Asianet Suvarna News Asianet Suvarna News

ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಟ್ವೀಟ್‌ಗೆ ಸ್ಪಂದಿಸಿ ವೈದ್ಯರ ಕಳಿಸಿದ ರೈಲ್ವೆ ಇಲಾಖೆ

ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್‌ಆರ್‌ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. ತಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ. 

woman gives birth at uttar pradesh jhansi railway station fruit vendor saves the day ash
Author
First Published Apr 5, 2023, 3:13 PM IST | Last Updated Apr 5, 2023, 3:13 PM IST

ಝಾನ್ಸಿ (ಏಪ್ರಿಲ್  5, 2023): ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೀರಾಂಗನ ಲಕ್ಷ್ಮೀಬಾಯಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೆ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಗರ್ಭಿಣಿ ಮತ್ತು ಆಕೆಯ ಪತಿ ದೆಹಲಿಯಿಂದ ದಾಮೋಹ್‌ಗೆ ಸೋಮವಾರ ರಾತ್ರಿ ಪ್ರಯಾಣಿಸುತ್ತಿದ್ದರು. ಮಹಿಳೆ ಹೆರಿಗೆ ನೋವು ಅನುಭವಿಸುತ್ತಿದ್ದು, ಯಾರೂ ಸಹಾಯ ಮಾಡಲು ಸಿದ್ಧರಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಬಳಿಕ, ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಮಿರ್ಜಾ ದಂಪತಿಯನ್ನು ನೋಡಿದ ತಕ್ಷಣ, ಅವರ ಟಿಕೆಟ್‌ನಲ್ಲಿ ಮುದ್ರಿಸಲಾದ ಪಿಎನ್‌ಆರ್ ಸಂಖ್ಯೆಯನ್ನು ನೀಡಿ ಸಹಾಯಕ್ಕಾಗಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. 

ಇದನ್ನು ಓದಿ: ಮದ್ವೆಗೆ ಗಿಫ್ಟ್‌ ಕೊಟ್ಟ ಮ್ಯೂಸಿಕ್‌ ಸಿಸ್ಟಂನಲ್ಲಿ ಬಾಂಬ್‌..! ವಧುವಿನ ಎಕ್ಸ್ ಬಾಯ್‌ಫ್ರೆಂಡ್‌ ಅಂದರ್‌

ಇದಕ್ಕೆ ರೈಲ್ವೆ ಸಚಿವಾಲಯ ಸ್ಪಂದಿಸಿದ್ದು, 20 ನಿಮಿಷಗಳ ನಂತರ ವೈದ್ಯರ ತಂಡವು ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಚಿಕಿತ್ಸೆ ನೀಡಿದೆ. ನಂತರ, ಗರ್ಭಿಣಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ತಿಳಿದುಬಂದಿದೆ. ಅಲ್ಲದೆ, ಹೆರಿಗೆಯ ಸಮಯದಲ್ಲಿ ಮಹಿಳೆಯನ್ನು ಮುಚ್ಚಲು ಕಂಬಳಿಗಳನ್ನು ಹಿಡಿದಿದ್ದರು. ತಾಯಿ ಮತ್ತು ಗಂಡು ಮಗುವನ್ನು ಈಗ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಅವರ ತ್ವರಿತ ಪ್ರತಿಕ್ರಿಯೆಗಾಗಿ ದಂಪತಿ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದೂ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮದ ಜತೆಗೆ ಮಾತನಾಡಿದ ತನ್ವೀರ್‌, "ಅವರು ರಾತ್ರಿ 11:30 ರ ಸುಮಾರಿಗೆ ಝಾನ್ಸಿಗೆ ಬಂದರು. ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್‌ಆರ್‌ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ.ತ ಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹಣ್ಣಿನ ಜ್ಯೂಸ್‌ ಮಾರಾಟಗಾರ ಹೇಳಿದ್ದಾರೆ.

ಇದನ್ನೂ ಓದಿ: ಹಣವಿಲ್ಲದ್ದಕ್ಕೆ ಬೆಂಗಳೂರಿಂದ ಒಡಿಶಾಗೆ ನಡೆದೇ ಹೋದ ಕಾರ್ಮಿಕರು: 1000 ಕಿ.ಮೀ. ಹೋದವ್ರಿಗೆ ಸ್ಥಳೀಯರ ನೆರವು

ಹೆರಿಗೆಯ ಸಮಯದಲ್ಲಿ, ಮಹಿಳೆಯನ್ನು ಮುಚ್ಚಲು ಹೊದಿಕೆಗಳನ್ನು ಹಿಡಿದಿದ್ದರು. ಇದೀಗ ತಾಯಿ ಮತ್ತು ಗಂಡು ಮಗುವನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್‌ ಸೈಫಿ ಬಂಧನ

Latest Videos
Follow Us:
Download App:
  • android
  • ios