Asianet Suvarna News Asianet Suvarna News

Mysuru : ಅಂತರಸಂತೆಗೆ ಘನತ್ಯಾಜ್ಯ ವಿಲೇವಾರಿ ಘಟಕ ಮಂಜೂರು

ಅಂತರಸಂತೆ ಗ್ರಾಪಂಗೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಅವಕಾಶ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಎಂಬುದಾಗಿ ಪಿಡಿಒ ಚಿದಾನಂದ ಸ್ವಾಮಿ ತಿಳಿಸಿದರು.

Mysuru : Solid waste disposal unit sanctioned for interstate snr
Author
First Published Oct 2, 2023, 6:33 AM IST

 ಎಚ್‌.ಡಿ. ಕೋಟೆ :  ಅಂತರಸಂತೆ ಗ್ರಾಪಂಗೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಅವಕಾಶ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಎಂಬುದಾಗಿ ಪಿಡಿಒ ಚಿದಾನಂದ ಸ್ವಾಮಿ ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಸ್ವಚ್ಛತೆಯ ಸೇವೆ ಎಂಬುದನ್ನು ಎಲ್ಲರೂ ಮೈಗೂಡಿಸಿಕೊಳ್ಳುತ್ತಾ ನಮ್ಮ ಮನೆ, ನಮ್ಮ ಗ್ರಾಮ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತ ಉತ್ತಮ ಆರೋಗ್ಯ, ಉತ್ತಮ ಗಾಳಿ, ಉತ್ತಮ ಬೆಳಕನ್ನು ಮುಂದಿನ ತಲೆಮಾರಿಗೆ ಉಳಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಉದಾಹರಣೆಗೆ ಹಿಂಗುಗುಂಡಿ, ತ್ಯಾಜ್ಯ ವಿಲೇವಾರಿಯಲ್ಲಿ ಘನ ತ್ಯಾಜ್ಯ ದ್ರವ ತ್ಯಜಿಯ ಹೀಗೆ ವಿಂಗಡಿಸುತ್ತಾ ಉತ್ತಮ ಪರಿಸರ ನಿರ್ಮಿಸೋಣ ಎಂದರು.

ಬಳಿಕ ಎಲ್ಲರೂ ಶ್ರಮದಾನ ಪ್ರಯುಕ್ತ ಹಾಗೂ ಗಾಂಧೀಜಿಯವರ ಆಶಯದಂತೆ ನಡೆಯಲು ಸ್ವಚ್ಛತಾ ಸೇವೆಯ ಪ್ರಯುಕ್ತ ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬಳಿಕ ಗ್ರಾಪಂ ಆವರಣ, ಬಸ್‌ನಿಲ್ದಾಣ, ಆಟೋ ನಿಲ್ಾಣ, ಗ್ರಾಮದ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ರೂಪಾ ಸುಬ್ರಹ್ಮಣ್ಯ, ಗ್ರಾಪ ಸದಸ್ಯರಾದ ನಸ್ರಿನ್ ತಾಜ್, ಕಲೀಮ್ ಪಾಷಾ, ಕಾರ್ಯಕ್ರಮ ಅಧಿಕಾರಿ ಸೌಭಾಗ್ಯ, ಸಹಾಯಕ ಕಾರ್ಯಕ್ರಮ ಅಧಿಕಾರಿ ಸುರೇಶ್, ಕ್ಷೇತ್ರ ಸಹಾಯಕ ಮಣಿಕಂಠ, ಅಂತರಸಂತೆ ಗ್ರಾಪಂ ಸಿಬ್ಬಂದಿ, ಜನ ಶಿಕ್ಷಣ ಸಂಸ್ಥೆಯ ವೃತ್ತಿ ಬೋಧಕಿ ಆರ್‌. ಸವಿತಾ, ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಎಲ್ಲಾ ಸದಸ್ಯರು, ಗ್ರಾಮಸ್ಥರು ಹಾಗೂ ಜನ ಶಿಕ್ಷಣ ಸಂಸ್ಥೆಯ ಹೊಲಿಗೆ ತರಬೇತಿ ಹಾಗೂ ಜೂಟ್ ತರಬೇತಿಯ ಎಲ್ಲಾ ಕಲಿಕಾರ್ಥಿಗಳು ಪಾಲ್ಗೊಂಡಿದ್ದರು.

ಬುಲೆಟ್ ವೇಗದಲ್ಲಿ ಸ್ವಚ್ಛತೆ

ಬೆಂಗಳೂರು (ಅ.2): ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 'ಮಿರಾಕಲ್' 14 ನಿಮಿಷಗಳು' ಎಂಬ ಹೆಸರಿನಡಿ ಸ್ವಚ್ಛಗೊಳಿಸುವ ವ್ಯವಸ್ಥೆ ಆರಂಭಿಸಿದೆ.

ಭಾನುವಾರ ಮಧ್ಯಾಹ್ನ ಯಶವಂತಪುರ ರೈಲು ನಿಲ್ದಾಣ(Yaswantapur railway station)ಕ್ಕೆ ಆಗಮಿಸಿದ ಕಾಚಿಗುಡ ಯಶವಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌(Vande bharat express) ರೈಲನ್ನು ಕೇವಲ 13 ನಿಮಿಷಗಳಲ್ಲಿ ಸ್ವಚ್ಛಗೊ ಳಿಸಿ ಪ್ರಯಾಣಿಕರಿಗೆ ರೈಲು ಹತ್ತಲು ಸಿದ್ಧಗೊಳಿಸಲಾಯಿತು. ಮೊದಲೇ ಸಿದ್ಧಗೊಂಡಿದ್ದ 25ಕ್ಕೂ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ರೈಲಿನಿಂದ ಪ್ರಯಾಣಿಕರು ಇಳಿದ ತಕ್ಷಣ ಸ್ವಚ್ಛಗೊಳಿಸಿ ಜನರಿಗೆ ಪ್ರಯಾಣಿಸಲು ಮಾಡಿಕೊಟ್ಟರು.

ರೈಲಲ್ಲಿ 'ನೀನ್​ ಚಂದಾನೆ' ಹಾಡಿಗೆ ಆ್ಯಂಕರ್​ ಅನುಶ್ರೀ ಸಕತ್​ ಎಂಜಾಯ್​: ಇಲ್ಲೂ ಮದ್ವೆ ವಿಷ್ಯ ಕೆದಕಿದ ಫ್ಯಾನ್ಸ್​!

ಈ ವೇಳೆ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್, ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತಾ ಪ್ರಕ್ರಿ ಯೆಗೆ ಸಮಯ ಕಡಿಮೆ ಇರುವುದರಿಂದ ಪ್ರಯಾಣಿಕರು ಹತ್ತಿ ಇಳಿಸುವುದು ತ್ವರಿತವಾಗಿ ನಡೆಯಬೇಕು. ರೈಲ್ವೆ ಸಚಿವರ ಪರಿಕಲ್ಪನೆಯಂತೆ ಜಾರಿಗೆ ಬರುತ್ತಿದೆ. ಇದು ನಿರಂತರವಾಗಿರಲಿದೆ ಎಂದರು.

Follow Us:
Download App:
  • android
  • ios