ಎನ್‌ಇಎನ್‌ಆರ್ ಭವಿಷ್ಯದ ಹಸಿರು ಶಕ್ತಿಯ ಹೊಸ ಮೂಲ
ಹಸಿರು ಶಕ್ತಿಯ ಹೊಸ ಮೂಲವಾಗಿ ಕಡಿಮೆ ಶಕ್ತಿ ಪರಮಾಣು ರಿಯಾಕ್ಟರ್ (ಎಲ್‌ಇಎನ್‌ಆರ್) ಅನ್ನು ಹೇಗೆ ಬಳಸಬಹುದು ಎಂದು ಪದ್ಮಶ್ರೀ ಡಾ. ಪ್ರಹ್ಲಾದ ರಾಮರಾವ್ ತಿಳಿಸಿದರು.
ಮೈಸೂರು :ಹಸಿರು ಶಕ್ತಿಯ ಹೊಸ ಮೂಲವಾಗಿ ಕಡಿಮೆ ಶಕ್ತಿ ಪರಮಾಣು ರಿಯಾಕ್ಟರ್ (ಎಲ್‌ಇಎನ್‌ಆರ್) ಅನ್ನು ಹೇಗೆ ಬಳಸಬಹುದು ಎಂದು ಪದ್ಮಶ್ರೀ ಡಾ. ಪ್ರಹ್ಲಾದ ರಾಮರಾವ್ ತಿಳಿಸಿದರು.
ನಗರದ ಹೂಟಗಳ್ಳಿಯಲ್ಲಿ ಎನ್‌ಐಇ ಭೌತಶಾಸ್ತ್ರ ವಿಭಾಗವು ಇನ್‌ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್‌ನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭವಿಷ್ಯದ ಶಕ್ತಿಯ ಅಗತ್ಯತೆ ಮತ್ತು ಪ್ರಪಂಚದ ಸುಸ್ಥಿರ ಅಭಿವೃದ್ಧಿಗೆ ಪರ್ಯಾಯ ಮೂಲಗಳು ಹೇಗೆ ಅಗತ್ಯ ಎಂದು ಹೇಳಿದರು.
ಸೈನಿಕರು ಆಹಾರದ ಜತೆಗೆ ಇಂಧನ ಸಾಗಿಸಲು ಕಷ್ಟುಪಡುತ್ತಿದ್ದಾರೆ. ಈ ದಿಕ್ಕಿನಲ್ಲಿ ಎಲ್‌ಇಎನ್‌ಆರ್ ಅನ್ನು ಭವಿಷ್ಯದ ಶಕ್ತಿಯ ಪ್ರಮುಖ ಸಮರ್ಥನೀಯ ಮೂಲಗಳಲ್ಲಿ ಒಂದಾಗಿದೆ. ಇದು ದೂರದ ಸ್ಥಳಗಳಲ್ಲಿ ರೂಮ್ ಹೀಟರ್ ಮತ್ತು ಇವಿ ಚಾರ್ಜರ್‌ಗೆ ಶಾಖದ ಮೂಲವಾಗಿಯೂ ಉಪಯುಕ್ತವಾಗಿದೆ ಎಂದರು.
ಎಲ್‌ಇಎನ್‌ಆರ್‌ನೊಂದಿಗೆ ವಿಶ್ವಾಸಾರ್ಹ ಫಲಿತಾಂಶಗಳನ್ನು ಪಡೆಯುವಲ್ಲಿ ವಿಶ್ವದ ಕೆಲವೇ ಲ್ಯಾಬ್‌ಗಳು ಯಶಸ್ವಿಯಾಗಿದ್ದು, ಇದರಲ್ಲಿ ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದ ಶಕ್ತಿ ಸಂಶೋಧನಾ ಕೇಂದ್ರದಲ್ಲಿರುವ ಅವರ ಲ್ಯಾಬ್ ಕೂಡ ಒಂದು. ಸಂಶೋಧನೆಯಲ್ಲಿ ಫಲಿತಾಂಶಗಳನ್ನು ಪಡೆಯುವುದಕ್ಕಿಂತ ಪ್ರಯತ್ನಗಳು ಹೆಚ್ಚು ಮುಖ್ಯ ಮತ್ತು ಪ್ರಯೋಗಗಳ ನಿರಂತರ ನಿರ್ವಹಣೆ ಮುಖ್ಯ ಎಂದು ಅವರು ತಿಳಿಸಿದರು.
ಎನ್‌ಐಇ ಪ್ರಾಂಶುಪಾಲೆ ಡಾ. ರೋಹಿಣಿ ನಾಗಪದ್ಮ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್. ದೊರೆಸ್ವಾಮಿ, ಐಐಸಿ ಮುಖ್ಯಸ್ಥ ಅಮ್ಜದ್ ಹುಸೇನ್ ಇದ್ದರು. ಎಂ.ಡಿ. ಆಯುಷ್ ಪ್ರಾರ್ಥಿಸಿದರು. ಡಾ.ಎಂ.ಬಿ. ಸಂಕರ್ಶನ್, ಡಾ.ಕೆ.ಬಿ. ನಳಿನಿ ಇದ್ದರು.
138ರಿಂದ 213 ಅಣುಬಾಂಬ್ ತಯಾರಿಸುವಷ್ಟು ಕಚ್ಚಾ ಸಾಮಗ್ರಿ
ನವದೆಹಲಿ: ಗಡಿಯಲ್ಲಿ ಪದೇಪದೇ ಚೀನಾ ತಗಾದೆ ತೆಗೆಯುತ್ತಿರುವಾಗಲೇ ಭಾರತ ತನ್ನ ಅಣ್ವಸ್ತ್ರಗಳ ಆಧುನೀಕರಣ ಪ್ರಕ್ರಿಯೆಯನ್ನು ಮುಂದುವರಿಸಿದೆ. 138ರಿಂದ 213 ಅಣುಬಾಂಬ್ ತಯಾರಿಸುವಷ್ಟು ಕಚ್ಚಾ ಸಾಮಗ್ರಿಯನ್ನು ಹೊಂದಿದೆ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟದ ವರದಿ ಹೇಳಿದೆ. ಈವರೆಗೆ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ತನ್ನ ಅಣ್ವಸ್ತ್ರ ಶಕ್ತಿ ವರ್ಧಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ಚೀನಾದ ಮೇಲೆ ಹೆಚ್ಚು ಗಮನ ನೀಡುತ್ತಿರುವಂತಿದೆ ಎಂದು ಹನ್ಸ್ ಎಂ. ಕ್ರಿಸ್ಟನ್‌ಸೆನ್ ಹಾಗೂ ಮ್ಯಾಟ್ ಕೊರ್ಡಾ ಅವರು ಬರೆದಿರುವ ವರದಿ ಹೇಳುತ್ತದೆ.
700 ಕೇಜಿ (150 ಕೇಜಿ ಹೆಚ್ಚೂಕಡಿಮೆ)ಯಷ್ಟು ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ (weapons grade plutonium) ಅನ್ನು ಭಾರತ ಸೃಷ್ಟಿಸಿಕೊಂಡಿದೆ. ಇದನ್ನು ಬಳಸಿ 138ರಿಂದ 213 ಅಣುಬಾಂಬ್‌ಗಳನ್ನು ತಯಾರಿಸಬಹುದು. ಆದರೆ ಈ ಎಲ್ಲ ಕಚ್ಚಾವಸ್ತುವನ್ನು ಭಾರತ ಬಾಂಬ್ ತಯಾರಿಸಲು ಈವರೆಗೆ ಬಳಕೆ ಮಾಡಿಕೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ ಒಡ್ಡಿದ ಪಾಕ್ ಸಚಿವೆ
ಭಾರತದ ಬಳಿ 8 ವಿವಿಧ ಅಣ್ವಸ್ತ್ರ ಸಾಮರ್ಥ್ಯದ ವ್ಯವಸ್ಥೆಗಳು (nuclear capability systems)ಇವೆ. ಎರಡು ವಿಮಾನ, 4 ನೆಲದಿಂದ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ (ballistic missiles), 2 ಸಮುದ್ರದಿಂದ ಹಾರಿಸಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತ ಹೊಂದಿದೆ. ಇದಲ್ಲದೆ ಇನ್ನೂ 4 ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಗಿಯುವ ಹಂತಕ್ಕೆ ಬಂದಿದೆ. ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ಸಾಮರ್ಥ್ಯ ವಲಯದಲ್ಲಿ ಚೀನಾ ಕೂಡ ಇದೆ ಎಂದು ವಿವರಿಸಿದೆ.
ಭಾರತದ ಬಳಿ 160 ಅಣ್ವಸ್ತ್ರ ಸಿಡಿತಲೆಗಳು ಇವೆ. ಹೊಸ ಕ್ಷಿಪಣಿಗಳಿಗೆ ಅಳವಡಿಸಲು ಹೆಚ್ಚುವರಿ ಸಿಡಿತಲೆಗಳು ಬೇಕು. ಪಾಕಿಸ್ತಾನ 165, ಚೀನಾ 350, ಅಮೆರಿಕ 5428 ಹಾಗೂ ರಷ್ಯಾ (Russia)5977 ಸಿಡಿತಲೆಗಳನ್ನು ಇಟ್ಟುಕೊಂಡಿವೆ ಎಂದು ವಿವರಿಸಿದೆ.
ಚೀನಾ, ಪಾಕ್ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!