ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್ ತಂದೆ ಈರಗೊಂಡ ಕೂಡ ಸಾವು!
ಕ್ರಿಸ್‌ಮಸ್ ರಜೆ ವೇಳೆ ಕಾರು ಅಪಘಾತದಲ್ಲಿ ಮಗ, ಸೊಸೆ, ಮಗಳು ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡಿದ್ದ ಚಂದ್ರಮ್ ಯೇಗಪ್ಪಗೋಳ ಅವರ ತಂದೆ ಈರಗೊಂಡ ಯೇಗಪ್ಪಗೋಳ ಶನಿವಾರ ನಿಧನರಾಗಿದ್ದಾರೆ. ಕುಟುಂಬದ ದುರಂತ ಸಾವಿನಿಂದ ಆಘಾತಕ್ಕೊಳಗಾಗಿದ್ದ ಅವರು, ಅಂದಿನಿಂದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ.
ವಿಜಯಪುರ (ಡಿ.28): ಕ್ರಿಸ್‌ಮಸ್ ಹಬ್ಬದ ರಜೆಗಾಗಿ ಊರಿಗೆ ಬರುವ ವೇಳೆ, ಕಾರಿನ ಮೇಲೆ ಕಂಟೇನರ್ ಬಿದ್ದು ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ ಕಂಪನಿಯ ಮಾಲೀಕ ಚಂದ್ರಮ್ ಯೇಗಪ್ಪಗೋಳ ಹಾಗೂ ಅವರ ಇಡೀ ಕುಟುಂಬ ಸಾವು ಕಂಡಿತ್ತು. ಚಂದ್ರಮ್ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಸಾವು ಕಂಡಿದ್ದರು. ಆರು ಮಂದಿಯ ದಾರುಣ ಸಾವಿಗೆ ಇಡೀ ಕರ್ನಾಟಕ ಶೋಕ ವ್ಯಕ್ತಪಡಿಸಿತ್ತು. ಡಿಸೆಂಬರ್ 22 ರಂದು ಪ್ರಕರಣದ ನಡೆದಿದ್ದರೆ, ಮರುದಿನ ಅವರ ಹುಟ್ಟೂರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿಯಲ್ಲಿ ಶೋಕ ಸಾಗರದ ನಡುವೆ ಅಂತ್ಯಸಂಸ್ಕಾರ ನೆರವೇರಿತ್ತು.
ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್?
ಮಗ, ಮಗಳು, ಸೊಸೆ ಹಾಗೂ ಮೊಮ್ಮಕ್ಕಳ ಮೃತದೇಹವನ್ನು ಕಂಡು ಆಘಾತಕ್ಕೆ ಒಳಗಾಗಿದ್ದ ಚಂದ್ರಮ್ ಯೇಗಪ್ಪಗೋಳ ಅವರ ತಂದೆ ಈರಗೊಂಡ ಯೇಗಪ್ಪಗೋಳ ಶನಿವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
Nelamangala Accident: ಮಹಾರಾಷ್ಟ್ರದಲ್ಲಿರುವ ವೃದ್ಧ ತಾಯಿಗಿನ್ನೂ ಮುಟ್ಟಿಲ್ಲ ಮಗನ ಸಾವಿನ ಸುದ್ದಿ!
ಕಣ್ಣೆದುರಲ್ಲೇ ಮಗ, ಮಗಳು, ಸೊಸೆ, ಮೊಮ್ಮಕ್ಕಳ ಚಿತೆಗೆ ಬೆಂಕಿ ಇರಿಸಿದ್ದನ್ನು ನೋಡಿ ಈರಗೊಂಡ ಆಘಾತಕ್ಕೆ ಒಳಗಾಗಿದ್ದರು. ಅಂದಿನಿಂದಲೂ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅದಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಬಾಧಿಸುತ್ತಿತ್ತು. 6 ಮೃತದೇಹ ಕಂಡಿದ್ದ ಮನೆಯಲ್ಲಿ ಮತ್ತೆ ಅರು ದಿನಕ್ಕೆ ಇನ್ನೊಂದು ಸಾವು ಆದಂತಾಗಿದೆ.