Asianet Suvarna News Asianet Suvarna News

BBMP Budget: ನಿರೀಕ್ಷಿತ ಸುಧಾರಣೆ ಇಲ್ಲ.. ಬಿಬಿಎಂಪಿ ಬಜೆಟ್‌ಗೆ NBF ಪ್ರತಿಕ್ರಿಯೆ

* ಬಿಬಿಎಂಪಿ ವಾರ್ಷಿಕ ಬಜೆಟ್ ಮಂಡನೆ
* ನಮ್ಮ ಬೆಂಗಳೂರು ಫೌಂಡೇಶನ್ ಪ್ರತಿಕ್ರಿಯೆ
* ಯೋಜಿತ ಗುರಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ
* 10,480 ಕೋಟಿ ರೂಪಾಯಿ ಅಂದಾಜಿನ ಬಜೆಟ್

Namma Bengaluru Foundation Reaction on BBMP Budget 2022 mah
Author
Bengaluru, First Published Apr 4, 2022, 4:45 PM IST

ಬೆಂಗಳೂರು( ಏ. 04)  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವಾರ್ಷಿಕ ಬಜೆಟ್(BBMP Budget)  ಮಂಡನೆ ಮಾಡಿದೆ. ಈ ವರ್ಷ ಒಟ್ಟು 10,484 ಕೋಟಿ ರೂಪಾಯಿ ಆದಾಯ ಸಂಗ್ರಹವನ್ನು ಯೋಜಿಸಿದೆ ಮತ್ತು ಇದೇ ಅವಧಿಯಲ್ಲಿ ಒಟ್ಟು ವೆಚ್ಚವು 10,480 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಒಟ್ಟು 6,911 ಕೋಟಿ ನಿಗದಿ ಮಾಡಲಾಗಿದೆ  ಉಳಿದಂತೆ (Bengaluru) ನಗರ ಕಸ ವಿಲೇವಾರಿ ಮತ್ತು ಸಂಸ್ಕರಣೆಗೆ 1469.44 ಕೋಟಿ ಮೀಸಲಿಡಲಾಗಿದೆ. ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ನಡೆದು ಬಂದಿತ್ತು. ಈ ಬಾರಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಗುರುವಾರ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್  ಬಜೆಟ್ ಮಂಡನೆ ಮಾಡಿದ್ದರು.

ಆನೆ ಕಾರಿಡಾರ್ ಉಳಿಸಲು ಎನ್‌ಬಿಎಫ್ ಪಣ

ಬಜೆಟ್ ನಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದ್ದು, ಕನಿಷ್ಠ 1,500 ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಕಡಿಮೆ ಆಸ್ತಿ ತೆರಿಗೆ ಪಾವತಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಸಹ ಉಲ್ಲೇಖಿಸಲಾಗಿದೆ. ವಾಣಿಜ್ಯ, ಕಾರ್ಪೊರೇಟ್ ಮತ್ತು ಸರ್ಕಾರಿ ವಿಭಾಗವನ್ನು ತೆರಿಗೆಗಾಗಿ ಟ್ರ್ಯಾಕ್ ಮಾಡಲು ಇದು ಉತ್ತಮ ಉಪಕ್ರಮವಾಗಿದೆ ಮತ್ತು ದೊಡ್ಡ ಪಾವತಿದಾರರಿಂದ ಉತ್ತಮ ತೆರಿಗೆ ಸಂಗ್ರಹಕ್ಕೆ ಸಹಾಯ ಮಾಡುತ್ತದೆ ಮತ್ತು ಅವರು ಬಿಬಿಎಂಪಿಗೆ ನೀಡಬೇಕಾದ ದೀರ್ಘಾವಧಿಯ ಬಾಕಿಗಳನ್ನು ಸಂಗ್ರಹಿಸಲು ಸಹ ಸಾಧ್ಯವಾಗುತ್ತದೆ

ಇಲಾಖಾವಾರು ವೆಚ್ಚ: ಕೌನ್ಸಿಲ್ ನಿರ್ವಹಣೆಗೆ 12.46 ಕೋಟಿ, ಸಾಮಾನ್ಯ ಆಡಳಿತಕ್ಕೆ 627.92 ಕೋಟಿ, ಕಂದಾಯ ವಿಭಾಗಕ್ಕೆ 454 ಕೋಟಿ, ನಗರ ಯೋಜನೆ ಮತ್ತು ನಿಯಂತ್ರಣಕ್ಕೆ 22.07 ಕೋಟಿ, ಸಾರ್ವಜನಿಕ ಕಾಮಗಾರಿಗೆ 6911.49 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1469.44 ಕೋಟಿ, ಸಾರ್ಜನಿಕರ ಆರೋಗ್ಯ (ಸಾಮಾನ್ಯ) 210.63 ಕೋಟಿ, ಸಾರ್ವಜನಿಕರ ಆರೋಗ್ಯ (ವೈದ್ಯಕೀಯ) 75.38 ಕೋಟಿ, ತೋಟಗಾರಿಕೆ 174.38 ಕೋಟಿ, ನಗರ ಅರಣೀಕರಣ 35.30 ಕೋಟಿ, ಸಾರ್ವಜನಿಕ ಶಿಕ್ಷಣ 113.41 ಕೋಟಿ, ಸಮಾಜ ಕಲ್ಯಾಣ 374.34 ಕೋಟಿ ರು. ವೆಚ್ಚ  ನಿಗದಿ ಮಾಡಲಾಗಿದೆ.

ಬಿಬಿಎಂಪಿ ಬಜೆಟ್ ಹೈಲೈಟ್ಸ್.. ಯಾವುದಕ್ಕೆ ಎಷ್ಟು?

ಹೊಸ ಆರ್ಥಿಕ ವರ್ಷ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಬಿಬಿಎಂಪಿ ಬಜೆಟ್ ಪ್ರತಿಗಳನ್ನು ಬಿಡುಗಡೆ ಮಾಡಿದೆ. ಬಿಬಿಎಂಪಿ ಕಾಯಿದೆಯ ಸೆಕ್ಷನ್ 196 ರ ಪ್ರಕಾರ, ಮುಂದಿನ ಆರ್ಥಿಕ ವರ್ಷ ಪ್ರಾರಂಭವಾಗುವ ಕನಿಷ್ಠ ಮೂರು ವಾರಗಳ ಮೊದಲು ಸ್ಥಳೀಯ ಸಂಸ್ಥೆಯ ಬಜೆಟ್ ಅನ್ನು ಘೋಷಿಸಬೇಕು. ಬೆಂಗಳೂರು ರಾಜ್ಯದ ರಾಜಧಾನಿ ಮತ್ತು ಪ್ರಮುಖ ಆದಾಯ ಉತ್ಪಾದಕವಾಗಿರುವುದರಿಂದ ನಗರದ ಬಜೆಟ್ ಅನ್ನು ಹೆಚ್ಚು ನಿಖರವಾಗಿ ಯೋಜಿಸಬೇಕು. ಬಜೆಟ್‌ನ ಉತ್ತಮ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಬಿಬಿಎಂಪಿ ತೊಡಗಿಸಿಕೊಳ್ಳಬೇಕು. ನಗರದ ವಿವಿಧ ಸಮಸ್ಯೆಗಳಾದ ರಸ್ತೆಗಳು, ಉದ್ಯಾನಗಳು, ಕಸ, ಮಳೆನೀರು ಚರಂಡಿಗಳು, ಪ್ರವಾಹ, ಕೆರೆಗಳು, ಶೌಚಾಲಯಗಳಂತಹ ನಗರದ ವಿವಿಧ ಸಮಸ್ಯೆಗಳತ್ತ ಗಮನ ಹರಿಸುವುದು ಮತ್ತು ಬೆಂಗಳೂರಿನ ನಾಗರಿಕರಿಗೆ ಪರಿಹಾರವನ್ನು ಕಂಡುಹಿಡಿಯುವುದು ಹೆಚ್ಚು ಮಹತ್ವದ್ದಾಗಿದೆ. ವೆಚ್ಚಗಳು ಅಧಿಕವಾಗಿದ್ದರೂ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ ಎಂದು ನಮ್ಮ ಬೆಂಗಳೂರು ಫೌಂಡೇಶನ್  (Namma Bengaluru Foundation) ಜನರಲ್ ಮ್ಯಾನೇಜರ್ ವಿನೋದ್ ಜೇಕಬ್ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಬೆಂಗಳೂರು ಫೌಂಡೇಶನ್ ಬಗ್ಗೆ:  ನಮ್ಮ ಬೆಂಗಳೂರು ಫೌಂಡೇಶನ್ ಬೆಂಗಳೂರು ಮತ್ತು ಅದರ ನಾಗರಿಕರು ಮತ್ತು ನೆರೆಹೊರೆಯವರ ಹಕ್ಕುಗಳನ್ನು ರಕ್ಷಿಸಲು ದೃಢವಾಗಿ ಕಾರ್ಯನಿರ್ವಹಿಸುತ್ತ ಬಂದಿರುವ (NGO) ಎನ್ ಜಿಒ.  ಸಾರ್ವಜನಿಕರ ಪಾಲುದಾರಿಕೆಯೊಂದಿಗೆ ಸಾರ್ವಜನಿಕ ಆಸ್ತಿ ಸಂರಕ್ಷಣೆ ಗುರಿಯೊಂದಿಗೆ  ಕೆಲಸ ಮಾಡುತ್ತಿದೆ.  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಂರಕ್ಷಣೆ,  ಶುದ್ಧ ಕುಡಿಯುವ ನೀರು ಸೇರಿ ಅನೇಕ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದೆ.

Follow Us:
Download App:
  • android
  • ios