ಕಾರಾಗೃಹದಲ್ಲಿ ನಾಮಕರಣ, ಪುಟ್ಟ ಕೃಷ್ಣವೇಣಿಗೆ ಹಾರೖಕೆಗಳ ತೋರಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 3:18 PM IST
Naming ceremony in Raichur jail
Highlights

ರಾಯಚೂರು ಜಿಲ್ಲಾ ಕಾರಾಗೃಹ ವಿಶಿಷ್ಟ ಆಚರಣೆ ಒಂದಕ್ಕೆ ಸಾಕ್ಷಿಯಾಗಿದೆ. ಜೈಲಿನ ಅಧಿಕಾರಿಗಳೆ ಖೖದಿಯೊಬ್ಬರ ಮಗುವಿನ ನಾಮಕರಣ ಕಾರ್ಯಕ್ರಮ ಮಾಡಿ ಮುಗಿಸಿದ್ದಾರೆ.

ರಾಯಚೂರು(ಜು.19)  ಜಿಲ್ಲಾ ಕಾರಾಗೃಹದಲ್ಲೊಂದು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು ಜೖಲಿನಲ್ಲೆ ಮಗುವಿಗೆ ನಾಮಕರಣ ಮಾಡಿ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಗಿದೆ.

ವಿಚಾರಣಾಧೀನ ಖೈದಿಯೊಬ್ಬರ ಮಗುವಿಗೆ ನಾಮಕರಣ ಮಾಡಲಾಗಿದೆ. ಮಾನ್ವಿ ಬಳಿಯಲ್ಲಿ ಕಳ್ಳತನ ಹಾಗು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಖೈದಿ ಭಾಗ್ಯಮ್ಮನ ಹೆಣ್ಣು ಮಗುವಿಗೆ ನಾಮಕರಣ ಮಾಡಲಾಗಿದೆ.ಜಿಲ್ಲಾ ಕಾರಾಗೃಹಕ್ಕೆ ದಾಖಲಾಗುವಾಗುವಾಗಲೆ ಭ್ಯಾಗ್ಯಮ್ಮ ಗರ್ಭಿಣಿಯಾಗಿದ್ದರು. ಅವರಿಗೆ ಜೈಲಿನಲ್ಲಿರುವಾಗಲೇ ಹೆರಿಗೆಯಾಗುತ್ತು.

ಆಕೆಯ ಹೆಣ್ಣು ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸಿದ ಅಧಿಕಾರಿಗಳು ಕೃಷ್ಣವೇಣಿ ಎಂದು ಹೆಸರಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ಸೇರಿದಂತೆ ಹಲವರು ಭಾಗಿಯಾಗಿದ್ದರು.[ಸಾಂದರ್ಭಿಕ ಚಿತ್ರ]

loader