ಮತ್ತೋರ್ವ ಸ್ವಾಮೀಜಿಗೆ ಕೊರೋನಾ ಸೋಂಕು
ಕೆಲ ದಿನಗಳ ಹಿಂದಷ್ಟೇ ಉಡುಪಿಯ ಸುಗುಣೇಂದ್ರ ತೀರ್ಥರು ಕೊರೋನಾ ಎದುರಿಸಿದ್ದರು. ಇದೀಗ ಮತ್ತೋರ್ವ ಸ್ವಾಮೀಜಿಗೂ ಕೊರೋನಾ ಮಹಾಮಾರಿ ಕಾಡಿದೆ.
ಮೈಸೂರು (ಆ20): ಮೈಸೂರು ತಾಲೂಕು ಬರಡನಪುರ ಶ್ರೀ ಪರಶಿವಮೂರ್ತಿ ಸ್ವಾಮಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಅವರು ಮಠದಲ್ಲಿಯೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಶ್ರೀಗಳ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್‌ಗೆ ಒಳಗಾಗಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಠ ಕೋರಿದೆ.
ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದರೂ ನಿಲ್ಲದ ಶ್ರೀಗಳ ವ್ರತ, ಪೂಜೆ
ಕೆಲ ದಿನಗಳ ಹಿಂದಷ್ಟೇ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಕೊರೋನಾ ಅಂಟಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಇದೀಗ ಬರಡನಪುರ ಸ್ವಾಮೀಜಿಗೂ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ಮುಂದುವರಿದಿದೆ.