Asianet Suvarna News Asianet Suvarna News

ಮೈಸೂರು : 5 ಗ್ರಾಮಗಳು ಸಂಪೂರ್ಣ ಸೀಲ್‌ಡೌನ್‌

ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರಿದೆ. ದಿನದಿನವೂ ಕೊರೋನಾ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಹಳ್ಳಿಗಳಿಗೂ ಸೋಂಕು ವಕ್ಕರಿಸುತ್ತಿದ್ದು  ಹುಣಸೂರಿನ ಐದು ಗ್ರಾಮಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. 

5 villages Of Hunasuru Completely Seal Down Due to Covid high risk snr
Author
Bengaluru, First Published Apr 28, 2021, 12:50 PM IST

  ಹುಣಸೂರು (ಏ.28):  ಹುಣಸೂರಿನಲ್ಲಿ ಮಂಗಳವಾರ ಕೊರೋನಾ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ತಾಲೂಕಿನ 5 ಗ್ರಾಮಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಸೋಮವಾರ ಕೋವಿಡ್‌ ಸೋಂಕಿಗೆ ಇಬ್ಬರು ಬಲಿಯಾದ ಘಟನೆ ಮಾಸುವ ಮುನ್ನವೇ ಮಂಗಳವಾರ ಮತ್ತೆ ಮೂವರು ಬಲಿಯಾಗಿದ್ದಾರೆ. ಕೋವಿಡ್‌ ಸೋಂಕು ವ್ಯಾಪಕವಾಗಿ ಹಬ್ಬಿರುವ ಅರಸು ಕಲ್ಲಹಳ್ಳಿಯಲ್ಲಿ 30 ವರ್ಷದ ಯುವಕ ಮತ್ತು 51 ವರ್ಷದ ಪುರುಷರೊಬ್ಬರು ಮೃತಪಟ್ಟರೆ, ಹುಣಸೂರು ಪಟ್ಟಣದ ಮುಸ್ಲಿಂ ಬಡಾವಣೆಯ 70 ವರ್ಷದ ವೃದ್ದರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್ : ತೀವ್ರ ಆತಂಕ ಹೊರಹಾಕಿದ ಡೀಸಿ ರೋಹಿಣಿ

ಕಲ್ಲಹಳ್ಳಿಯ 51 ವರ್ಷದ ವ್ಯಕ್ತಿಯ ಕೋವಿಡ್‌ ಸೋಂಕು ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಆದರೆ ಅವರ ಮರಣ ಕಾರಣ ಕೋವಿಡ್‌ ಸೋಂಕು ತಗುಲಿದೆ ಎನ್ನುವುದು ದೃಢಪಟ್ಟಿದೆ. ಮತ್ತೊಬ್ಬ ಯುವಕ ಮೈಸೂರು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದರು. ಮುಸ್ಲಿಂ ಬಡಾವಣೆಯ ವ್ಯಕ್ತಿ ಪಟ್ಟಣದ ಕೋವಿಡ್‌ ಆಸ್ಪತ್ರೆಯಲ್ಲಿ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ತಿಳಿಸಿದ್ದಾರೆ.

5 ಗ್ರಾಮ ಸೀಲ್‌ಡೌನ್‌: ಕೋವಿಡ್‌ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಅರಸು ಕಲ್ಲಹಳ್ಳಿ, ಮುಳ್ಳೂರು (12 ಪಾಸಿಟಿವ್‌), ಕೃಷ್ಣಾಪುರ (12), ಕೆಂಪಮ್ಮನ ಹೊಸೂರು(19) ಮತ್ತು ಹಳೇಪುರ(16) ಗ್ರಾಮಗಳನ್ನು ಮಂಗಳವಾರ ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಾಪಂ ಇಒ ಎಚ್‌.ಡಿ. ಗಿರೀಶ್‌ ತಿಳಿಸಿದ್ದಾರೆ.

ಕೋವಿಡ್ : ತೀವ್ರ ಆತಂಕ ಹೊರಹಾಕಿದ ಡೀಸಿ ರೋಹಿಣಿ

ಗ್ರಾಪಂ ವ್ಯಾಪ್ತಿಯಲ್ಲಿ ವಿಲೇಜ್‌ ಟಾಸ್ಕ್‌ಫೋರ್ಸ್‌ ಮತ್ತು ಪಂಚಾಯಿತಿ ಟಾಸ್ಕ್‌ಫೋರ್ಸ್‌ ಸಮಿತಿಗಳು ಈ ಕುರಿತು ಹೆಚ್ಚಿನ ಗಮನಹರಿಸಿವೆ. ಸೋಂಕಿತರನ್ನು ಪತ್ತೆ ಹಚ್ಚುವ, ಸೋಂಕಿತರಿಗೆ ಔಷಧೋಪಚಾರಗಳನ್ನು ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಒದಗಿಸುವ ಕಾರ್ಯ ನಡೆದಿದೆ. ಹೋಮ್‌ ಐಸೋಲೋಷನ್‌ ಮತ್ತು ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯತೆ ಕುರಿತು ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕಾರ್ಯ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"
 

Follow Us:
Download App:
  • android
  • ios