ಸೆ. 29 ರಿಂದ ಬಾಳೆಹೊನ್ನೂರಿನಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವ

ಪಟ್ಟಣದ ಸೆ.29 ರಿಂದ ಅ.8 ರವರೆಗೆ 10 ನೇ ವರ್ಷದ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ| ಕಳೆದ 9 ವರ್ಷಗಳ ಹಿಂದೆ ಆರಂಭಿಸಿದ ನವರಾತ್ರಿ ಪೂಜಾ ಮಹೋತ್ಸವವು ಈ ಬಾರಿ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ| ಪ್ರತಿ ಬಾರಿಯಂತೆ ಈ ಬಾರಿಯೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದುರ್ಗಾ ಸನ್ನಿಧಿಯಲ್ಲಿ ನಡೆಯಲಿದೆ| 

Navaratri Mahotsava Will be Held at Balehonnuru on Sep.29th

ಬಾಳೆಹೊನ್ನೂರು:(ಸೆ.27) ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಸೆ.29 ರಿಂದ ಅ.8  ರವರೆಗೆ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ 10 ನೇ ವರ್ಷದ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ವೈ.ಮೋಹನ್‌ಕುಮಾರ್ ಹಾಗೂ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಹೇಳಿದರು. 

ಗುರುವಾರ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 9 ವರ್ಷಗಳ ಹಿಂದೆ ಆರಂಭಿಸಿದ ನವರಾತ್ರಿ ಪೂಜಾ ಮಹೋತ್ಸವವು ಈ ಬಾರಿ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದುರ್ಗಾ ಸನ್ನಿಧಿಯಲ್ಲಿ ನಡೆಯಲಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ದುರ್ಗಾದೇವಿ ಪ್ರತಿಷ್ಠಾಪನೆ, ಸಪ್ತಶತೀ ಪಾರಾಯಣಾದಿ, ತ್ರಿಕಾಲ ಪೂಜಾ ಸೇವೆಗಳನ್ನು ಸನ್ನಿಧಿಯಲ್ಲಿ ನಡೆಸಲಿದೆ. ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸೆ.29 ರಂದು ಬೆಳಗ್ಗೆ ದುರ್ಗಾದೇವಿ ಪ್ರತಿಷ್ಠಾಪನೆ, ಬ್ರಾಹ್ಮೀಪೂಜೆ, ಶ್ರೀದೇವಿಗೆ ಹಂಸವಾಹಿನಿ ಅಲಂಕಾರ, ಸಂಜೆ ಹೊಸನಗರದ ಅಕ್ಷರ ಶಿಕ್ಷಣ ಕಲಾಸಂಘದಿಂದ ಶ್ರೀಕೃಷ್ಣ ಲೀಕೆ ಕಂಸವಧೆ ಯಕ್ಷಗಾನ ಪ್ರಸಂಗ ನಡೆಯಲಿದೆ. 

ಸೆ.30ರಂದು ಮಾಹೇಶ್ವರಿ ಪೂಜಾ ಪಾರಾಯಣ, ಸಂಜೆ ಕೊಪ್ಪದ ಶ್ರೀನಿಧಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ, ಅ.1 ರಂದು ಮಯೂರವಾಹಿನಿ ಕೌಮಾರೀ ಪೂಜಾ ಪಾರಾಯಣ, ಸಂಜೆ ಮಂಗಳೂರಿನ ಗಾನ ನೃತ್ಯ ಅಕಾಡೆಮಿಯಿಂದ ನೃತ್ಯ ಸಂಗಮ ಕಾರ್ಯಕ್ರಮ, ಅ.2 ರಂದು ವೈಷ್ಣವಿರೂಪಿಣಿ ಪೂಜಾ ಪಾರಾಯಣ, ಸಂಜೆ ಮೈಸೂರಿನ ಸುಮಂತ್ ವಸಿಷ್ಠ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. 

ಅ.3 ರಂದು ವಾರುಣೀ ರೂಪಿಣಿ ಪೂಜಾ ಪಾರಾಯಣ, ಸಂಜೆ ಕಾಪು ರಂಗತರಂಗ ಕಲಾವಿದರಿಂದ ತುಳು ಹಾಸ್ಯಮಯ ನಾಟಕ, 4  ರಂದು ಇಂದ್ರಾಣೀ ರೂಪಿಣಿ ಪೂಜಾ ಪಾರಾಯಣ, ಸಂಜೆ ತೀರ್ಥಹಳ್ಳಿಯ ಕೆ.ಜಿ.ಶಶಿಕುಮಾರ್ ಕಾರಂತ್ ತಂಡದಿಂದ ಭಕ್ತಿಭಾರತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. 

ಅ.5 ರಂದು ಮೋಹಿನಿ ರೂಪಿಣಿ ಪೂಜಾ ಪಾರಾಯಣ, ಮಕ್ಕಳಿಗೆ ಅಕ್ಷರಾಭ್ಯಾಸ, ಸಂಜೆ ವಿಘ್ನೇಶ್ವರ ಕಲಾಬಳಗದ ವತಿಯಿಂದ ಹಾಸ್ಯಮಯ ಕನ್ನಡ ನಾಟಕ, 6 ರಂದು ದುರ್ಗಾ ರೂಪಿಣಿ ಪೂಜಾ ಪಾರಾಯಣ, ಶ್ರೀದೇವಿಗೆ ಹೂವಿನಪೂಜೆ, ಸಂಜೆ ಉಡುಪಿಯ ನೃತ್ಯ ನಿಕೇ ತನದ ವತಿಯಿಂದ ನೃತ್ಯ ಕಲಾರ್ಪಣಂ ಕಾರ್ಯ ಕ್ರಮ ನಡೆಯಲಿದೆ ಎಂದು ತಿಳಿಸಿದರು. 

ಅ.7 ರಂದು ರಾಜರಾಜೇಶ್ವರಿ ರೂಪಿಣಿ ಪೂಜಾ ಪಾರಾಯಣ, ಆಯುಧ ಪೂಜೆ, ಸಂಜೆ 7  ಗಂಟೆಗೆ ನವರಾತ್ರಿ ಮಹೋತ್ಸವದ ಸಮಾರೋಪದ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭಾಗವಹಿಸಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. 

ಸಮಾರಂಭದಲ್ಲಿ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್ ಭಾಗವಹಿಸಲಿದ್ದಾರೆ. ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಪ್ರೊಫೆಸರ್ ಡಾ. ಬಿ.ಎಂ. ವೆಂಕಟೇಶ್ ಅವರಿಗೆ ದುರ್ಗಾದೇವಿ ಶ್ರೀರಕ್ಷೆ ನೀಡಿ ಆಶೀರ್ವದಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ ಎಂದು ಹೇಳಿದರು. 

ಅ.8 ರಂದು ನವರಾತ್ರಿ ಕಡೆಯ ದಿನ ಶ್ರೀದೇವಿಗೆ ಗಜಲಕ್ಷ್ಮೀ ಪೂಜಾ ಪಾರಾಯಣ, ದುರ್ಗಾಹೋಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಉಡುಪಿಯ ಹಿನ್ನೆಲೆ ಗಾಯಕ ಯಶವಂತ್ ಅವರಿಂದ ಸ್ವರ ಮಾಧುರ್ಯ ಸುಗಮ ಸಂಗೀತ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ 12 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯ ಬಳಿಕ ದುರ್ಗಾದೇವಿಯ ಜಲಸ್ತಂಭನಾ ಶೋಭಾ ಯಾತ್ರೆಯು ವೈವಿಧ್ಯ ಮಯ ಕಲಾತಂಡ ಗಳೊಂದಿಗೆ ಪಟ್ಟಣದಲ್ಲಿ ನಡೆದು ಭದ್ರಾನದಿ ಯಲ್ಲಿ ದುರ್ಗಾದೇವಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾವುದು ಎಂದು ತಿಳಿಸಿದರು. 
 

Latest Videos
Follow Us:
Download App:
  • android
  • ios