Asianet Suvarna News Asianet Suvarna News

Mysuru : ಸಾರ್ವಜನಿಕ ಉದ್ದಿಮೆ ಖಾಸಗಿಯರಿಗೆ ಮಾರಾಟ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಡವರ ಅನುಕೂಲಕ್ಕಾಗಿ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದವರು ಖಾಸಗಿಯರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಆರೋಪಿಸಿದರು.

Mysuru  Sale of Public Enterprise to Private snr
Author
First Published Nov 20, 2022, 4:24 AM IST

 ಮೈಸೂರು (ನ.20):  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಡವರ ಅನುಕೂಲಕ್ಕಾಗಿ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದವರು ಖಾಸಗಿಯರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಆರೋಪಿಸಿದರು.

ನಗರದ ಕಾಂಗ್ರೆಸ್‌ (Congress)  ಭವನದಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದ ಅವರು, ದೇಶಕ್ಕೆ ಕಾಂಗ್ರಸ್‌ ಏನು ಮಾಡಿದೆ ಎಂದು ಪ್ರಶ್ನಿಸುವವರು ಮೊದಲು ತಾವು ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡಲಿ. ಕಾಂಗ್ರಸ್‌ ಅವಧಿಯಲ್ಲಿ ಸ್ಥಾಪಿಸಿದ ರೈಲ್ವೆ, ವಿಮಾನ ತಯಾರಿಕ ಸಂಸ್ಥೆ, ಬ್ಯಾಂಕ್‌ ಹೀಗೆ ಅನೇಕ ಸಾರ್ವಜನಿಕ ಆಸ್ತಿಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದೇ ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವರು ಉದ್ದಗಲಕ್ಕೂ ತಳಸಮುದಾಯಗಳ ಏಳಿಗೆಗಾಗಿ ಶ್ರಮಿಸಿದರು. ಅವರು ಜಾರಿಗೊಳಸಿದ್ದ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯಿಂದ ದೇಶದ ಬಹುಸಂಖ್ಯಾತ ಬಡವರು, ಕಾರ್ಮಿಕರು, ದಲಿತರಿಗೆ ಜಮೀನ್ದಾರರು ನೀಡುತ್ತಿದ್ದ ಕಿರುಕುಳ ತಪ್ಪಿತು. ಅವರು ಜಾರಿಗೊಳಸಿ ಉಳುವವನೆ ಭೂಮಿಯ ಒಡೆಯ ಕಾನೂನಿಂದ ಕೋಟ್ಯಾಂತರ ಭೂ ರಹಿತ ಬಡವರಿಗೆ ಸ್ವಂತ ಭೂಮಿ ದೊರೆಯುವಂತಾಯಿತು ಎಂದು ಅವರು ಹೇಳಿದರು.

ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಮಾತನಾಡಿ, ಇಂದಿರಾ ಗಾಂಧಿ ಅವರು ಈ ದೇಶ ಕಂಡ ಒಬ್ಬ ಅಪರೂಪದ ಪ್ರಬಲ ಮಹಿಳಾ ಪ್ರಧಾನಿ. ತಮ್ಮ ಚುರುಕಾದ ನಡೆ ನುಡಿ ಮತ್ತು ಆಡಳಿತದಿಂದ ಉಕ್ಕಿನ ಮಹಿಳೆ ಎಂದೇ ಪ್ರಖ್ಯಾತಿ ಪಡೆದವರು. ಅವರು ದೇಶಕ್ಕೆ ಮಾಡಿದ ಉಪಕಾರವನ್ನ ಜನರು ಮರೆತ ಕಾರಣ ಇಂದು ಕಾಂಗ್ರಸ್‌ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು.

ಇಂದಿರಾ ಗಾಂಧಿ ಅವರು ತಮ್ಮ ದಿಟ್ಟಆಡಳಿತದಿಂದ ಇಡೀ ಪ್ರಪಂಚವೇ ತನ್ನತ್ತ ನೋಡುವಂತೆ ಮಾಡಿದರು. ನಿಜವಾದ ವಿಶ್ವಗುರು ಇಂದಿರಾ ಗಾಂಧಿಯೇ ಹೊರತು ನರೇಂದ್ರ ಮೋದಿಯಲ್ಲ. ಆರ್‌ಎಸ್‌ಎಸ್‌ ಸಿದ್ಧಪಡಿಸಿ ಕೊಟ್ಟಭಾಷಣ ಬಿಟ್ಟು ಮೋದಿ ಅವರಿಂದ ಸ್ವತಂತ್ರ್ಯವಾಗಿ ಮಾತನಾಡಲು ಆಗುವುದಿಲ್ಲ ಎಂದು ಅವರು ದೂರಿದರು.

ಮಾಜಿ ಶಾಸಕ ವಾಸು, ಕಾಂಗ್ರಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ಮಾಜಿ ಮೇಯರ್‌ಗಳಾದ ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್‌, ಮುಖಂಡರಾದ ಶಿವಮಲ್ಲು, ಎಂ. ಶಿವಣ್ಣ, ಎಂ.ಕೆ. ಅಶೋಕ್‌, ಡಾ. ಸುಜಾತ, ಈಶ್ವರ್‌ ಚಕ್ಕಡಿ, ರಾಜೇಶ್‌ ಮೊದಲಾದವರು ಇದ್ದರು.

ಉದ್ದಿಮೆಗೆ 90 ದಿನದಲ್ಲಿ ಅನುಮತಿ

ಬೆಂಗಳೂರು   ಮೂರು ದಿನಗಳ ಕಾಲ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರು. ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು, ಶೇ.90ಕ್ಕೂ ಹೆಚ್ಚು ಯೋಜನೆಗಳಲ್ಲಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಹೂಡಿಕೆ ಮಾಡಲು ಉದ್ಯಮದಾರರು ಆಸಕ್ತಿ ತೋರಿಸಿದ್ದಾರೆ. ಉದ್ದಿಮೆ ಸ್ಥಾಪನೆಗೆ 90 ದಿನಗಳ ಒಳಗೆ ಅನುಮೋದನೆ ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಯಶಸ್ಸಿನ ಕುರಿತು ವಿವರಿಸಿದ ಅವರು, 9,81,784 ಕೋಟಿ ಬಂಡವಾಳ ಹೂಡಿಕೆ ಒಪ್ಪಂದದ ಪೈಕಿ ಲಕ್ಷ ಕೋಟಿ ರು. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5,41,369 ಕೋಟಿ ರು. ಮೊತ್ತದ 57 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 1.57 ಲಕ್ಷ ಕೋಟಿ ರು. ಮೊತ್ತದ ಎರಡು ಯೋಜನೆಗಳನ್ನು ಸಮಾವೇಶದಲ್ಲಿ ಘೋಷಿಸಲಾಗಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.

Global Investors Meet 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ

ವಿವಿಧ ಉದ್ಯಮಿಗಳು 2 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಕುರಿತು ಒಪ್ಪಂದದ ಪ್ರಸ್ತಾವನೆಗಳೊಂದಿಗೆ ಬಂದಿದ್ದರು. ಆದರೆ ಈ ಯೋಜನೆಗಳಿಗೆ ಭೂಮಿ, ವಿದ್ಯುತ್‌, ಕಚ್ಚಾ ವಸ್ತುಗಳು ಹಾಗೂ ಸಹಾಯಧನ ಸೇರಿದಂತೆ ವಿವಿಧ ವಿಷಯಗಳು ಇತ್ಯರ್ಥವಾಗಬೇಕಾಗಿದ್ದರಿಂದ ಒಪ್ಪಂದ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಉದ್ಯಮಿಗಳೊಂದಿಗೆ ನಮ್ಮ ಅಧಿಕಾರಿಗಳು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ವಿವರಿಸಿದರು.

90 ದಿನದೊಳಗೆ ಒಪ್ಪಿಗೆ: ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗವುದು. ಒಪ್ಪಂದಗಳಿಗೆ 90 ದಿನದೊಳಗೆ ಅನುಮೋದನೆ ನೀಡಲಾಗುವುದು. ಒಡಂಬಡಿಕೆ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್‌ ಅಧಿಕಾರಿ ನೇಮಕ ಮಾಡಲಾಗುವುದು ಎಂದ ಅವರು, ಆಗಿರುವ ಒಪ್ಪಂದದ ಪೈಕಿ ಶೇ.70ರಷ್ಟು ಯೋಜನೆಗಳು ಅನುಷ್ಠಾನಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios