Asianet Suvarna News Asianet Suvarna News

ಕೊರೊನಾ ನಂಜು ವಿರುದ್ಧ ಹೋರಾಟಕ್ಕೆ ನಂಜನಗೂಡು ಸಕಲಸಜ್ಜು

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಎರಡನೇ ಅಲೆ ಜನವರ ಜೀವನವನ್ನು ಹಿಂಡುತ್ತಿದ್ದು ದಿನದಿನವೂ ಸಾವು ನೋಡಿವ ಸಂಖಯೆಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ನಂಜನಗೂಡು ತಾಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ. 

Nanjangudu Taluk administration action to control surge of Coronavirus snr
Author
Bengaluru, First Published Apr 30, 2021, 12:57 PM IST

ನಂಜನಗೂಡು (ಏ.30):  ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಆಕ್ಸಿಜನ್‌ ವ್ಯವಸ್ಥೆಯುಳ್ಳ ಹಾಸಿಗೆಗಳಿವೆ, ಮುಂದಿನ ಎರಡು ದಿನಗಳಲ್ಲಿ ತಗಡೂರು-ಹುಲ್ಲಹಳ್ಳಿ ಪ್ರಾಥಮಿಕ ಆಸ್ಪತ್ರೆಗಳಲ್ಲಿ 100 ಹಾಸಿಗೆಗಳನ್ನು ತೆರೆಯಲಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಕೊರೋನಾ ವೈರಾಣುವನ್ನು ಸಮರ್ಪಕವಾಗಿ ಕಟ್ಟಿಹಾಕಲು ತಾಲೂಕು ಆಡಳಿತ ಸನ್ನದ್ದವಾಗಿದೆ ಎಂದು ತಹಸೀಲ್ದಾರ್‌ ಮೋಹನ್‌ಕುಮಾರಿ ಹೇಳಿದರು.

ತಾಲೂಕು ಅಸ್ಪತ್ರೆಯಲ್ಲಿ 35 ಹಾಸಿಗೆ ಸೌಲಭ್ಯವಿದ್ದು, 5 ವೆಂಟಿಲೇಟರ್‌ ಸೌಲಭ್ಯವಿದೆ. ಮಹದೇವನಗರ ಕೋವಿಡ್‌ ಸೆಂಟರ್‌ನಲ್ಲೂ 100 ಹಾಸಿಗೆ ಸೌಲಭ್ಯವನ್ನು ಹೊಂದಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಹುಲ್ಲಹಳ್ಳಿ-ತಗಡೂರು ಪ್ರಾಥಮಿಕ ಆಸ್ಪತ್ರೆಗಳನ್ನೂ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಿ ವೆಂಟಿಲೇಟರ್‌ ಆಕ್ಸಿಜನ್‌ ಸೌಲಭ್ಯ ಒದಗಿಸಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

ಈಗಾಗಲೆ ಕೋವಿಡ್‌ ವಾರ್‌ ರೂಮ್‌ಗಳನ್ನು ಸ್ಥಾಪಿಸಲಾಗಿದ್ದು, ನೂಡಲ್‌ ಅಧಿಕಾರಿಯನ್ನಾಗಿ ಕೆ.ಜಿ. ಮಹೇಶ್‌ ಅವರನ್ನು ನೇಮಿಸಲಾಗಿದೆ, ಕೊರೋನಾ ಸೋಂಕಿಗೆ ಒಳಗಾದ ರೋಗಿಗಳು ಚಿಕಿತ್ಸೆಗಾಗಿ ದಿನದ 24 ಗಂಟೆಗಳಲ್ಲೂ ಕೂಡ 08221-295387 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಆತಂಕಗೊಂಡು ICU ಕಾಯ್ದಿರಿಸಬೇಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ

ತಾಲೂಕಿನ ಮಹದೇವನಗರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನ್ನು ಸ್ಥಾಪಿಸಲಾಗಿದೆ. ಅಲ್ಲಿಗೆ ಸಮಾಜ ಕಲ್ಯಾಣ ಇಲಾಖೆಯ ಜನಾರ್ಧನ್‌ ಅವರನ್ನು ನೂಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರ ಮೊ. 9945047204 ಕಂಟೈನ್‌ಮೆಂಟ್‌ ಜೋನ್‌ ನೂಡಲ್‌ ಅಧಿಕಾರಿನ್ನಾಗಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಅವರನ್ನು ನೇಮಿಸಲಾಗಿದೆ. ಮೊ.9845182080. ತಾಲೂಕು ಆರೋಗ್ಯಾಧಿಕಾರಿ ಈಶ್ವರ್‌ ಮೊ. 9731081616 ಗೆ ಕರೆ ಮಾಡ ಆಸ್ಪತ್ರೆ ಹಾಸಿಗೆಯ ಸಂಬಂಧ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಲೂಕು ಆಡಳಿತ ಕೊರೋನಾ ಲಸಿಕೆ ಹಾಕುವ ಕಾರ್ಯದಲ್ಲೂ ಮುಂದಿದ್ದು, ಇಲ್ಲಿವರೆವಿಗೆ ಸುಮಾರು 70 ಸಾವಿರ ಮಂದಿ ಲಸಿಕೆಗೆ ಒಳಪಟ್ಟಿದ್ದಾರೆ. ಈಗಾಗಲೆ 18 ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಲಸಿಕೆಯಿಂದ ಹಾವುದೇ ಹಾನಿ ಸಂಭವಿಸುವುದಿಲ್ಲ ಜನರು ಆತಂಕ ಭಯ ಪಡೆದೆ ಲಸಿಕೆ ತೆಗೆದುಕೊಳ್ಳಲು ಮುಂದಾಗಬೇಕು. ಅನಾವಶ್ಯಕವಾಗಿ ಓಡಾಡದೆ ಮನೆಯಲ್ಲೇ ಸುರಕ್ಷಿತವಾಗಿದ್ದು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರು : 5 ಗ್ರಾಮಗಳು ಸಂಪೂರ್ಣ ಸೀಲ್‌ಡೌನ್‌ ...

ಹುಲ್ಲಹಳ್ಳಿ ಭಾಗದಲ್ಲಿ ಹೆಚ್ಚು ಸೋಂಕು: ತಾಲೂಕಿನಲ್ಲಿ ಹುಲ್ಲಹಳ್ಳಿ ಭಾಗದಲ್ಲಿ ಅತಿ ಹೆಚ್ಚಿನ ಜನರು ಕೊರೋನಾ ಸೋಂಕಿಗೆ ಒಳಪಡುತ್ತಿದ್ದಾರೆ. ಆದ್ದರಿಂದ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ಹಿಮ್ಮೆಟ್ಟಿಸಲು ಸಹಕರಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಈಶ್ವರ್‌ ಕಾನಡ್ಕೆ ಮಾತನಾಡಿ, ತಾಲೂಕಿನಲ್ಲಿ 307 ಸಕ್ರಿಯ ಪ್ರಕರಣಗಳಿದ್ದು, ತಾಲೂಕು ಆಸ್ಪತ್ರೆಯಲ್ಲಿ 35 ಜಿಲ್ಲಾಸ್ಪತ್ರೆಯಲ್ಲಿ 5, ಮಹದೇವನಗರ ಕೋವಿಡ್‌ ಸೆಂಟರ್‌ನಲ್ಲಿ 35 ಜನ, ಮಂಡಕಳ್ಳಿಯ ಕೋವಿಡ್‌ ಸೆಂಟರ್‌ನಲ್ಲಿ 19 ಜನರಿದ್ದು, ಹೋಂ ಐಸುಲೇಷನ್‌ನಲ್ಲಿ 213 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷದಿಂದ ಈವರೆವಿಗೆ ತಾಲೂಕಿನಲ್ಲಿ 3,061 ಮಂದಿ ಸೋಂಕಿತರಾಗಿದ್ದು, 2695 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios