Mysuru: ನಾರಾಯಣ ಗುರುಗಳ ವಿಚಾರಗಳು ಇಂದಿಗೂ ಪ್ರಸ್ತುತ: ಶಾಸಕ ನಾಗೇಂದ್ರ

ಕೇರಳದಲ್ಲಿ ಅಸ್ಪೃಶ್ಯತೆ, ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ನಾರಾಯಣ ಗುರು ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ತಿಳಿಸಿದರು. 

Narayana Gurus ideas are always relevant says mla l nagendra at mysuru gvd

ಮೈಸೂರು (ಸೆ.11): ಕೇರಳದಲ್ಲಿ ಅಸ್ಪೃಶ್ಯತೆ, ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ನಾರಾಯಣ ಗುರು ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್‌. ನಾಗೇಂದ್ರ ತಿಳಿಸಿದರು. ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಾರಾಯಣಗುರು ವ್ಯಾಪಕವಾಗಿ ಹರಡಿದ್ದ ಸಾಮಾಜಿಕ ಅಸಮಾನತೆಗಳ ವಿರುದ್ಧ ಬೃಹತ್‌ ಹೋರಾಟ ನಡೆಸಿ, ಸಮಾಜವನ್ನು ಜಾತಿ ವ್ಯವಸ್ಥೆಯಿಂದ ಮುಕ್ತಗೊಲಿಸಲು ಸಾಕಷ್ಟು ಶ್ರಮಿಸಿದರು. ಹಿಂದಿನ ಕಾಲದಲ್ಲಿ ಸಾಮಾನ್ಯ ಜನರಿಗೆ ದೇವಾಲಯದ ಒಳಗಡೆ ಹೋಗಲು ಅವಕಾಶ ಇರದ ಸಂದರ್ಭದಲ್ಲಿ ಅವರೇ ಒಂದು ದೇವಸ್ಥಾನ ಸ್ಥಾಪನೆ ಮಾಡುವ ಮೂಲಕ ಒಂದು ಹೊಸ ಅಲೋಕವನ್ನು ಹುಟ್ಟಾಕಿ, ಸುಮಾರು 60 ದೇವಾಲಯಗಳನ್ನು ಸ್ಥಾಪನೆ ಮಾಡಿದವರು ನಾರಾಯಣ ಗುರು. ಅಲ್ಲದೆ, ಅಂತಧರ್ಮೀಯ ವಿವಾಹಕ್ಕೂ ಪ್ರೋತ್ಸಾಹ ನೀಡಿದರು ಎಂದರು.

ಪುನೀತ್‌ ರಾಜ್‌ಕುಮಾರ್ ನಿಧನದ ವೇಳೆ ಕೊಟ್ಟ ಮಾತು ಉಳಿಸಿಕೊಂಡ ತಮಿಳು ನಟ

ಈಡಿಗ ಸಮಾಜವು ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ನಿಮ್ಮ ಸಮಿತಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಪ್ರಮುಖರು ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಕಲಾಮಂದಿರದಲ್ಲಿ ಅದ್ಭುತ ಕಾರ್ಯಕ್ರಮವನ್ನು ಮಾಡಬೇಕು. ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಈಡಿಗ ಸಮುದಾಯದ ರಾಜ್ಯದಲ್ಲಿ ಶಕ್ತಿಯುತ ಸಮಾಜದ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ವರನಟ ಡಾ. ರಾಜ್‌ಕುಮಾರ್‌ ಈ ಇಬ್ಬರು ದಿಗ್ಗಜರು ಈಡಿಗ ಸಮುದಾಯದಲ್ಲೇ ಹುಟ್ಟಿದೊಡ್ಡ ಇತಿಹಾಸ ನಿರ್ಮಿಸಿದ್ದಾರೆ. ಇತ್ತೀಚಿಗೆ ನಿಧನರಾದ ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನಿಂದ ಇಡೀ ದೇಶವೇ ಶೋಕದಲ್ಲಿ ಮುಳುಗಿತು. ಮೈಸೂರಿನಲ್ಲಿ ನಿರ್ಮಿಸಬೇಕಿದ್ದ ಅವರ ಕನಸಿನ ಶಕ್ತಿಧಾಮ ಶಾಲೆಗೆ ಮುಖ್ಯಮಂತ್ರಿಗಳು . 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ಮಹಾನ್‌ ಮಾನವತಾವಾದಿ: ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿ.ವಿ. ಶ್ರೀಧರಮೂರ್ತಿ ಮಾತನಾಡಿ, ಎಲ್ಲಾ ಮಹನೀಯರ ಗುಣಲಕ್ಷಣಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ ಏಕೈಕ ಮಹಾಗುರು ನಾರಾಯಣಗುರು ಮಹಾನ್‌ ಮಾನವತಾವಾದಿ, ಸಾಮಾಜಿಕ ಪರಿವರ್ತನಾಕಾರ, ಹೋರಾಟಗಾರ, ಚಿಂತಕ, ಶಿಕ್ಷಕ, ರಕ್ಷಕ, ಮಾರ್ಗದರ್ಶಕ ಎಂದರು. ನಾರಾಯಣ ಗುರು ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಸಮರ ಸಾರಿದರು. ಕೇರಳದಲ್ಲಿ ಶೂದ್ರ ಸಮುದಾಯದಗಳ ಮೇಲೆ ಬ್ರಾಹ್ಮಣರು ನಡೆಸುತ್ತಿದ್ದ ದೌರ್ಜನ್ಯ ಮತ್ತು ದಬ್ಬಾಳಿಕೆಗಳ ವಿರುದ್ಧ ನಾರಾಯಣ ಗುರು ಬೃಹತ್‌ ಹೋರಾಟವನ್ನು ಸಂಘಟಿಸಿದರು. ಒಂದು ಮತ, ಒಂದು ಧರ್ಮ ಹಾಗೂ ಎಲ್ಲರಿಗೂ ಒಂದೇ ದೇವರು ಎಂಬ ಧ್ಯೇಯದೊಂದಿಗೆ ಜನರಲ್ಲಿ ಮಾನವೀಯತೆಯ ಜಾಗೃತಿ ಮೂಡಿಸಿದರು ಎಂದು ಅವರು ಹೇಳಿದರು.

ಜೆಡಿಎಸ್‌ ಸದೃಢಗೊಳಿಸಲು ಪಂಚರತ್ನ ಪ್ರವಾಸ: ನಿಖಿಲ್ ಕುಮಾರಸ್ವಾಮಿ

ಇದಕ್ಕೂ ಮುನ್ನ ಆನಂದಕುಮಾರ ಕಂಬಳಿಹಾಳ ಮತ್ತು ತಂಡದವರು ಗೀತಗಾಯನ ಪ್ರಸ್ತುತಪಡಿಸಿದರು. ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್‌, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ಕೆ. ಪೋತರಾಜ್‌, ಉಪಾಧ್ಯಕ್ಷರಾದ ರಾಜಶೇಖರ ಕದಂಬ, ಶಿವಣ್ಣ, ಪದಾಧಿಕಾರಿಗಳಾದ ಕೆ.ಎಸ್‌. ಕೃಷ್ಣಮೂರ್ತಿ, ಜಯಣ್ಣ, ಎಸ್‌.ಪಿ. ಸೋಮಶೇಖರ್‌, ಮೋಹನ್‌ದಾಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios