Namma Bengaluru Foundation : ಆನೆ ಕಾರಿಡಾರ್‌ ಫಾಸ್ಟ್ ಟ್ರ್ಯಾಕ್ ಸರ್ವೇ.. ಡಿಸಿಗೆ NBF ಅಭಿನಂದನೆ

* ನಮ್ಮ ಬೆಂಗಳೂರು ಫೌಂಡೇಶನ್ ನಿಂದ ಮಾದರಿ ಕಾರ್ಯ
* ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಉಳಿಸುವ ಕೆಲಸ
* ಆನೆ ಕಾರಿಡಾರ್ ಸರ್ವೆಗೆ  ಮುಂದಾದ ಜಿಲ್ಲಾಧಿಕಾರಿ

Namma Bengaluru Foundation thanks Bengaluru Urban DC for fast tracking Elephant Corridor survey mah

ಬೆಂಗಳೂರು(ಮಾ 11)  ಆನೆ ಕಾರಿಡಾರ್ (Elephant Corridor) ಫಾಸ್ಟ್ ಟ್ರಾಕ್ ಸರ್ವೆಗೆ ಮುಂದಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್  ಅವರಿಗೆ ನಮ್ಮ ಬೆಂಗಳೂರು ಫೌಂಡೇಶನ್ (Namma Bengaluru Foundation) ಧನ್ಯವಾದ ತಿಳಿಸಿದೆ.

 ವಿಶ್ವ ವನ್ಯಜೀವಿ ದಿನದಂದು ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ವೃಕ್ಷ ಫೌಂಡೇಶನ್  (Vruksha Foundation) ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ. ಜೆ.ಮಂಜುನಾಥ್  ಅವರಿಗೆ  ವಿಶೇಷ ಮನವಿ ಒಂದನ್ನು ಸಲ್ಲಿಕೆ ಮಾಡಿದ್ದವು.  ಎಲಿಫೆಂಟ್ ಕಾರಿಡಾರ್ 1000 ಎಕರೆ ಸರ್ವೆ ಕಾರ್ಯವನ್ನು ತ್ವರಿತಗೊಳಿಸಬೇಕು ಜತೆಗೆ  232 ಎಕರೆ ಜಮೀನಿನ ಮಾಲೀಕತ್ವವನ್ನು  ಅರಣ್ಯ ಇಲಾಖೆ ವ್ಯಾಪ್ತಿಗೆ ಬರಬೇಕು ಎಂದು ಕೇಳಿಕೊಂಡಿದ್ದವು.

ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ, ಬನ್ನೇರುಘಟ್ಟ ಉದ್ಯಾನವನವನ್ನು ಸಂರಕ್ಷಣೆ  ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಗಮನಹರಿಸಲು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ.   ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿದೆ ಮತ್ತು ಆದ್ದರಿಂದ ಈ ಭೂದೃಶ್ಯಕ್ಕೆ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿಗಳೆರಡನ್ನೂ ಹೊಂದಿರುವ ಪರಿಸರ ಸೇತುವೆಯಾಗಿದ್ದು ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದರು.

ಮನವಿ ಸ್ವೀಕರಿದ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿದ್ದ ಡಿಸಿ , ಸಮೀಕ್ಷೆ ನಡೆಯುತ್ತಿದೆ, ಮತ್ತು ವರದಿಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.  ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯೊಂದಿಗೆ  ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ತರಿಸಿಕೊಳ್ಳಲಾಗುತ್ತಿದೆ.  ಅತಿಕ್ರಮಣದಾರರನ್ನು ತೆರವುಗೊಳಿಸಿ, ಈ ಭಾಗದ ರೈತರಿಗೆ ಪುನರ್ವಸತಿ ಕಲ್ಪಿಸಿ, ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದು  ತಿಳಿಸಿದ್ದರು.

NBF ನಿಂದ ವೃಕ್ಷ ಅಭಿಯಾನ: ಬೆಂಗಳೂರು ಸುತ್ತಮುತ್ತ 75 ಸಾವಿರ ಗಿಡಗಳನ್ನು ನೆಡುವ ಗುರಿ

ನಮ್ಮ ಬೆಂಗಳೂರು ಫೌಂಡೇಶನ್‌ನ  ವಿನೋದ್ ಜಾಕೋಬ್ ಮಾತನಾಡಿ, ರಾಷ್ಟ್ರೀಯ ಉದ್ಯಾನ ಬೆಂಗಳೂರಿಗೆ  ಹೆಮ್ಮೆ.  ಇದನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು ಮತ್ತು ಸಂರಕ್ಷಿಸಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಮತ್ತು ಪರಿಸರ ವಿಜ್ಞಾನಕ್ಕೆ ಹಾನಿಯಾಗದ ರೀತಿ ಕಾಪಾಡಿಕೊಂಡು  ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದ್ದರು.

ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ ಸಂಸ್ಥಾಪಕ ವಿಜಯ್ ನಿಶಾಂತ್  ಮಾತನಾಡಿ, ಬನ್ನೇರುಘಟ್ಟದಲ್ಲಿರುವ ನಮ್ಮ ರಾಷ್ಟ್ರೀಯ ಉದ್ಯಾನವನ್ನು ನಾವು ಸಂರಕ್ಷಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಸುದ್ದಿ ಇನ್ನೊಂದಿಲ್ಲ   ನಮ್ಮ ಮುಂದಿನ ಪೀಳಿಗೆಗೆ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ಆನೆ ಕಾರಿಡಾರ್ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಉಳಿಸಲು ಈ ಪ್ರಯತ್ನವನ್ನು ಮಾಡುತ್ತಿರುವ ಪ್ರತಿಯೊಬ್ಬರೂ ಅಭಿನಂದನೆಗೆ ಅರ್ಹರು  ಎಂದಿದ್ದಾರೆ.

ನಮ್ಮ ಬೆಂಗಳೂರು ಫೌಂಡೇಶನ್  ನಾಗರಿರಿಕರ ಹಕ್ಕು ಕಾಪಾಡುವ  ಕೆಲಸ ಮಾಡಿಕೊಂಡು ಬಂದಿದೆ.   ಎನ್‌ಜಿಒ ನಮ್ಮ ಬೆಂಗಳೂರು ಫೌಂಡೇಶನ್ ಬೆಂಗಳೂರು ನಾಗರಿಕರ ಹಕ್ಕು ಸಂರಕ್ಷಣೆ ಗುರಿಯೊಂದಿಗೆ ಕೆಲಸ ಮಾಡಿಕೊಂಡು ಬಂದಿದೆ.   ನಾಗರಿಕರು ಸಂಕಷ್ಟಕ್ಕೆ  ಗುರಿಯಾಗುವ ಸಂದರ್ಭ ಎದುರಾದಾಗ ದನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದೆ. 

 

 

Latest Videos
Follow Us:
Download App:
  • android
  • ios