ಧಾರವಾಡ(ಜು.23): ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ಮಹಾಮಾರಿ ಕೊರೋನಾ ಬಿಸಿ ತಟ್ಟಿದೆ. ಹೌದು,  ಹಬ್ಬದಂದು ಸ್ವಾಮಿಗಳನ್ನು ಬಿನ್ನಯಕ್ಕೆ ಕರಿಯಬಾರದು, ಪೂಜೆ ಮಾಡಿಸಬಾರದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಾರದು. ನಾಗಪ್ಪನ ಮೂರ್ತಿ ಕೊಳ್ಳಬಾರದು ತಾವೇ ಮನೆಯಲ್ಲೇ ನಾಗಪ್ಪನ ಮೂರ್ತಿ ಮಾಡಿಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡ ಘಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆದಿದೆ.   

ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ನಾಗಪ್ಪ ಮೂರ್ತಿಯನ್ನ ಮನೆಯಲ್ಲೇ ಮಾಡಬೇಕು, ಸ್ವಾಮಿಗಳನ್ನು ಮನೆ ಮನೆಗೆ ಪೂಜೆಗೆ ಕರಿಯಬಾರದು ಎಂದು ಡಂಗುರ ಹೊರಡಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. 

ಹುಬ್ಬಳ್ಳಿ: ಪಾಕಿಸ್ತಾನ ವಿರುದ್ಧ ಗೆದ್ದು ಕೊರೋನಾಗೆ ಸೋತ ಯೋಧ!

ಪ್ರತಿ ವರ್ಷದ ನಾಗರ ಪಂಚಮಿ ಹಬ್ಬದಂದು ನಾಗಪ್ಪ ಮೂರ್ತಿಗೆ ಪೂಜೆ ಮಾಡಿದ ಬಳಿಕ ಊರಲ್ಲಿನ ಸ್ವಾಮಿಗಳನ್ನು  ಕರೆದ ಪ್ರಸಾದ ಮಾಡಿಸುವ ಪದ್ದತಿ ಇದೆ. ಆದರೆ, ಈ ಪದ್ದತಿಗೂ ಮಹಾಮಾರಿ ಕೊರೋನಾ ತಡೆಯೊಡ್ಡಿದೆ. ಉತ್ತರ ಕರ್ನಾಟದಕ ಎಲ್ಲಾ ಭಾಗದಲ್ಲಿ ಇರುವ ಪದ್ದತಿ ಪದ್ದತಿಯನ್ನು ಆಚರಿಸದಂತೆ ಗ್ರಾಮದಲ್ಲಿ ಡಂಗುರ ಹೊರಡಿಸಲಾಗಿದೆ.