ಮಂಡ್ಯ  (ನ.08): ಕೆ ಆರ್‌ ಪೇಟೆಯಲ್ಲಿ ರಾಜಕೀಯ ಮೇಲಾಟ ಮುಂದುವರಿದಿದ್ದು ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ರಾಜಕೀಯ ಮುಖಂಡರು ಭೇಟಿ ನಿಡಿದ್ದಾರೆ. 

ನಿಖಿಲ್‌ ಕುಮಾರಸ್ವಾಮಿ ತೆರಳುವ ಮುನ್ನವೇ ರೈತನ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಚೌಡೇನಹಳ್ಳಿಯ ಮೃತ ರೈತ ನಂಜೇಗೌಡರ ಮನೆಗೆ ಸಚಿವ ನಾರಾಯಣಗೌಡ ಭೇಟಿ ನೀಡಿದ್ದಾರೆ. 

ರೈತನ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ 25 ಸಾವಿರ ಆರ್ಥಿಕ ಸಹಾಯ  ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ.  ಸರ್ಕಾರದಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. 

'RRನಗರದಲ್ಲಿ ಕುಸುಮಾ ಸೋಲಿಸಲು ಸಿದ್ದರಾಮಯ್ಯ ಪ್ಲಾನ್ : ಶಿರಾದಲ್ಲಿ ಟಿಬಿಜೆ ಸೋಲಿಸಲು ಡಿಕೆಶಿ ಪ್ಲಾನ್' ...

ಇಂದು ಮೃತ ರೈತನ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ಕಾರ್ಯಕ್ರಮ ನಿಗಧಿಯಾಗಿತ್ತು. ನಿಖಿಲ್ ಭೇಟಿಗೂ ಮೊದಲೇ ಮೃತ ರೈತನ ಮನೆಗೆ ನಾರಾಯಣಗೌಡ ಭೇಟಿ ನೀಡಿದ್ದಾರೆ.

ಈ ಮೂಲಜ ಕೆಆರ್ ಪೇಟೆಯಲ್ಲಿ ಮತ್ತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೇಲಾಟ ಶುರುವಾಗಿದೆ.  

ಮೂರು ದಿನದ ಹಿಂದೆ 3.5ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ನಂಜೇಗೌಡ(60) ಆತ್ಮಹತ್ಯೆಗೆ ಶರಣಾಗಿದ್ದರು.