ಗಮನಿಸಿ, ಆ.20ರಿಂದ ನಮ್ಮ ಮೆಟ್ರೋದಲ್ಲಿ ವ್ಯತ್ಯಯ, ಕೆಲವು ನಿಲ್ದಾಣದಲ್ಲಿ ಸಂಚಾರವೇ ರದ್ದು!

ಬೆಂಗಳೂರು ಮೆಟ್ರೋ ಪ್ರಯಾಣಿಕರ ಗಮನಕ್ಕೆ, ಆ.20ರಿಂದ ಕೆಲವು ದಿನಗಳ ಕಾಲ ಹಸಿರು ಮಾರ್ಗದಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಸಿಗ್ನಲಿಂಗ್ ಪರೀಕ್ಷೆಯಿಂದಾಗಿ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಬದಲಾವಣೆ ಮಾಡಲಾಗಿದೆ.

nagasandra to madavara metro signaling  test namma metro green line timings Disruption gow

ಬೆಂಗಳೂರು (ಆ.20): ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸಂದೇಶ ನೀಡಿದೆ. ಇಂದಿನಿಂದ ಕೆಲವು ದಿನ ಕೆಲವೆಡೆ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ‌ ವ್ಯತ್ಯಯವಾಗಲಿದೆ. ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ. ಜೊತೆಗೆ ನಿಗದಿಪಡಿಸಿದ ದಿನದಂದು ಹಸಿರು ಮಾರ್ಗ ಸಂಚಾರ ಕೆಲ ನಿಲ್ದಾಣದಲ್ಲಿ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ಹಿನ್ನೆಲೆ ಪೀಣ್ಯ ಇಂಡಸ್ಟ್ರಿ ಸ್ಟೇಷನ್ ಗೆ ಪ್ರಯಾಣಿಕರು ಮುಗಿಬಿದ್ದರು. ಕಿಲೋಮೀಟರ್  ಗಟ್ಟಲೆ ಕ್ಯೂ ನಿಂತು ಒಳ ಪ್ರವೇಶಿಸಿದರು. 1 ಗಂಟೆ, 2 ಗಂಟೆಗಳ ಕಾಲ ಕ್ಯೂ ನಲ್ಲಿ ನಿಂತು ಮೆಟ್ರೋದಲ್ಲಿ ಸ್ಟೇಷನ್ ಪ್ರವೇಶಿಸಿದ ಜನ ಆಕ್ರೋಶ ಕೂಡ ವ್ಯಕ್ತಪಡಿಸಿದರು. ಗಂಟೆಗಟ್ಟಲೇ ಕಾದವರನ್ನು ಒಳಗೆ ಬಿಡುತ್ತಿಲ್ಲ, ಮೆಟ್ರೋ ಸಿಬ್ಬಂದಿಗಳು ತಮಗೆ ಬೇಕಾದವರನ್ನು ಬಿಡುತ್ತಿದ್ದಾರೆ ಎಂದು ಆಕ್ರೋಶಗೊಂಡರು.

ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರ ನಡುವೆ ಸಿಗ್ನಲಿಂಗ್ ಸಂಬಂಧಿತ  ಪರೀಕ್ಷೆ ನಡೆಯುತ್ತಿದ್ದು,  ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ.

5 ಪುಟಗಳ ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣು, 16 ಮಂದಿ ವಿರುದ್ಧ ದೂರು!

ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಆಗಸ್ಟ್ 20, 23 ಮತ್ತು 30 ಹಾಗೂ  ಸೆಫ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಸ್ಥಗಿತವಾಗಲಿದೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24ರಂದು  ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00ಕ್ಕೆ ಇರಲಿದೆ. ಆಗಸ್ಟ್ 25ರಂದು  ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00ಕ್ಕೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.

ಕೆಆರ್‌ಎಸ್‌ ಮೂಲವಾಗಿರುವ ಮಂಡ್ಯದಲ್ಲಿ ಅಂತರ್ಜಲ ಮಟ್ಟ ಕುಸಿತ, ಆತಂಕದ ಮುನ್ಸೂಚನೆ!

ಪೀಣ್ಯ  ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ ಆಗಸ್ಟ್ 24 ಕೊನೆಯ ರೈಲು ಸೇವೆ ರಾತ್ರಿ 11.12 ಕ್ಕೆ ಹೊರಡಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಿಗ್ಗೆ 5 ಕ್ಕೆ ಬದಲಾಗಿ 6 ಕ್ಕೆ ಪ್ರಾರಂಭವಾಗಲಿದೆ. ನೇರಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದ ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Latest Videos
Follow Us:
Download App:
  • android
  • ios