿ ಮೊತ್ತದಲ್ಲಿ ಹೊಸ ಯಾರ್ಡ್‌ ನಿರ್ಮಾಣ ಸಾಗಿದೆ. ನಿಲ್ದಾಣದಲ್ಲಿ ಹಳಿ ಜೋಡಣೆ, ಪಿಟ್‌ಲೈನ್‌ ಅಳವಡಿಕೆ ಇತರೆ ಕಾಮಗಾರಿ ನಡೆದಿದೆ. ಜತೆಗೆ ಮುಂದಿನ ಹತ್ತು ದಿನಗಳಲ್ಲಿ ಮಿಲ್ಲರ್ಸ್‌ ರಸ್ತೆ ಬಳಿಯ ರೈಲ್ವೆ ಕೆಳಸೇತುವೆಗೆ ಆರ್‌ಯುಬಿ ಗರ್ಡರ್‌ ಅಳವಡಿಕೆ ಕಾರ್ಯ ನಡೆಯಲಿದೆ. ಲೂಪ್‌ಲೈನ್‌ಗಳ ಜೊತೆಗೆ 540 ಮೀ. ಉದ್ದದ ಎರಡು ಐಲ್ಯಾಂಡ್‌ ಮಾದರಿಯ ಪ್ಲಾಟ್‌ಫಾರ್ಮ್‌ ನಿರ್ಮಾಣವಾಗುತ್ತಿದೆ. ಏಪ್ರಿಲ್‌ನಲ್ಲೇ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ,

ತಾಂತ್ರಿಕ ಕಾರಣದಿಂದ ಹಿಂದಿದೆ.

ದಂಡು ನಿಲ್ದಾಣದ ನವೀಕರಣದ ಕಾರ್ಯಾದೇಶ ಕಳೆದ ತಿಂಗಳು ದೊರೆತಿದೆ. ಮೊದಲು ಪಾರಂಪರಿಕ ಕಟ್ಟಡ ಉಳಿಸಿ, ಬೇರೆಯದನ್ನು ತೆರವುಮಾಡಿ ಕಾಮಗಾರಿ ಆರಂಭಿಸಲಾಗುವುದು ಅಂತ ವರಿಂದ್ರಾ ಕನ್ಸ್‌ಟ್ರಕ್ಷನ್‌ ಲಿ. ಸೈಟ್‌ ಎಂಜಿನಿಯರ್‌ ಆದಿತ್ಯರಾಜ್‌ ತಿಳಿಸಿದ್ದಾರೆ.