ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರದವರೆಗೆ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಲ್ಯಾಂಗ್‌ಫೋರ್ಡ್ ಟೌನ್‌ವರೆಗೆ ಸುರಂಗ ಪೂರ್ಣವಾಗಿದೆ. ಉಳಿದಂತೆ, ಎಂ.ಜಿ.ರಸ್ತೆಯಿಂದ ವೆಲ್ಲಾರ ಜಂಕ್ಷನ್, ದಂಡು ರೈಲ್ವೆ ನಿಲ್ದಾಣದಿಂದ ಪಾಟರಿ ಟೌನ್ ಮತ್ತು ಪಾಟರಿ ಟೌನ್ ಸ್ಟೇಷನ್‌ನಿಂದ ಶಾದಿಮಹಲ್ ರಿಟ್ರೀವಲ್‌ವರೆಗೆ ಸುರಂಗ ಕಾಮಗಾರಿ ನಡೆಯುತ್ತಿವೆ.
ಬೆಂಗಳೂರು(ಆ.31): 'ನಮ್ಮ ಮೆಟ್ರೋ’ದ ಕಾಳೇನಅಗ್ರಹಾರ-ನಾಗವಾರ ‘ಗುಲಾಬಿ’ ಮಾರ್ಗದ (21.30 ಕಿಲೋ ಮೀಟರ್) ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ವಮಿಕಾ ಹೆಸರಿನ ಯಂತ್ರ (ಟಿಬಿಎಂ) 721 ಮೀಟರ್ ಮೆಟ್ರೋ ಸುರಂಗ ಕೊರೆದು ಹೊರ ಬಂದಿದೆ. ಇದರೊಂದಿಗೆ ಈ ಮಾರ್ಗದ 20 ಕಿ.ಮೀ. ಜೋಡಿ ಸುರಂಗದ ಪೈಕಿ 17.62 ಕಿ.ಮೀ. ಸುರಂಗ ಕೊರೆವ ಕಾರ್ಯ ಮುಗಿದಂತಾಗಿದೆ.
ಕಳೆದ ಏ.21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿದ್ದ ‘ವಮಿಕಾ’, ಬುಧವಾರ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣದಲ್ಲಿ ಹೊರಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ತಿಳಿಸಿದೆ.
ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ನಮ್ಮ ಮೆಟ್ರೋ; ನೇರಳೆ ಮಾರ್ಗದಲ್ಲಿ ವಾರದ 5 ದಿನವೂ ಹೆಚ್ಚುವರಿ ಸೇವೆ!
ಈ ಹಿಂದೆ ‘ವಮಿಕಾ ಟಿಬಿಎಂ’ ಸೌತ್‌ರಾರಯಂಪ್ ಮತ್ತು ಡೈರಿ ಸರ್ಕಲ್ ಸುರಂಗ ನಿಲ್ದಾಣಗಳ ನಡುವೆ 613.2 ಮೀಟರ್ ಹಾಗೂ ಡೈರಿ ಸರ್ಕಲ್ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ. ಸುರಂಗ ಕಾಮಗಾರಿ ಪೂರ್ಣಗೊಳಿಸಿತ್ತು. ಒಟ್ಟಾರೆ ಸುರಂಗ ಕಾರ್ಯಾಚರಣೆ ನಡೆಸುತ್ತಿದ್ದ 9 ಟಿಬಿಎಂ ಯಂತ್ರಗಳ ಪೈಕಿ 6 ಟಿಬಿಎಂಗಳು ತಮ್ಮ ಕಾಮಗಾರಿ ಪೂರ್ಣಗೊಳಿಸಿವೆ ಎಂದು ನಿಗಮ ತಿಳಿಸಿದೆ.
ಬಾಕಿ ಕಾಮಗಾರಿ
ಉಳಿದಂತೆ ‘ರುದ್ರ ಟಿಬಿಎಂ’ ಸೌತ್ ರಾರಯಂಪ್ ಡೇರಿ ಸರ್ಕಲ್‌ವರೆಗೆ 613.20 ಮೀ., ಹಾಗೂ ಡೇರಿ ಸರ್ಕಲ್‌ನಿಂದ ಲಕ್ಕಸಂದ್ರವರೆಗೆ 746.2 ಮೀ. ಸುರಂಗ ಕೊರೆದಿದೆ. ಇದೀಗ ಲಕ್ಕಸಂದ್ರದಿಂದ ಲ್ಯಾಂಡ್‌ಫೋರ್ಡ್‌ವರೆಗೆ 633.2 ಮೀ. ಸುರಂಗ ಕೊರೆವ ಕಾಮಗಾರಿಯಲ್ಲಿ ತೊಡಗಿದ್ದು, ಇಲ್ಲಿ 87ಮೀ. ಕೆಲಸ ಪೂರ್ಣಗೊಳಿಸಿದೆ. ಈ ಟಿಬಿಎಂ ಡಿಸೆಂಬರ್‌ನಲ್ಲಿ ತನ್ನ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇನ್ನು, ‘ತುಂಗಾ ಟಿಎಂಬಿ’ ವೆಂಕಟೇಶಪುರ- ಕಾಡುಗೊಂಡನಹಳ್ಳಿ ಬಳಿ 838.8 ಮೀ. ಸುರಂಗ ಕೊರೆಯುತ್ತಿದೆ. ಭದ್ರಾ ಟಿಬಿಎಂ 406 ಮೀ. ಸುರಂಗ ಕೊರೆಯುವುದು ಬಾಕಿ ಇದೆ.
ಕೆಲಸ ಪೂರ್ಣ
ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರದವರೆಗೆ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಲ್ಯಾಂಗ್‌ಫೋರ್ಡ್ ಟೌನ್‌ವರೆಗೆ ಸುರಂಗ ಪೂರ್ಣವಾಗಿದೆ. ಉಳಿದಂತೆ, ಎಂ.ಜಿ.ರಸ್ತೆಯಿಂದ ವೆಲ್ಲಾರ ಜಂಕ್ಷನ್, ದಂಡು ರೈಲ್ವೆ ನಿಲ್ದಾಣದಿಂದ ಪಾಟರಿ ಟೌನ್ ಮತ್ತು ಪಾಟರಿ ಟೌನ್ ಸ್ಟೇಷನ್‌ನಿಂದ ಶಾದಿಮಹಲ್ ರಿಟ್ರೀವಲ್‌ವರೆಗೆ ಸುರಂಗ ಕಾಮಗಾರಿ ನಡೆಯುತ್ತಿವೆ.
ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್, ಎರಡೂ ಸುರಂಗ ಮಾರ್ಗದ (ನಿಲ್ದಾಣ ಹೊರತುಪಡಿಸಿ) 20 ಕಿ.ಮೀ. ಪೈಕಿ 17.62 ಕಿ.ಮೀ. ಸುರಂಗ ಕೊರೆಯಲಾಗಿದೆ. ಬಾಕಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದ್ದು, ಬಳಿಕ ಹಳಿ ಜೋಡಣೆ ಸೇರಿ ಇತರೆ ಕಾಮಗಾರಿ ನಡೆಸಲಾಗುವುದು ಎಂದರು.
ಗುಲಾಬಿ ಮಾರ್ಗದ ಸುರಂಗ
ಸುರಂಗ ಮಾರ್ಗ: 20.991 ಕಿ.ಮೀ.
ಕಾಮಗಾರಿ ಪೂರ್ಣ: 17.62 ಕಿ.ಮೀ.
ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಮತ್ತಷ್ಟು ಕಾಲ ವಿಳಂಬ: ಯಾಕೆ ಗೊತ್ತಾ?
ಹೆಚ್ಚುವರಿ ಟ್ರಿಪ್
ಬೆಳಗಿನ ಜನದಟ್ಟಣೆಯ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ, ಬಿಎಂಆರ್‌ಸಿಎಲ್ ಸೆ. 1ರಿಂದ ಪ್ರಾಯೋಗಿಕವಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ (ನೇರಳೆ ಮಾರ್ಗ) ಸೋಮವಾರದಿಂದ ಶುಕ್ರವಾರದವರೆಗೆ ರೈಲುಗಳ ಹೆಚ್ಚುವರಿ ಸಂಚಾರ ಮಾಡುತ್ತಿದೆ.
ಮಹಾತ್ಮಾಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಳಿದು ಬೈಯಪ್ಪನಹಳ್ಳಿ ಕಡೆಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
