National Youth Festival:15ರಂದು ಗಿನ್ನಿಸ್‌ ದಾಖಲೆಗೆ ಯೋಗಥಾನ್‌!

ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ 10 ಸಾವಿರ ಯೋಗಬೋಧಕರು ಹಾಗೂ 10 ಲಕ್ಷಕ್ಕೂ ಅಧಿಕ ಯೋಗಾಸಕ್ತರನ್ನು ಸೇರಿಸಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಜ. 15ರಂದು ಯೋಗಥಾನ್‌ ನಡೆಸಲು ಮುಂದಾಗಿದೆ.

National Youth Festival Yogathon for Guinness record on 15th at dharwad rav

ಧಾರವಾಡ (ಜ.13) : ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ 10 ಸಾವಿರ ಯೋಗಬೋಧಕರು ಹಾಗೂ 10 ಲಕ್ಷಕ್ಕೂ ಅಧಿಕ ಯೋಗಾಸಕ್ತರನ್ನು ಸೇರಿಸಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಜ. 15ರಂದು ಯೋಗಥಾನ್‌ ನಡೆಸಲು ಮುಂದಾಗಿದೆ.

ಇದರ ಭಾಗವಾಗಿ ಅಂದು ಕರ್ನಾಟಕ ವಿಶ್ವವಿದ್ಯಾಲಯ(Karnataka University)ದ ರಾಣಿ ಚೆನ್ನಮ್ಮ ಕ್ರೀಡಾಂಗಣ, ಕೃಷಿ ವಿವಿಯ ಕ್ರೀಡಾಂಗಣ, ಆರ್‌.ಎನ್‌. ಶೆಟ್ಟಿಜಿಲ್ಲಾ ಕ್ರೀಡಾಂಗಣ ಮತ್ತು ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್‌ ಮೈದಾನದಲ್ಲಿ ಬೃಹತ್‌ ಯೋಗಾಥಾನ್‌(Yogathon) ಸಂಘಟಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಅಂದು ಬೆಳಗ್ಗೆ ಅವಳಿ ನಗರದ ಈ ನಾಲ್ಕು ಮೈದಾನಗಳಲ್ಲಿ ಬೆಳಗ್ಗೆ 6.30ರಿಂದ 9.30ರ ವರೆಗೆ ಯೋಗಾಥಾನ್‌ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿರುವ 7,500 ಪ್ರತಿನಿಧಿಗಳು ಮತ್ತು ಧಾರವಾಡ ಜಿಲ್ಲೆಯ 22 ಸಾವಿರ ಯೋಗಾಸಕ್ತರು ಭಾಗವಹಿಸಲಿದ್ದಾರೆ. ಕ್ರೀಡಾಂಗಣಗಳಲ್ಲಿ ಯೋಗಾಥಾನ್‌ ಯಶಸ್ವಿಗಾಗಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಪ್ರತಿ ಯೋಗಾಪಟುಗೆ ನಿರ್ದಿಷ್ಟಸ್ಥಳ ಗುರುತಿಸಿ, ಸುಣ್ಣದ ಗೆರೆ ಹಾಕಲಾಗಿದೆ.

Kanakapura: ಉತ್ತಮ ಆರೋ​ಗ್ಯಕ್ಕೆ ಯೋಗಾ​ಸ​ನ ಮದ್ದು: ಡಿ.ಕೆ.ಶಿವಕುಮಾರ್‌

ಈ ಹಿಂದೆ ರಾಜಸ್ಥಾನದಲ್ಲಿ 1.6 ಲಕ್ಷ ಜನರಿಂದ ನಿರ್ಮಿಸಲಾಗಿದ್ದ ಯೋಗ ದಾಖಲೆಯನ್ನು ಯೋಗಥಾನ್‌ ಮೂಲಕ ಅಳಿಸಿ ಹಾಕಿ ಕರ್ನಾಟಕ ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವನ್ನಾಗಿ ಮಾಡಲಾಗುತ್ತಿದೆ. 13 ಲಕ್ಷ ವಿದ್ಯಾರ್ಥಿಗಳು, 12000 ಯೋಗಬೋಧಕರು ಮತ್ತು 8000ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ವೆಬ್‌ ಡಿಡಿಡಿ.yಟಜaಠಿhಟ್ಞ2022.್ಚಟಞ ನಲ್ಲಿ ಈ ವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯು ಈ ಕಾರ್ಯಕ್ರಮದ ಜ್ಞಾನ ಪಾಲುದಾರ (ಓ್ಞಟಡ್ಝಿಛಿdಜಛಿ Pa್ಟಠ್ಞಿಛ್ಟಿ) ವಾಗಿದ್ದು, ಯೋಗಪಟುಗಳಿಗೆ ತರಬೇತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಿದೆ.

ಶವಾಸನದಿಂದ ಏಳಲು ಮನಸ್ಸು ಬರೋಲ್ಲ, ಆದರೆ, ಅದನ್ನು ಬೇಕಾಬಿಟ್ಟಿ ಮಾಡಬಾರದು!

ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಯೋಗಥಾನ್‌ ಕಾರ್ಯಕ್ರಮಕ್ಕೆ ನೋಂದಾಯಿಸಲು ಪ್ರಥಮ ಮೂರು ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ಬಹುಮಾನ ನೀಡಲಾಗುವುದು. 500ರಿಂದ 1000 ವಿದ್ಯಾರ್ಥಿಗಳನ್ನು ಯೋಗಥಾನ್‌ ಕಾರ್ಯಕ್ರಮಕ್ಕೆ ನೋಂದಾಯಿಸುವ ಶಾಲೆ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗೆ ಯೋಗ ಸರ್ಟಿಫಿಕೇಶನ್‌ ಬೋರ್ಡ್‌ನಿಂದ ಪ್ರಮಾಣಿಕೃತ ಯೋಗ ಕೇಂದ್ರ ಎಂದು ಗುರುತಿಸಲಾಗುತ್ತದೆ. ಇದಕ್ಕಾಗಿ ನಿಗದಿಪಡಿಸಿರುವ ಶುಲ್ಕ . 25,000 ಪಾವತಿಸುವ ಬದಲು ಯೋಗಥಾನ್‌ ಕಾರ್ಯಕ್ರಮದ ಮೂಲಕ ಕೇವಲ . 1,000 ಶುಲ್ಕವನ್ನಷ್ಟೇ ಪಾವತಿ ಮಾಡಬೇಕಾಗುತ್ತಿದೆ.

Latest Videos
Follow Us:
Download App:
  • android
  • ios