ಲಾಕ್‌ಡೌನ್ ಎಫೆಕ್ಟ್: ಋಷಿಮುಖ ಪರ್ವತ ಗುಹೆಯಲ್ಲಿ ಇಟಲಿ ಪ್ರವಾಸಿಗ ಲಾಕ್, ಆಹಾರಕ್ಕಾಗಿ ಪರದಾಟ..!
ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾಸರೋವರದಲ್ಲಿ, ಗವಿರಂಗನಾಥ, ವಾಲಿಕಿಲ್ಲಾ ಪ್ರದೇಶಗಳನ್ನು ವೀಕ್ಷಿಸಿದ್ದ ಇಟಲಿ ದೇಶದ ಪ್ರವಾಸಿಗ| ಸ್ವದೇಶಕ್ಕೆ ಹೋಗುವಷ್ಟರಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಆಗಿದ್ದರಿಂದ ಋಷಿಮುಖ ಪರ್ವತದ ಗುಹೆಯಲ್ಲಿ ವಾಸವಾದ ಮಾರಿಯಾನ್|
ರಾಮಮೂರ್ತಿ ನವಲಿ
ಗಂಗಾವತಿ(ಮೇ.02): ಕಳೆದ ನಾಲ್ಕು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಹಂಪಿ ಮತ್ತು ಆನೆಗೊಂದಿ ಐತಿಹಾಸಿಕ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಇಟಲಿ ದೇಶದ ಪ್ರವಾಸಿಗ ಲಾಕ್‌ಡೌನ್‌ನಿಂದಾಗಿ ಸ್ವದೇಶಕ್ಕೆ ಮರಳು ಆಗದೆ ಋಷಿಮುಖದ ಪರ್ವತದ ಗುಹೆಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
40 ವರ್ಷದ ಮಾರಿಯಾನ್ ಎಂಬುವರು ಜನವರಿ ತಿಂಗಳಲ್ಲಿ ಇಟಲಿ ದೇಶದಿಂದ ಆಗಮಿಸಿದ್ದರು. ಇಲ್ಲಿಯ ಐತಿಹಾಸಿಕ ಪ್ರಸಿದ್ದ ಸ್ಥಳಗಳಾಗಿರುವ ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾಸರೋವರದಲ್ಲಿ, ಗವಿರಂಗನಾಥ, ವಾಲಿಕಿಲ್ಲಾ ಪ್ರದೇಶಗಳನ್ನು ವೀಕ್ಷಿಸಿ ಸ್ವದೇಶಕ್ಕೆ ಹೋಗುವಷ್ಟರಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿದ್ದರಿಂದ ಋಷಿಮುಖ ಪರ್ವತದ ಗುಹೆಯಲ್ಲಿ ವಾಸವಾಗಿದ್ದಾರೆ.
ಲಾಕ್‌ಡೌನ್: ಗಂಗಾವತಿಯಲ್ಲಿ ಸಿಲುಕಿದ ಜೈನ ಮುನಿಗಳು
ಸಾಧುನಾದ ಪ್ರವಾಸಿಗ:
ಇಟಲಿಯಿಂದ ಭಾರತಕ್ಕೆ ಅಗಮಿಸಿದ್ದ ಮಾರಿಯಾನ್ ಈಗ ಸಾಧುನಾಗಿದ್ದಾರೆ. ಪರ್ವತದ ಗುಹೆಯಲ್ಲಿ ದಿನ ನಿತ್ಯ ಈಶ್ವರ ಪೂಜೆ, ಬೆಳಿಗ್ಗೆ ಉಪಹಾರ, ಮದ್ಯಾಹ್ನ ಊಟ ಮಾಡುತ್ತಿರುವ ಅವರು, ಲಾಕ್‌ಡೌನ್ ಆಗಿದ್ದರಿಂದ ಯಾವುದೇ ಸೌಲಭ್ಯ ಇಲ್ಲದ ಕಾರಣ ಸ್ಥಳೀಯರು ಸಹಕಾರ ನೀಡಿದ್ದಾರೆ.
ಕಿರ್ಲೋಸ್ಕರ ನೌಕರ ಎಂ.ವೆಂಕಟರಮಣ ಎಂಬುವರು ಸಂಕಷ್ಟದಲ್ಲಿ ಸಿಲುಕಿದ ಮಾರಿಯಾನ್ ದಿನಸಿ ಕಿಟ್ ನೀಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಮಾರಿಯನ್ ಅವರು, ಲಾಕ್‌ಡೌನ್ ಮುಗಿದ ನಂತರ ವಾಪಸ್ ಇಟಲಿಗೆ ಹೋಗುವುದಾಗಿ ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ:
ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಹಬ್ಬುತ್ತಿದ್ದ ಹಿನ್ನಲೆಯಲ್ಲಿ ತಾಲೂಕಾಡಳಿತ ನೇತೃತ್ವದಲ್ಲಿ ವೈದ್ಯಕೀಯ ತಂಡ ಸಾಧು ಮಾರಿಯಾನ್ ಅವರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಯಾವುದೇ ತರಹದ ಆತಂಕ ಇರುವುದಿಲ್ಲ ಎಂದು ತಹಸೀಲ್ದಾರ ಚಂದ್ರಕಾಂತ್ ತಿಳಿಸಿದ್ದಾರೆ.