ಲಾಕ್‌ಡೌನ್‌ ಸಡಿಲ: ಸೋಮವಾರದಿಂದ ಬಸ್‌ ಸಂಚಾರ ಪ್ರಾರಂಭ

ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ ಸಂಚಾರ ಪ್ರಾರಂಭ| ಎನ್‌ಇಕೆಎಸ್‌ಆರ್‌ಟಿಸಿ ಈ ಕುರಿತು ಸಿದ್ಧತೆ ಮಾಡಿಕೊಂಡಿದ್ದು, ಮುಖ್ಯ ಪಾಯಿಂಟ್‌ಗಳಿಗೆ ಮಾತ್ರ ಪ್ರಾರಂಭ ಮಾಡಲಿದೆ| ಬಸ್‌ ಸಂಚಾರಕ್ಕೂ ಮೊದಲು ಡೆಟಾಲ್‌ ಹಾಕಿ ಸ್ವಚ್ಛ ಮಾಡಲಾಗುತ್ತದೆ| ಚಾಲಕರಿಗೆ ಮತ್ತು ನಿರ್ವಾಹಕರಿಗೆ ಇಬ್ಬರಿಗೂ ಮಾಸ್ಕ್‌ ಕಡ್ಡಾಯ|ಪ್ರಯಾಣಿಕರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡೇ ಬರಬೇಕು| ಬಸ್ಸಿನಲ್ಲಿ ಸ್ಯಾನಿಟೈಸರ್‌ ಇಡಲಾಗುತ್ತಿದ್ದು, ಕಡ್ಡಾಯವಾಗಿ ಬಳಕೆ ಮಾಡಲಾಗುತ್ತದೆ|

NEKRTC Bus Service Will be start on Monday in Koppal district

ಕೊಪ್ಪಳ(ಮೇ.03): ಜಿಲ್ಲಾದ್ಯಂತ ಸೋಮವಾರ ಸ್ಥಳೀಯವಾಗಿ (ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ) ಓಡಾಡುವ ಬಸ್‌ಗಳನ್ನು ಪ್ರಾರಂಭವಾಗಲಿವೆ. ಎನ್‌ಇಕೆಎಸ್‌ಆರ್‌ಟಿಸಿ ಈ ಕುರಿತು ಸಿದ್ಧತೆ ಮಾಡಿಕೊಂಡಿದ್ದು, ಮುಖ್ಯ ಪಾಯಿಂಟ್‌ಗಳಿಗೆ ಮಾತ್ರ ಪ್ರಾರಂಭ ಮಾಡಲಿದೆ.

ಪ್ರಾರಂಭದ ದಿನ ಸುಮಾರು 8 ಪಾಯಿಂಟ್‌ಗೆ ಬಸ್‌ ಸಂಚಾರ ಮಾಡುವ ಕುರಿತು ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ಇದೆಲ್ಲವೂ ಪ್ರಯಾಣಿಕರನ್ನು ಅವಲಂಬಿಸಿರುತ್ತದೆ. ಬಸ್‌ ಸಂಚಾರಕ್ಕೂ ಮೊದಲು ಡೆಟಾಲ್‌ ಹಾಕಿ ಸ್ವಚ್ಛ ಮಾಡಲಾಗುತ್ತದೆ, ಚಾಲಕರಿಗೆ ಮತ್ತು ನಿರ್ವಾಹಕರಿಗೆ ಇಬ್ಬರಿಗೂ ಮಾಸ್ಕ್‌ ಕಡ್ಡಾಯವಾಗಿರುತ್ತದೆ. ಅಲ್ಲದೆ ಪ್ರಯಾಣಿಕರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡೇ ಬರಬೇಕು. ಬಸ್ಸಿನಲ್ಲಿ ಸ್ಯಾನಿಟೈಸರ್‌ ಇಡಲಾಗುತ್ತಿದ್ದು, ಕಡ್ಡಾಯವಾಗಿ ಬಳಕೆ ಮಾಡಲಾಗುತ್ತದೆ. ಪ್ರಯಾಣಿಕ​ರು ​ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಇರುತ್ತದೆ.

ಲಾಕ್‌ಡೌನ್ ಎಫೆಕ್ಟ್: ಋಷಿಮುಖ ಪರ್ವತ ಗುಹೆಯಲ್ಲಿ ಇಟಲಿ ಪ್ರವಾಸಿಗ ಲಾಕ್‌, ಆಹಾರಕ್ಕಾಗಿ ಪರದಾಟ..!

72800 ರುಪಾಯಿ ದಂಡ

ಜಿಲ್ಲಾದ್ಯಂತ ಐದು ಬೈಕ್‌ ವಶಪಡಿಸಿಕೊಂಡು ಸುಮಾರು 72800 ರುಪಾಯಿ ದಡಂವನ್ನು ಶನಿವಾರ ವಸೂಲಿ ಮಾಡಲಾಗಿದೆ. ಹೆಲ್ಮೆಟ್‌ ಇಲ್ಲದ 70 ಕೇಸ್‌ ಸೇರಿದಂತೆ ವಾಹನ ಚಾಲನಾ ಪರ​ವಾ​ನ​ಗಿ ಅಧಿಕ ಪ್ರಯಾಣಿಕರು ಸೇರಿದಂತೆ ಮೊದಲಾದ ಸುಮಾರು 225 ಪ್ರಕರಣಗಳನ್ನು ದಾಖಲು ಮಾಡಿ, ಇಷ್ಟು ದಂಡವನ್ನು ವಸೂಲಿ ಮಾಡಲಾಗಿದೆ.
 

Latest Videos
Follow Us:
Download App:
  • android
  • ios