ಮೈಸೂರು (ಆ.20): ನಂಜನಗೂಡು ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ಸಿದ್ಧಾರ್ಥನಗರದ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. 

ಕಳೆದ 8 ತಿಂಗಳಿನಿಂದ ಪ್ರಭಾರ ಹುದ್ದೆ ಅಲಂಕರಿಸಿದ್ದರು. ಸಭ್ಯ ಹಾಗೂ ಜನಾನುರಾಗಿ ವೈದ್ಯರೆಂದು ಕರೆಸಿಕೊಂಡಿದ್ದ ನಾಗೇಂದ್ರ ಕಳೆದ ಐದು ತಿಂಗಳಿನಿಂದ ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಕೊಲೆ ಆರೋಪ 
 
ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನಾಗೇಂದ್ರ ಅವರನ್ನು ಕೊಲೆ ಮಾಡಿದ್ದಾರೆ ಎಂದು ವೈದ್ಯರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಆರೋಪ ಮಾಡಿದ್ದಾರೆ. ಆದ್ದರಿಂದ ಅವರನ್ನು ಸಸ್ಪೆಂಡ್ ಮಾಡಿ ಎಂದು ಆಗ್ರಹಿಸಿದ್ದಾರೆ.

ಮತ್ತೋರ್ವ ಸ್ವಾಮೀಜಿಗೆ ಕೊರೋನಾ ಸೋಂಕು...

ಇನ್ನು ನಂಜನಗೂಡು ಟಿಎಚ್ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರತಿಕ್ರಿಯಿಸಿ ಡಾ.ನಾಗೇಂದ್ರ ಅವರು ಜನಪರ ಅಧಿಕಾರಿಯಾಗಿದ್ದರು.
ಅತ್ಯಂತ ಸೂಕ್ಷ್ಮ ಸ್ವಭಾವದವರಾಗಿದ್ದರು.  ಕಳೆದ 6 ತಿಂಗಳಿಂದ ಕೋವಿಡ್ ಕೆಲಸ ಮಾಡಿದ್ದರು. ಜುಬಿಲಿಯಂಟ್ ನಲ್ಲಿ ಕೇಸ್ ಗಳು ಬಂದಾಗಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರ ಸಾವು ಅಧಿಕಾರಿ ವರ್ಗಕ್ಕೆ ತುಂಬಲಾರದ ನಷ್ಟ ಆಗಿದೆ ಎಂದರು.

ಮೈಸೂರು: 'ಕೊರೋನಾ ವಾರಿಯರ್‌ ಆತ್ಮಹತ್ಯೆ, ನಾಗೇಂದ್ರ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ'...

ಸಾವಿಗೆ ಕಾರಣ ಏನು ಎಂಬುದು ಗೊತ್ತಿಲ್ಲ. ಅವರ ಮೇಲೆ ಒತ್ತಡ ಇತ್ತಾ ಎಂಬುದರ ಬಗ್ಗೆ ನಾನು ಹೇಳಿಕೆ ನೀಡುವುದು ಸರಿಯಲ್ಲ. ಈಗ ಆ ಬಗ್ಗೆ ಹೇಳಿಕೆ ನೀಡುವುದು ತನಿಖೆಯ ದಿಕ್ಕು ತಪ್ಪಿಸಿದಂತಾಗುತ್ತದೆ.
ಸತ್ಯಾಂಶ ಮುಂದಿನ ದಿನಗಳಲ್ಲಿ ತನಿಖೆ ನಂತರ ತಿಳಿಯಲಿದೆ ಎಂದರು.

ಪರಿಹಾರದ ಭರವಸೆ

ಡಾ|| ಎಸ್. ಆರ್. ನಾಗೇಂದ್ರ, ತಾಲ್ಲೂಕು ಆರೋಗ್ಯ ಅಧಿಕಾರಿ ರವರು ಇಂದು ನಿಧನರಾದ ವಿಷಯನ್ನು ಕೇಳಿ ಅತೀವ ದುಃಖವಾಗಿದ್ದು ಈ ಘಟನೆಯ ಬಗ್ಗೆ ವಿಷಾದಿಸುತ್ತೇನೆ...

ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ...

ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ 30 ಲಕ್ಷ ಹಣವನ್ನು ಮಂಜೂರು ಮಾಡಲಾಗುವುದು ಹಾಗೂ ಅವರ ಕುಟುಂಬಕ್ಕೆ ಉದ್ಯೋಗವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು.