ಹೊಸ ಆ್ಯಪ್‌ನಲ್ಲಿ ಬಸ್‌ಗಳ ಸಂಚಾರದ ಸಮಯ, ಯಾವ ಮಾರ್ಗದ ಬಸ್‌ ಎಲ್ಲಿದೆ ? ಎಂಬ ರಿಯಲ್‌ ಟೈಂ ಮಾಹಿತಿ ದೊರೆಯುವಂತೆ ಮಾಡಲಾಗುತ್ತಿದೆ. ಅದರ ಜತೆಗೆ ಪ್ರಯಾಣಿಕರು ಇರುವ ಸ್ಥಳದ ಸಮೀಪ ಯಾವ ಬಸ್‌ ನಿಲುಗಡೆ ಮತ್ತು ನಿಲ್ದಾಣವಿದೆ. ಆ ನಿಲ್ದಾಣ ಮತ್ತು ಟಿಟಿಎಂಸಿಗಳಲ್ಲಿ ಯಾವೆಲ್ಲ ವ್ಯವಸ್ಥೆಗಳಿವೆ ಎಂಬ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ನೀಡಲಿದೆ.

ಬೆಂಗಳೂರು(ಸೆ.17): ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ರಚನೆಯಾಗಿ 25 ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಬಿಎಂಟಿಸಿಗೆ ಪ್ರತ್ಯೇಕ ಆ್ಯಪ್‌ ಬಿಡುಗಡೆಗೆ ನಿಗಮ ಮುಂದಾಗಿದೆ. ಈ ಆ್ಯಪ್‌ನಿಂದ ಪ್ರಯಾಣಿಕರಿಗೆ ಬಿಎಂಟಿಸಿ ಸೇವೆಗಳ ಸಂಪೂರ್ಣ ಮಾಹಿತಿ ಸಿಗಲಿದೆ. ಜತೆಗೆ ಮುಂಗಡ ಟಿಕೆಟ್‌ ಖರೀದಿಸುವ ಸೌಲಭ್ಯ ದೊರಕ ಲಿದೆ.

ಬಿಎಂಟಿಸಿ ಬೆಳ್ಳಿ ಮಹೋತ್ಸವವನ್ನು ಸ್ಮರಣೀಯವಾಗಿ ಮಾಡಲು ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ಈವರೆಗೆ ವೆಬ್‌ಸೈಟ್‌ ಮೂಲಕ ಸಿಗುತ್ತಿದ್ದ ಬಿಎಂಟಿಸಿ ಮಾಹಿತಿ ಯನ್ನು ಈಗ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಪಡೆಯುವಂತೆ ಮಾಡಲಾಗುತ್ತಿದೆ. ಹೊಸ ಆ್ಯಪ್‌ನಲ್ಲಿ ಬಸ್‌ಗಳ ಸಂಚಾರದ ಸಮಯ, ಯಾವ ಮಾರ್ಗದ ಬಸ್‌ ಎಲ್ಲಿದೆ ? ಎಂಬ ರಿಯಲ್‌ ಟೈಂ ಮಾಹಿತಿ ದೊರೆಯುವಂತೆ ಮಾಡಲಾಗುತ್ತಿದೆ. ಅದರ ಜತೆಗೆ ಪ್ರಯಾಣಿಕರು ಇರುವ ಸ್ಥಳದ ಸಮೀಪ ಯಾವ ಬಸ್‌ ನಿಲುಗಡೆ ಮತ್ತು ನಿಲ್ದಾಣವಿದೆ. ಆ ನಿಲ್ದಾಣ ಮತ್ತು ಟಿಟಿಎಂಸಿಗಳಲ್ಲಿ ಯಾವೆಲ್ಲ ವ್ಯವಸ್ಥೆಗಳಿವೆ ಎಂಬ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ನೀಡಲಿದೆ.

Bengaluru ಖಾಸಗಿ ವಾಹನಗಳ ಸಂಚಾರ ಬಂದ್‌ ಮಾಡಿದ್ದಕ್ಕೆ, ಬಿಎಂಟಿಸಿಗೆ 6 ಕೋಟಿ ರೂ. ಆದಾಯ ಬಂತು!

ಪ್ರಮುಖವಾಗಿ ಆ್ಯಪ್‌ ಮೂಲಕ ಟಿಕೆಟ್‌ ಖರೀದಿಸುವ ಅವಕಾಶ ಕಲ್ಪಿಸುವ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ವಿಮಾನಯಾನ ಟಿಕೆಟ್‌ ಬುಕ್ಕಿಂಗ್‌ಗಾಗಿ ಇರುವ ಆ್ಯಪ್‌ ಮಾದರಿಯಲ್ಲಿಯೇ ಬಿಎಂಟಿಸಿ ಆ್ಯಪ್‌ನಲ್ಲಿ ಅವಕಾಶ ನೀಡಲು ಚರ್ಚಿಸಲಾಗಿದೆ. ಆ್ಯಪ್‌ ಮೂಲಕ ಹಣ ಪಾವತಿಸಿ ತಾವು ಬಸ್‌ನ್ನು ಹತ್ತಿಕೊಳ್ಳುವ ನಿಲುಗಡೆ ಅಥವಾ ನಿಲ್ದಾಣದಿಂದ ಇಳಿಯುವ ಸ್ಥಳವನ್ನು ನಮೂದಿಸಿ, ಅದಕ್ಕೆ ತಗಲುವ ಟಿಕೆಟ್‌ ದರವನ್ನು ಆನ್‌ಲೈನ್‌ ಮೂಲಕವೇ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಮೊಬೈಲ್‌ ಆ್ಯಪ್‌ ಮೂಲಕ ಇ-ಟಿಕೆಟ್‌ ಖರೀದಿಸಿ ಪ್ರಯಾಣಿಸುವುದರಿಂದ ಪ್ರಯಾಣಿಕರಿಗೆ ಸಮಯ ಮತ್ತು ಬಸ್‌ನಲ್ಲಿ ಟಿಕೆಟ್‌ ಖರೀದಿಸುವ ಕಿರಿಕಿರಿ ತಪ್ಪಲಿದೆ. ನಿರ್ವಾಹಕರ ಕೆಲಸ ಹೊರೆಯೂ ತಗ್ಗಲಿದೆ. ಹೀಗಾಗಿ ನೂತನ ವ್ಯವಸ್ಥೆಯನ್ನು ಆ್ಯಪ್‌ನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.