Asianet Suvarna News Asianet Suvarna News

ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳ​ಲ್ಲಿ ನಿರ್ಲ​ಕ್ಷ್ಯತೆ, ತಪ್ಪು ಸರಿ​ಪ​ಡಿ​ಸಿ​ಕೊ​ಳ್ಳಿ: ಶಾಸಕ ಹಾಲಪ್ಪ

ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳದಲ್ಲಿ ಗುತ್ತಿಗೆದಾರರು, ಎಂಜಿನಿಯರ್‌ಗಳ ನಿರ್ಲಕ್ಷತೆ ಎದ್ದುಕಾಣುತ್ತಿದೆ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಹೇಳಿದರು. 

Negligence correct mistakes among development workers says Mla H Halappa gvd
Author
First Published Jan 1, 2023, 9:34 PM IST

ಸಾಗರ (ಜ.01): ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳದಲ್ಲಿ ಗುತ್ತಿಗೆದಾರರು, ಎಂಜಿನಿಯರ್‌ಗಳ ನಿರ್ಲಕ್ಷತೆ ಎದ್ದುಕಾಣುತ್ತಿದೆ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷೇತ್ರದ ಶಾಸಕ ಎಚ್‌.ಹಾಲಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪೊಲೀಸ್‌, ಸಂಚಾರ, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ನಗರಸಭೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅವ್ಯವಸ್ಥೆ ಬದಲಾಯಿಸಲು ಏನು ಕ್ರಮ ತೆಗೆದುಕೊಳ್ಳಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಅಪಘಾತ ಸೇರಿದಂತೆ ಹೆಚ್ಚಿನ ದುರ್ಘಟನೆ ನಡೆದಾಗ ಜನರು ಶಾಸಕರನ್ನು, ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಿ ಬೈಯ್ಯುತ್ತಾರೆ. ಆದರೆ ಘಟನೆಯ ಒಳ ಹೊಕ್ಕು ಗಮನಿಸಿದಾಗ ತಪ್ಪು ಎಂಜಿನಿಯರ್‌, ಗುತ್ತಿಗೆದಾರರದ್ದಾಗ್ತಿದೆ. ಅಧಿಕಾರಿಗಳು ಇದನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದರು. ನಗರಸಭೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೇರಿದಂತೆ ಹಲವೆಡೆ ರಸ್ತೆ ದುರಸ್ತಿ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ. ರೇಡಿಯಂ ಟೇಪ್‌ ಹಾಕಿಲ್ಲ. ಸೂಚನಾ ಫಲಕವಿಲ್ಲ. ಹೊಂಡ ಹೊಡೆದಿದ್ದರೂ ಯಾವುದೂ ಗೊತ್ತಾಗುವಂತಿಲ್ಲ. ಆದ್ದರಿಂದಲೇ ಅಪಘಾತಗಳು ಹೆಚ್ಚುತ್ತಿವೆ. ಇಂಥ ಸೂಕ್ಷ ್ಮ ವಿಷಯಗಳನ್ನೂ ನಾವೇ ನಿಮಗೆ ಕರೆಸಿ ಹೇಳಬೇಕಾ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಪ್ರಶ್ನಿಸಿದರು.

ನೆನಗುದಿಗೆ ಬಿದ್ದ ಗಾರ್ಮೆಂಟ್ಸ್‌ ಘಟಕ ನಿರ್ಮಾಣ: ಚಲುವರಾಯಸ್ವಾಮಿ

ಕಾಮಗಾರಿ ನಡೆಯುವಾಗ ಸಂಚಾರಿ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಗುತ್ತಿಗೆದಾರರ ಕರ್ತವ್ಯ. ಇದರಲ್ಲಿ ಲೋಪವಾದರೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಇಲಾಖೆಗಳ ಮುಖ್ಯ ಅಧಿಕಾರಿಗಳು ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಖಡಕ್‌ ಸೂಚನೆ ನೀಡಿದರು. ಡಿವೈಎಸ್‌ಪಿ ರೋಹನ್‌ ಜಗದೀಶ್‌ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ನಡೆಯುತ್ತಿರುವ 12 ಸ್ಥಳಗಳಲ್ಲಿ (ಬ್ಲಾಕ್‌ ಸ್ಪಾಟ್‌) ಯಾವೆಲ್ಲ ಸುರಕ್ಷತಾ ಕ್ರಮ ತೆಗೆದುಕೊಳ್ಳಬಹುದೆಂದು ಕಳೆದ ಆಗಸ್ಟ್‌ನಲ್ಲೇ ರಾ.ಹೆ. ಅಧಿಕಾರಿಗಳು, ಕಂದಾಯ, ಲೋಕೋಪಯೋಗಿ, ಮೊದಲಾದ ಎಲ್ಲ ಇಲಾಖೆಗಳಿಗೂ ಪತ್ರ ಮುಖೇನ ಸೂಚಿಸಿದ್ದೆವು. ಆದರೂ ಯಾವುದೇ ಸುರಕ್ಷತಾ ಕ್ರಮ ಜರುಗಿಲ್ಲ. ಅಂತಿಮವಾಗಿ ಪೊಲೀಸರು ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂದು ದೋಷಾರೋಪ ಮಾಡಲಾಗುತ್ತದೆ. 

ಗುಜರಾತ್‌ ರಾಜಕಾರಣ ಮಂಡ್ಯದಲ್ಲಿ ನಡೆಯೋಲ್ಲ: ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ

ಸಾಗರದಲಿ ಅಗತ್ಯಕ್ಕಿಂತ ಕಡಿಮೆ ಪೊಲೀಸರಿದ್ದು, ಹಲವು ವಿಭಾಗಗಳನ್ನು ನಿರ್ವಹಿಸಬೇಕಿದೆ. ಎಲ್ಲರೂ ಒಟ್ಟಾಗಿ, ಕೆಲಸ ಮಾಡಿದರೆ ಜನರ ಸುರಕ್ಷತೆಗೂ ಸಹಕಾರಿಯಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಪೊಲೀಸರು ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದರೆ, ಆರ್‌ಟಿಓದಲ್ಲಿ 1600ರಷ್ಟಿದೆ. ಇಬ್ಬರೂ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದರು. ಪೌರಾಯುಕ್ತ ಎಚ್‌.ಕೆ.ನಾಗಪ್ಪ, ಎಆರ್‌ಟಿ ಓಂಕೇಶ್‌, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ರಾಜಪ್ಪ, ರಾ.ಹೆ. ಸಹಾಯಕ ಅಭಿಯಂತರ ನಿಂಗಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಮಂಜುನಾಥ್‌, ಸಣ್ಣ ನೀರಾವರಿ ನಿಗಮದ ಎಇ ಸತೀಶ್‌ಕುಮಾರ್‌, ಹಲವು ಇಲಾಖೆ ಅಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios