ಮೈಸೂರಿನಲ್ಲಿ ಮಂಗಳಮುಖಿಯರು ಗುಂಪಾಗಿ ಬಂದು ಕಿರುಕುಳ ನೀಡಿದ್ದಾರೆಂದು ಬೇಸತ್ತ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೈಸೂರು (ಜೂ.24): ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳಮುಖಿಯರು ಗುಂಪಾಗಿ ಬಂದು ಕಿರುಕುಳ ನೀಡಿದ್ದಾರೆಂದು ಬೇಸತ್ತ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಮಂಗಳಮುಖಿಯರ ಕಿರುಕುಳ ನೀಡಿದ್ದಾರೆಂದು ಮನನೊಂದ ಅಪ್ರಾಪ್ತ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಹುಲ್ ಮೌರ್ಯ(17) ಎಂದು ಗುರುತಿಸಲಾಗಿದೆ. ಇನ್ನು ಘಟನೆ ಬಗ್ಗೆ ಸೂಕ್ತ ತೆನಿಖೆ ನಡೆಸುವಂತೆ ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರಾಹುಲ್ ಮೌರ್ಯ ಎಳನೀರು ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದನು. ಆದರೆ, ಈ ಸ್ಥಳಕ್ಕೆ ಬಂದು ಸ್ನೇಹ ಬೆಳೆಸಿಕೊಂಡಿದ್ದ ಮಂಗಳಮುಖಿ ತನ್ನ ಮಗನನ್ನು ಆಗಾಗ ಜೊತೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆಂದು ರಾಹುಲ್ ಮೌರ್ಯನ ತಂದೆ ಆರೋಪಿಸಿದ್ದಾರೆ.

ನಟ ದರ್ಶನ್ ನೋಡಲು ಜೈಲಿಗೆ ಬಂದ ಹೆಂಡ್ತಿ ವಿಜಯಲಕ್ಷ್ಮೀ ಮತ್ತು ನಟ ವಿನೋದ್ ಪ್ರಭಾಕರ್

ಎಳನೀರು ಮಾರಾಟ ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯ ನಾಲ್ಕು ತಿಂಗಳ ಹಿಂದೆ ರಾಹುಲ್ ಮೌರ್ಯ ನಾಪತ್ತೆಯಾಗಿದ್ದನು. ಇದಾದ ನಂತರ ಕಳೆದ ಮೂರು ದಿನಗಳ ಹಿಂದೆ ಅಂದರೆ ಜೂ.21ರಂದು ದೊಡ್ಡಮ್ಮನ ಮನೆಗೆ ವಾಪಸ್ ಆಗಿದ್ದನು. ಆದರೆ, ಜೂನ್ 23ರಂದು ಕೆಲವು ಮಂಗಳಮುಖಿಯರಿಂದ ರಾಹುಲ್ ಮೌರ್ಯ ಕುಟುಂಬಸ್ಥರ ಜೊತೆ ಜಗಳವೂ ಉಂಟಾಗಿತ್ತು. ನೀವು ನಿಮ್ಮ ಹುಡುಗನನ್ನು ನಮ್ಮೊಂದಿಗೆ ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು. ಜೊತೆಗೆ, ನಿಮ್ಮ ಮಗನೇ ನಮ್ಮ ಹುಡುಗಿಯನ್ನು ಕರೆದೊಯ್ದಿದ್ದಾನೆಂದು ಆರೋಪಿಸಿ ಮಂಗಳಮುಖಿಯರು ಊರಿನಲ್ಲಿ ಬಂದು ಜೋರಾಗಿ ಗಲಾಟೆಯನ್ನೂ ಮಾಡಿದ್ದರು.

ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ ಹಣದಲ್ಲಿ ಪವಿತ್ರಾಗೌಡ ಮನೆ ಖರೀದಿ?

ಇದರಿಂದ ಗ್ರಾಮದಲ್ಲಿ ಮನೆಯವರ ಮರ್ಯಾದೆ ಹಾಳಾಯಿತು ಎಂದು ರಾಹುಲ್ ಮೌರ್ಯ ಮನನೊಂದಿದ್ದನು. ಜೊತೆಗೆ, ನಾಲ್ಕು ತಿಂಗಳ ಕಾಲ ಎಲ್ಲಿದ್ದ, ಏನು ಘಟನೆ ನಡೆದಿದೆ ಎಂಬುದರ ಬಗ್ಗೆ ಯಾವುದೇ ವಿಚಾರವನ್ನೂ ಮನೆಯವರ ಬಳಿ ಹೇಳಿಕೊಳ್ಳದೇ ಸೈಲೆಂಟ್ ಆಗಿದ್ದನು. ಆದರೆ, ಜೂ.23ರಂದು ಮಂಗಳಮುಖಿಯರು ಮನೆಯ ಬಳಿ ಗಲಾಟೆ ಮಾಡಿದ ದಿನ ಸಂಜೆ 5 ಗಂಟೆಗೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಶೆಡ್ ನಲ್ಲಿ ರಾಹುಲ್ ಮೌರ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುರಿತಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.