Asianet Suvarna News Asianet Suvarna News

Ballari: ಕನ್ನಡ ಪ್ರಭ-ಸುವರ್ಣ ನ್ಯೂಸ್ ಸಂಪಾದಕರಿಂದ 'ನಮ್ಮ ಬಳ್ಳಾರಿ' ವಿಶೇಷ ಪುರವಾಣಿ ಬಿಡುಗಡೆ

ಸದಾ ಒಂದೊಲ್ಲೊಂದು ವಿನೂತನ ಕಾರ್ಯಕ್ರಮವನ್ನು ಮಾಡೋ ಮೂಲಕ ಜನರನ್ನು ತಮ್ಮತ್ತ ಸೆಳೆಯೋ ಪ್ರಯತ್ನ ಮಾಡೋ ಕನ್ನಡ ಪ್ರಭ ದಿನಪತ್ರಿಕೆ ಈ ಬಾರಿ 'ನಮ್ಮ ಬಳ್ಳಾರಿ' ಎನ್ನುವ ವಿಶೇಷ ಪುರವಾಣಿಯನ್ನು ಹೊರ ತಂದಿದೆ.

Namma Ballari Special Edition release by Kannada Prabha Suvarna News Editor Ravi Hegde gvd
Author
Bangalore, First Published May 20, 2022, 9:51 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ಮೇ.20): ಸದಾ ಒಂದೊಲ್ಲೊಂದು ವಿನೂತನ ಕಾರ್ಯಕ್ರಮವನ್ನು ಮಾಡೋ ಮೂಲಕ ಜನರನ್ನು ತಮ್ಮತ್ತ ಸೆಳೆಯೋ ಪ್ರಯತ್ನ ಮಾಡೋ ಕನ್ನಡ ಪ್ರಭ (Kannada Prabha) ದಿನಪತ್ರಿಕೆ ಈ ಬಾರಿ 'ನಮ್ಮ ಬಳ್ಳಾರಿ' (Namma Ballari) ಎನ್ನುವ ವಿಶೇಷ ಪುರವಾಣಿಯನ್ನು ಹೊರ ತಂದಿದೆ. ಬಳ್ಳಾರಿ ಜೊತೆಗಿದ್ದ ವಿಜಯನಗರ (ಹೊಸಪೇಟೆ) ವಿಭಜನೆಗೊಂಡ ಬಳಿಕ ಬಳ್ಳಾರಿಯಲ್ಲಿರೋ ಐತಿಹಾಸಿಕ ಮತ್ತು ಪ್ರವಾಸಿ ತಾಣದ ಜೊತೆ ಬಳ್ಳಾರಿಯ ಇತಿಹಾಸವನ್ನು ಓದುಗರಿಗೆ ಮುಟ್ಟಿಸೋ ವಿನೂತನ ಪ್ರಯತ್ನವನ್ನು  ಕನ್ನಡ ಪ್ರಭ ವಿಶೇಷ ಪುರವಾಣಿ ಮಾಡಿದೆ. ಇನ್ನೂ ಕಾರ್ಯಕ್ರಮದಲ್ಲಿ ಪುರವಾಣಿ ಬಿಡುಗಡೆ ಜೊತೆ ಯಾರು ಕೂಡ ಗುರುತಿಸಿದ ನಿತ್ಯ ಪೇಪರ್ ಹಾಕೋ 250ಕ್ಕೂ ಹೆಚ್ಚು  ವಿತರಕರನ್ನು ಗುರುತಿಸಿ ಸನ್ಮಾನಿಸೋ ಮೂಲಕ ಪತ್ರಿಕಾ ರಂಗದ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲನ್ನು ಸ್ಥಾಪಿಸಿದೆ.
 
ಬಳ್ಳಾರಿ ವಿಶೇಷತೆ ಕುರಿತು ಲೇಖನಗಳು: ಸಾಲು ಸಾಲು ಪತ್ರಿಕಾ ವಿತರಕರಿಗೆ ಸನ್ಮಾನ. ಪತ್ರಿಕಾ ವಿತರಕರನ್ನು ಗುರುತಿಸಿದ ಕನ್ನಡದ ಮೊಟ್ಟ ಮೊದಲ ಕನ್ನಡಪ್ರಭ ದಿನ ಪತ್ರಿಕೆ. ನಮ್ಮ ಬಳ್ಳಾರಿ ಎನ್ನುವ ವಿನೂತನ ಪುರವಾಣಿಯನ್ನು ಹೊರ ತಂದು ಕನ್ನಡ ಪ್ರಭ ಪತ್ರಿಕೆಯನ್ನು ಕೊಂಡಾಡಿದ ಗಣ್ಯರು. ಹೌದು! ಬಳ್ಳಾರಿ ಇಂತಾಹದ್ದೊಂದು ವಿನೂತನ ಕಾರ್ಯಕ್ರಮಕ್ಕೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಶಾಸಕ ಸೋಮಶೇಖರ ರೆಡ್ಡಿ ಮತ್ತು ಸಂಸದ ದೇವೇಂದ್ರಪ್ಪ ಸಾಕ್ಷಿಯಾದ್ರು. ಬಳ್ಳಾರಿಯಂದ್ರೇ ಯಾರಿಗೆ ಗೊತ್ತಿಲ್ಲ ಹೇಳಿ? 

Namma Ballari Special Edition release by Kannada Prabha Suvarna News Editor Ravi Hegde gvd

ಇಲ್ಲಿನ ಇತಿಹಾಸ, ರಾಜಕೀಯ, ಸಂಸ್ಕೃತಿ, ಪರಂಪರೆ, ಗಣಿಗಾರಿಕೆಯ ವ್ಯವಹಾರ ಎಲ್ಲದರಲ್ಲೂ ಬಳ್ಳಾರಿ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಇದೆಲ್ಲವನ್ನು ಒಂದೇ ಸೂರಿನಡಿ ಅಂದ್ರೆ ಪುಸ್ತಕ ರೂಪದಲ್ಲಿ ಕಟ್ಟಿ ಕೊಡೋ ಪ್ರಯತ್ನವನ್ನು  ಕನ್ನಡ ಪ್ರಭ ವಿಶೇಷವಾದ ಪುರವಾಣಿಯನ್ನು ಮಾಡಿದೆ. ಈ ನೆಲದ ಸಂಸ್ಕೃತಿ, ಬಳ್ಳಾರಿ ರಾಜಕೀಯ ಮತ್ತು ಸ್ವಾತಂತ್ರ ಪೂರ್ವದ ಬಳ್ಳಾರಿ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದು ಸೇರಿದಂತೆ  ಹತ್ತು ಹಲವು ಐತಿಹಾಸಿಕ ವಿಷಯಗಳನ್ನೊಳಗೊಂಡ ಪುರವಾಣಿ ಜನಮಾನಸದಲ್ಲಿ ಉಳಿಯಲಿದೆ ಎಂದು ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಅವರು ಹೇಳಿದರು.
 
ಉತ್ಕೃಷ್ಟ ಮಾಧ್ಯಮವಾಗಿ ಬೆಳೆಯುವ ಸವಾಲು ನಮ್ಮ ಮುಂದಿದೆ: ರವಿ ಹೆಗಡೆ

ಪತ್ರಿಕಾ ವಿತರಕರಿಗೆ ಸನ್ಮಾನ: ಸಾಮಾನ್ಯ ವೇಳೆ ಸೇರಿದಂತೆ ಕೊರೊನಾದ ವೇಳೆ ಜೀವದ ಹಂಗು ತೊರೆದು ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸೋ ಮೂಲಕ ಪತ್ರಿಕಾ ವಿತರಕರೂ ಮಾಡೋ ಮೂಲಕ ಒಂದು ರೀತಿಯಲ್ಲಿ ಜನಸೇವೆ ಮಾಡಿದ್ದಾರೆ. ಈ ರೀತಿಯ ವ್ಯಕ್ತಿಗಳನ್ನು ಪತ್ರಿಕೆಗಳೇ ಗುರುತಿಸದಿದ್ದರೆ ಹೇಗೆ ಎನ್ನುವ ಪ್ರಶ್ನೆ ಸದಾ ಕಾಡುತ್ತಿತ್ತು. ಹೀಗಾಗಿ ಪುರವಾಣಿ ಬಿಡುಗಡೆ ನೆಪದಲ್ಲಿ ಬಳ್ಳಾರಿಯಲ್ಲಿನ 250ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಸನ್ಮಾನ ಮಾಡೋ ಮೂಲಕ ಮಾದರಿ ಕೆಲಸಕ್ಕೆ ಕನ್ನಡ ಪ್ರಭ ತಂಡ ಸಾಕ್ಷಿಯಾಗಿತ್ತು. 

Namma Ballari Special Edition release by Kannada Prabha Suvarna News Editor Ravi Hegde gvd

ಇನ್ನೂ ಕೊರೊನಾ ವೇಳೆ ಅದೆಷ್ಟೋ ಕಷ್ಟ ನಷ್ಟಗಳು ಬಂದರೂ ಈವರೆಗೂ ಕನ್ನಡ ಪ್ರಭ ಪತ್ರಿಕೆ ತನ್ನತನವನ್ನು ಬಿಡದೇ, ಪತ್ರಿಕಾಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಪತ್ರಿಕೆಯ ಹೆಗ್ಗಳಿಕೆಯನ್ನು ಕೊಂಡಾಡಿದರು. ಓಡುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಹೊಸ ಹೊಸ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದನ್ನು ಕನ್ನಡ ಪ್ರಭ ಪತ್ರಿಕೆ ಸದಾ ಅಳವಡಿಸಿಕೊಂಡಿದೆ ಅನ್ನೋದಕ್ಕೆ ಈ ಪುರವಾಣಿ ಬಿಡುಗಡೆ ಸಮಾರಂಭವೇ ಸಾಕ್ಷಿಯಾಗಿರೋದು ವಿಶೇಷವಾಗಿತ್ತು. 

Follow Us:
Download App:
  • android
  • ios