Asianet Suvarna News Asianet Suvarna News

ಧಾರವಾಡದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ, ಕೃಷಿ ವಿಜ್ಞಾನಿಗಳ ಚರ್ಚಾಗೋಷ್ಠಿ

ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ,   ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ, ಹಾಗೂ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಇಂದು  ರೈತರ ಮತ್ತು ಕೃಷಿ ವಿಜ್ಞಾನಿಗಳ ಸಂವಾದ ಮತ್ತು ಕಿಸಾನ ಗೋಷ್ಠಿಯನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.

National Farmers Day Celebration  Agricultural Scientists Discussion in Dharwad gow
Author
First Published Dec 23, 2022, 9:14 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ(ಡಿ.23): ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ,   ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ, ಹಾಗೂ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಇಂದು  ರೈತರ ಮತ್ತು ಕೃಷಿ ವಿಜ್ಞಾನಿಗಳ ಸಂವಾದ ಮತ್ತು ಕಿಸಾನ ಗೋಷ್ಠಿಯನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಭಾರತ ದೇಶದ 5 ನೇ ಪ್ರಧಾನ ಮಂತ್ರ್ರಿಗಳಾದ ಶ್ರೀ ಚೌಧರಿ ಚರಣಸಿಂಗ್‍ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನಿರೇರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರು ಮಾತನಾಡಿ, ಬದಲಾಗುತ್ತಿರುವ ಹವಾಮಾನ ವೈಪರಿತ್ಯಕ್ಕನುಗುಣವಾಗಿ ರೈತರು ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನಗಳಿಗಾಗಿ ಕೃಷಿ ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಳಿಸಿದರು.  

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ವೈ.ಎನ್. ಪಾಟೀಲ ಅವರು ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಲು ಕೃಷಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿ, ರೈತರೊಂದಿಗೆ ತಮ್ಮ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕದ ನಿರ್ವಹಣಾ ಅನುಭವ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಸಿ. ಕುಂದಗೋಳ ಅವರು ಮಾತನಾಡಿ, ರೈತರು ನೂತನ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಸುಸ್ಥಿರಗೊಳಿಸಿಕೊಳ್ಳಲು ತಿಳಿಸಿದರು. 

ಪ್ರಗತಿಪರ ರೈತ ಮಹಿಳೆ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ದ್ರಾಕ್ಷಾಯಿಣಿ ರಾಮನಗೌಡ ಅವರು ತಮ್ಮ ಕೃಷಿ ಅನುಭವಗಳೊಂದಿಗೆ ಪ್ರತಿ ರೈತ ಕುಟುಂಬದಲ್ಲಿ ದೇಸಿ ಹಸು ಸಾಕಾಣಿಕೆ ಮಾಡಿ ಹಂತ ಹಂತವಾಗಿ ಸಾವಯವ ಕೃಷಿಗೆ ಬದಲಾಗಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲೆಯ 7 ಪ್ರಗತಿಪರ ರೈತ,  ರೈತ ಮಹಿಳೆಯರಿಗೆ ಅವರ ಕೃಷಿಸಾಧನೆಗಳನ್ನು ಗುರುತಿಸಿ ಆತ್ಮ ಯೋಜನೆಯಡಿ ಸನ್ಮಾನ ಮಾಡಲಾಯಿತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳ ನೋಡಲ್ ಅಧಿಕಾರಿಗಳಾದ ಡಾ. ಶ್ರೀಪಾದ ಕುಲಕರ್ಣಿ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎ. ಬಿರಾದಾರ, ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಂಬಾಪುರ ಫಾರ್ಮನ ಬೇಸಾಯ ಶಾಸ್ತ್ರಜ್ಞರಾದ ಡಾ. ಆನಂದ ಮಾಸ್ತಿಹೊಳಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅತಿಥಿ ಉಪನ್ಯಾಸ ನೀಡಿದರು. 

ಮೃತ ವ್ಯಕ್ತಿಯ ಹೆಸರಲ್ಲಿ ನರೆಗಾ ಬಿಲ್‌?

ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರು : 2021-22 ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಡಾ.ದಾಕ್ಷಾಯಿಣಿ ರಾಮನಗೌಡರ, ಮಲ್ಲಪ್ಪ ಬೇಕವಾಡಕರ ಅರುಣಕುಮಾರ್ ವಗೆನ್ನವರ, ಕಲ್ಯಾಣಕುಮಾರ ಜಾಡಬುತ್ತಿ, ರವಿ ದಂಡಿನ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಗೆ ಶಿವಾನಂದ ಹಿರೇಮಠ ಹಾಗೂ ಕೃಷಿಯಲ್ಲಿ ಶ್ರೇಷ್ಟ ಸಾಧನೆಗಾಗಿ ಪ್ರಗತಿಪರ ಹಿರಿಯ ರೈತ ರುದ್ರಪ್ಪ ಕುಂದಗೋಳ ಅವರಿಗೆ ಮತ್ತು ಉದಯೋನ್ಮುಖ ಕೃಷಿ ಪಂಡಿತ ರಾಜ್ಯಮಟ್ಟದ ಕೃಷಿ ಇಲಾಖೆಯ ಪ್ರಶಸ್ತಿಯನ್ನು ಪಡೆದ ಹುಬ್ಬಳ್ಳಿಯ ಉಳವಪ್ಪ ಟಿ. ದಾಸನೂರ ಅವರನ್ನು ಕೃಷಿ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

95,000 ಅನರ್ಹ ರೈತರಿಗೆ ಪಿಎಂ ಕಿಸಾನ್‌ ಹಣ..!

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ   ಶ್ರೀನಿವಾಸ ಕೋಟ್ಯಾನ್, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ, ಸಿಬ್ಬಂದಿ ಹಾಗೂ  ಜಿಲ್ಲೆಯ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು, ಪಾಲ್ಗೊಂಡಿದ್ದರು. ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ಬಮ್ಮಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.   ಡಾ. ಪ್ರವೀಣ ಗೋರೋಜಿ ವಂದಿಸಿದರು. ಕೃಷಿ ಅಧಿಕಾರಿ ಮಹದೇವ ಸರಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Follow Us:
Download App:
  • android
  • ios