2ನೇ ಹಂತದಲ್ಲಿ ನಮ್ಮಮೆಟ್ರೋ ಸೂಪರ್ ಫಾಸ್ಟ್: ಓಡಲಿದೆ 2 ನಿಮಿಷಕ್ಕೊಂದು ಟ್ರೈನ್
ನಮ್ಮ ಮೆಟ್ರೋ ತನ್ನ ಸೇವೆ ನೀಡಿದಾಗಿನಿಂದ ಬೆಂಗಳೂರಿಗರು ಕೊಂಚ ನಿರಾಳವಾಗಿದ್ದಾರೆ. ಇದೀಗ ಸಿಲಿಕಾನ್ ಸಿಟಿ ಮಂದಿಗೆ ಸೂಪರ್ ಫಾಸ್ಟ್ ಮೆಟ್ರೋ ಸೇವೆ ಒದಗಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಎರಡು ನಿಮಿಷಕ್ಕೊಂದು ಟ್ರೈನ್ ಓಡಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ.
ಬೆಂಗಳೂರು (ಜು26); ನಮ್ಮ ಮೆಟ್ರೋ ತನ್ನ ಸೇವೆ ನೀಡಿದಾಗಿನಿಂದ ಬೆಂಗಳೂರಿಗರು ಕೊಂಚ ನಿರಾಳವಾಗಿದ್ದಾರೆ. ಇದೀಗ ಸಿಲಿಕಾನ್ ಸಿಟಿ ಮಂದಿಗೆ ಸೂಪರ್ ಫಾಸ್ಟ್ ಮೆಟ್ರೋ ಸೇವೆ ಒದಗಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಎರಡು ನಿಮಿಷಕ್ಕೊಂದು ಟ್ರೈನ್ ಓಡಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ. ನಮ್ಮ ಮೆಟ್ರೋ ಬೆಂಗಳೂರಲ್ಲಿ ಕಾರ್ಯಾಚರಣೆ ಶುರುಮಾಡಿದ ಬಳಿಕ ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಜಂಜಾಟದಿಂದ ಹೊರ ಬಂದಿದ್ದಾರೆ. ತಮ್ಮ ಸ್ವಂತ ವಾಹನಕ್ಕೆ ಬ್ರೇಕ್ ಹಾಕಿ ಬಿಂದಾಸ್ ಆಗಿ ಮೆಟ್ರೋ ಪ್ರಯಾಣ ಶುರು ಮಾಡಿದ್ದಾರೆ. ಮೆಟ್ರೋಗೆ ಎಷ್ಟೆ ಪ್ರಯಾಣಿಕರು ಬಂದ್ರೂ ಕೂಡ 5 ನಿಮಿಷ ಮೆಟ್ರೋಗಾಗಿ ಕಾಯಬೇಕಿತ್ತು. ಜನ ಜಂಗುಳಿ ಜಾಸ್ತಿಯಾದ್ರೂ ಮೆಟ್ರೋ ಸಮಯ ಬದಲಾವಣೆ ಮಾತ್ರ bmrcl ನಿಂದ ಸಾಧ್ಯವಾಗಿಲ್ಲ. ಹೀಗಾಗಿ ಎರಡನೇ ಹಂತದಲ್ಲಿ ಈ ನ್ಯೂನತೆಯನ್ನ ಸರಿಪಡಿಸಿಕೊಳ್ಳಲು ಬಿಎಂಆರ್ಸಿಎಲ್ ಮುಂದಾಗಿದೆ.
ಎರಡನೇ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗ. ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಮಾರ್ಗ, ಹಾಗೂ ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ಓಡಲಿದೆ. ಇಲ್ಲೆಲ್ಲಾ ಐಟಿ ಬಿಟಿ ಕಂಪನಿಗಳು ಹೆಚ್ಚಿದ್ದು ಪೀಕ್ ಟೈಮಲ್ಲಿ ಹೆಚ್ಚಿನ ಜನದಟ್ಟಣೆ ಆಗಲಿದೆ ಎಂದು ತಜ್ಞರು ಎಚ್ಚರಿಸಿದ್ರು. ಅಲ್ಲದೇ ಮೆಟ್ರೋ ಬೋಗಿಗಳನ್ನು 6ರ ಬದಲಾಗಿ 8ಕ್ಕೆ ಏರಿಸಲು ಸಲಹೆ ನೀಡಲಾಗಿತ್ತು. ಆದ್ರೆ ಬಿಎಂಆರ್ಸಿಎಲ್ 8 ಬೋಗಿ ಮಾಡಿದ್ರೆ ಸ್ಟೇಷನ್ ಸ್ಟ್ರಕ್ಚರ್ ಬದಲಾಯಿಸ್ಬೇಕು. ದೊಡ್ಡ ಸ್ಟೇಷನ್ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿ ಕ್ಯಾಪಿಟಲ್ ಎಕ್ಸ್ ಪೆಂಡೀಚರ್ ಹೆಚ್ಚಾಗುತ್ತೆ. ಹೀಗಾಗಿ ಬೋಗಿ ಜಾಸ್ತಿ ಮಾಡೋದಕ್ಕಿಂತ ಟ್ರೈನ್ ಸಂಖ್ಯೆ ಹೆಚ್ಚಿಸೋದು ಸೂಕ್ತ ಎಂದು ತೀರ್ಮಾನಿಸಿ, ಎರಡನೇ ಹಂತದಲ್ಲಿ ಪ್ರತೀ ಎರಡು ನಿಮಿಷಕ್ಕೊಂದು ಟ್ರೈನ್ ರನ್ ಮಾಡುವ ಟೆಕ್ನಾಲಜಿಯನ್ನು ಅಳವಡಿಸೋಕೆ ಬಿಎಂಆರ್ಸಿಎಲ್ ನಿರ್ಧರಿಸಿದೆ. ಎರಡು ನಿಮಿಷಕ್ಕೊಮ್ಮೆ ಮೆಟ್ರೋ ಓಡಿಸೋದ್ರಿಂದ ಸಿಗ್ನಲಿಂಗ್ ಸಿಸ್ಟಂ ಸಹ ತೀರಾ ಅಡ್ವಾನ್ಸ್ ಆಗಿರಲಿದೆ. ಮುಂದಿರೋ ಟ್ರೈನ್ ನಿಂದ ಹಿಂದಿರೋ ಟ್ರೈನ್ ಸಿಗ್ನಲ್ ಪಡೆದುಕೊಳ್ಳಲಿದೆ. ಬಳಿಕ ಸ್ವಂಯಂ ನಿಯಂತ್ರಣ ಮಾಡಿಕೊಳ್ಳೋ ತಂತ್ರಜ್ಞಾನವನ್ನೂ ಅಳವಡಿಸಲಾಗ್ತಿದೆ. ಇದೊಂದು ತೀರಾ ಆಧುನಿಕ ತಂತ್ರಜ್ಞಾನವಾಗಿದ್ದು, ಸಂಪೂರ್ಣ ಸೇಫ್ಟಿಯಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೈಕೊಟ್ಟ ಬೇರಿಂಗ್, ಹತ್ತೇ ವರ್ಷದಲ್ಲಿ ನಮ್ಮ ಮೆಟ್ರೋ ನಿಜ ಬಣ್ಣ ಬಯಲು
ಎರಡನೇ ಹಂತವನ್ನ ದೇಶದಲ್ಲೇ ಮಾದರಿಯಾಗಿ ರೂಪಿಸಲು ಬಿಎಂಆರ್ಸಿಎಲ್ ಮುಂದಾಗಿದ್ದು, ಆರಂಭದಲ್ಲಿ ಡ್ರೈವರ್ ಲೆಸ್ ಟ್ರೈನ್ ಘೋಷಿಸಿದ್ದ ಮೆಟ್ರೋ ಸದ್ಯ ಸ್ಪೀಡಪ್ ಮಾಡಿ ಪ್ರಯಾಣಿಕರಿಗೆ ಮತ್ತೊಂದು ಖುಷಿ ಕೊಟ್ಟಿದೆ. ಹೀಗಾಗಿ ಎರಡನೇ ಹಂತದಲ್ಲಿ 20 ಲಕ್ಷ ಬಳಕೆದಾರರ ಗುರಿ ತಲುಪಬಹುದು ಅನ್ನೋ ನಿರೀಕ್ಷೆಯನ್ನು ಕೂಡ ಮೆಟ್ರೋ ಹೊಂದಿದೆ.
ಎಂಜಿ ರಸ್ತೆ- ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ನಿತ್ಯ ಸಮಸ್ಯೆ, ಮೆಟ್ರೋ ಕಾಮಗಾರಿಯಲ್ಲಿ ಲೋಪ.?