ಗ್ರಾಮದ ಅಭಿವೃದ್ಧಿಗೆ ನರೇಗಾ ಸಹಕಾರಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸುವುದೇ ಗ್ರಾಪಂ ಸದಸ್ಯರ ಪ್ರಮುಖ ಕರ್ತವ್ಯ ತುಂಬಾಡಿ ಗ್ರಾಪಂ ನೂತನ ಅಧ್ಯಕ್ಷ ಹರೀಶ್‌ಬಾಬು ಪಿ.ಎಸ್‌. ತಿಳಿಸಿದರು.

Narega is helpful for village development snr

  ಕೊರಟಗೆರೆ :  ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸುವುದೇ ಗ್ರಾಪಂ ಸದಸ್ಯರ ಪ್ರಮುಖ ಕರ್ತವ್ಯ ತುಂಬಾಡಿ ಗ್ರಾಪಂ ನೂತನ ಅಧ್ಯಕ್ಷ ಹರೀಶ್‌ಬಾಬು ಪಿ.ಎಸ್‌. ತಿಳಿಸಿದರು.

ತಾಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಬುಧವಾರ ಪದಗ್ರಹಣ ಸ್ವೀಕರಿಸಿದ ವೇಳೆ ಮಾತನಾಡಿದರು. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿ. ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಗೆ ನರೇಗಾ ಯೋಜನೆಯ ಅನುದಾನ ಬಳಕೆಗೆ ಬಳಕೆಗೆ ಶ್ರಮಿಸುತ್ತೇವೆ. ರೈತಾಪಿವರ್ಗ ಮತ್ತು ಶ್ರಮಿಕರು ನರೇಗಾ ಯೋಜನೆಯ ಉಪಯೋಗ ಪಡೆದು ಆರ್ಥಿಕವಾಗಿ ಸದೃಢ ಆಗಬೇಕಿದೆ. ನನ್ನ ಆಯ್ಕೆಗೆ ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ತುಂಬಾಡಿ ಗ್ರಾಪಂಯಲ್ಲಿ ಒಟ್ಟು 16 ಗ್ರಾಪಂ ಸದಸ್ಯರ ಸಂಖ್ಯಾಬಲವಿದೆ. 30 ತಿಂಗಳ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಎರಡು ಬಣಗಳ ನಡುವೆ ತೀವ್ರವಾದ ಪೈಪೋಟಿ ನಡೆದು ಸಮಬಲ ಬಂದಾಗ ಚುನಾವಣಾಧಿಕಾರಿ ಲಾಟರಿಯ ಮೂಲಕ ಹರೀಶ್‌ಬಾಬು ಅಧ್ಯಕ್ಷರಾಗಿ ಮತ್ತು ಲತಾ.ಎಲ್‌ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ತುಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಸನ್ನಕುಮಾರ್‌, ಸದಸ್ಯರಾದ ಪುಟ್ಟಮ್ಮ, ನಾಗರತ್ನಮ್ಮ, ನಟರಾಜು, ಪ್ರಸನ್ನಕುಮಾರ್‌, ಹೇಮಂತಕುಮಾರ್‌, ಶಾರದಮ್ಮ, ಚಂದ್ರಶೇಖರ್‌, ತಾಪಂ ಮಾಜಿ ಸದಸ್ಯ ಸಾಕರಾಜು, ಮುಖಂಡರಾದ ಲಕ್ಷ್ಮೇಶ್‌, ಹನುಮಂತರೆಡ್ಡಿ, ನಾಗರಾಜು, ಮಂಜುನಾಥ ಸೇರಿದಂತೆ ಇತರರು ಇದ್ದರು.

ಹಳ್ಳಿಗಳ ಅಭಿವೃದ್ಧಿ

 ಹೊಳವನಹಳ್ಳಿ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಜನಪರ ಯೋಜನೆಗಳೇ ಸಹಕಾರಿ. ರಾಜ್ಯ ಸರ್ಕಾರದ ಹತ್ತಾರು ಯೋಜನೆಗಳು ಜನರಿಗೆ ತಲುಪಿಸುವ ಕೆಲಸವು ಗ್ರಾಪಂಗಳಿಂದ ಮಾತ್ರ ಸಾಧ್ಯ. ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆಯು ವರದಾನ ಆಗಿದೆ ಎಂದು ಕೊರಟಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್‌ ತಿಳಿಸಿದರು.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂಗೆ 30 ತಿಂಗಳ ಎರಡನೇ ಅವಧಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆಯ ನಂತರ ಮಾತನಾಡಿದರು

ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗೃಹಸಚಿವ ಡಾ.ಜಿ. ಪರಮೇಶ್ವರ್‌ ಈಗಾಗಲೇ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ ನೇತೃತ್ವದ ಸಿದ್ದರಾಮಯ್ಯ ಸರ್ಕಾರದಲ್ಲಿ ನಮ್ಮ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಬರಲಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಅಧಿಕಾರಿಗಳ ಪಾತ್ರ ಬಹುಮುಖ್ಯ ಆಗಿದೆ ಎಂದು ಹೇಳಿದರು.

ಕ್ಯಾಮೇನಹಳ್ಳಿ ಗ್ರಾಪಂಯ ನೂತನ ಅಧ್ಯಕ್ಷ ಡಿ.ನಾಗರಾಜು ಮಾತನಾಡಿ, ಸಚಿವ ಡಾ.ಜಿ. ಪರಮೇಶ್ವರ ಆಶೀರ್ವಾದವೇ ನನ್ನ ಗೆಲುವಿಗೆ ಮುಖ್ಯ ಕಾರಣ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಮ್ಮ ಶಾಸಕರ ಮಾರ್ಗದರ್ಶನ ಮತ್ತು ಗ್ರಾಪಂ ಸರ್ವ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.

ಚುನಾವಣೆ ವೇಳೆ ಚುನಾವಣೆ ಅಧಿಕಾರಿ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷೆ ಸುನಂದ, ಸದಸ್ಯರಾದ ವೀರಯ್ಯ, ಸೌಮ್ಯ, ರಾಮಕ್ಕ, ಹರೀಶ, ಶಿವಣ್ಣ, ವೆಂಕಟಾಲಕ್ಷ್ಮಮ್ಮ, ಸಿದ್ದಗಂಗಮ್ಮ, ಹನುಮಂತರಾಜು, ಲಕ್ಷ್ಮೇನರಸಿಂಹಮೂರ್ತಿ, ನಾಗಮಣಿ, ಅನುರಾಧ, ಪುಟ್ಟರಾಜು, ಸೌಮ್ಯ.ಬಿ, ರತ್ನಮ್ಮ, ಮುಖಂಡರಾದ ಉಮಾಶಂಕರ್‌, ಪ್ರಸಾದ್‌, ಶ್ರೀನಿವಾಸ, ಗೋಪಾಲಕೃಷ್ಣರೆಡ್ಡಿ, ತ್ರಿಯಾಂಬಕರಾಧ್ಯ, ಪುಟ್ಟಕಾಮಣ್ಣ, ಶಶಿಕುಮಾರ್‌, ಬಾಲರಾಜು, ಸಿದ್ದಾರ್ಥ ಮತ್ತಿ​ತ​ರರು ಇದ್ದರು.

Latest Videos
Follow Us:
Download App:
  • android
  • ios