ಗಂಡ ಹೆಂಡತಿ ಜಗಳಕ್ಕೆ ಕಾರು ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಸಮೀಪದಲ್ಲಿ ನಡೆದಿದೆ. ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ವೇಳೆ ಕಾರು ಪಲ್ಟಿ ಹೊಡೆದಿದೆ.

ಬೆಂಗಳೂರು (ಜು.14): ಗಂಡ ಹೆಂಡತಿ ಜಗಳಕ್ಕೆ ಕಾರು ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಸಮೀಪದಲ್ಲಿ ನಡೆದಿದೆ. ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ವೇಳೆ ಕಾರು ಪಲ್ಟಿ ಹೊಡೆದಿದೆ. ಕಾರಿನಲ್ಲಿ ಪತಿ ಪತ್ನಿ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿಯು, ದಿಢೀರ್‌ ಸ್ಟೇರಿಂಗ್ ಎಳೆದಿದ್ದಾಳೆ. ಸ್ಟೇರಿಂಗ್ ಎಳೆದ ರಭಸಕ್ಕೆ ರಸ್ತೆಯಲ್ಲಿ ಕಾರು ಪಲ್ಟಿ ಹೊಡೆದಿದೆ. 

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ದಂಪತಿ ಪಾರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹಲಸೂರು ಗೇಟ್ ಪೊಲೀಸರು, ಪಲ್ಟಿ ಹೊಡೆದ ಕಾರು ನಿಲ್ಲಿಸಿ ದಂಪತಿ ರಕ್ಷಣೆ ಮಾಡಿದ್ದು, ಘಟನೆ ಬಗ್ಗೆ ದಂಪತಿ ವಿಚಾರಣೆ ನಡೆಸಿದ್ದಾರೆ.

ಜಿಲೆಟಿನ್‌ ಬಳಕೆ: ಶಾಸಕ ಮುನಿರತ್ನ ಸೇರಿ 5 ಮಂದಿ ಮೇಲೆ ಕೇಸ್‌

ಚಾಲಕನ ನಿಯಂತ್ರಣ ತಪ್ಪಿ ಸವೀರ್‍ಸ್‌ ರಸ್ತೆಗೆ ನುಗ್ಗಿದ ಟ್ರಕ್‌: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್‌ ಟ್ರಕ್‌ ಸವೀರ್‍ಸ್‌ ರಸ್ತೆಗೆ ನುಗ್ಗಿದ ಘಟನೆ ತಾಲೂಕಿನ ಸಂಕಲಗೆರೆ ಗೇಟ್‌ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬುಧವಾರ ಮಧ್ಯಾಹ್ನ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬೃಹತ್‌ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿದೆ. 

ರಸ್ತೆ ವಿಭಜಕವನ್ನು ದಾಟಿದ ಟ್ರಕ್‌ ಮೈಸೂರು ಕಡೆಗೆ ಹೋಗುವ ರಸ್ತೆಯನ್ನು ಹಾಯ್ದು, ಎಕ್ಸ್‌ಪ್ರೆಸ್‌ ವೇ ಹಾಗೂ ಸವೀರ್‍ಸ್‌ ರಸ್ತೆ ಮಧ್ಯೆ ಅಳವಡಿಸಿರುವ ತಂತಿ ಬೇಲಿಯನ್ನು ಮುರಿದು ಸವೀರ್‍ಸ್‌ ರಸ್ತೆಗೆ ನುಗ್ಗಿದೆ. ಅದೃಷ್ಟವಶಾತ್‌ ಹೆದ್ದಾರಿಯ ಎರಡು ರಸ್ತೆಗಳಲ್ಲಿ ಆ ವೇಳೆ ಯಾವುದೇ ವಾಹನಗಳು ಸಂಚರಿಸಿದ ಹಿನ್ನೆಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಈ ಅಪಘಾತದ ದೃಶ್ಯ ಸಮೀಪದ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಚನ್ನಪಟ್ಟಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರದ ಅವಧಿಯಲ್ಲಿ 1360 ಪ್ರಕರಣ ದಾಖಲು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಅಪಘಾತ ನಿಯಂತ್ರಣ ಹಾಗೂ ಸಂಚಾರ ನಿಯಮ ಪಾಲನೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಂದು ವಾರದ ಅವಧಿಯಲ್ಲಿ 1360 ಪ್ರಕರಣ ದಾಖಲಿಸಿದ್ದಾರೆ.

ಟ್ಯೂಷನ್‌ಗೆ ಹೊರಟಿದ್ದ ಬಾಲಕಿ ಅಪಹರಣ ಯತ್ನ: ಆರೋಪಿ ಬಂಧನ

ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರತಿನಿತ್ಯ ರಾಮನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡಾಸ್ತ್ರವನ್ನು ಮುಂದುವರಿಸಿದ್ದಾರೆ. ಅತಿವೇಗವಾಗಿ ವಾಹನ ಚಲಾಯಿಸುವ 694 ಪ್ರಕರಣ, ಲೇನ್‌ ಡಿಸಿಪ್ಲೀನ್‌ ಉಲ್ಲಂಘನೆಯ 260 ಪ್ರಕರಣ, ಸೀಟ್‌ ಬೆಲ್ಟ್‌ ಹಾಕದಿದ್ದಕ್ಕೆ 205 ಪ್ರಕರಣ, ಹೆಲ್ಮೆಟ್‌ ಧರಿಸದೆ ದ್ವಿಚಕ್ರವಾಹನ ಸವಾರಿ ಮಾಡಿದ್ದಕ್ಕೆ 110 ಪ್ರಕರಣ ಹಾಗೂ ಇತರೆ ನಿಯಮ ಉಲ್ಲಂಘನೆಗೆ 93 ಪ್ರಕರಣ ಸೇರಿ ಒಂದು ವಾರದ ಅವಧಿಯಲ್ಲಿ ಒಟ್ಟು 1360 ಪ್ರಕರಣ ದಾಖಲಿಸಿದ್ದಾರೆ.