Mysuru : ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ
ರಾಜ್ಯ ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಂಡು ನರೇಂದ್ರ ಮೋದಿಯವರು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಕೇರಳ ರಾಜ್ಯದ ಸಂಸದ ರಾಘವನ್ ಆರೋಪಿಸಿದರು.
ಬೈಲಕುಪ್ಪೆ : ರಾಜ್ಯ ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಂಡು ನರೇಂದ್ರ ಮೋದಿಯವರು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಕೇರಳ ರಾಜ್ಯದ ಸಂಸದ ರಾಘವನ್ ಆರೋಪಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಬಂದ ದಿನದಿಂದಲೂ ಕೂಡ ಜನ ವಿರೋಧಿ ಕಾಯ್ದೆ ಜಾರಿಗೊಳಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಇಲ್ಲಸಲ್ಲದ ತೆರಿಗೆ ನೀತಿ ಅಳವಡಿಕೆ, ರೈತ ವಿರೋಧಿ ಕಾಯ್ದೆ ಜಾರಿ ಮಾಡುವುದು, ಖಾಸಗಿಕರಣದಿಂದ ನಿರುದ್ಯೋಗ ಸಮಸ್ಯೆಯನ್ನು ಉಂಟು ಮಾಡಿದೆ ಮತ್ತು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆಗಮಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಬಿಜೆಪಿಯು ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರ ಮತ್ತು ಲಂಚಗುಳಿತನಕ್ಕೆ ಪೋ›ತ್ಸಾಹ ನೀಡುತ್ತಿದೆ. ಆದ್ದರಿಂದ ಸಂವಿಧಾನದ ಅಡಿಯಲ್ಲಿ ನಂಬಿಕೆ ಇಟ್ಟು ಉತ್ತಮ ಆಡಳಿತ ನಡೆಸುವ ಪಕ್ಷಕ್ಕೆ ಜನತೆ ಸರ್ಕಾರದ ಆಡಳಿತ ನೀಡಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಕೆ. ವೆಂಕಟೇಶ್ ಅವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ಶಾಸಕ ಕೆ. ವೆಂಕಟೇಶ್ ಮಾತನಾಡಿ, ಜೆಡಿಎಸ್‌ನಲ್ಲಿನ ದುರಾಡಳಿತ ಮತ್ತು ಸ್ಥಳೀಯ ಶಾಸಕರ ದುರ್ನಡೆತೆಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್‌ನ್ನು ತಾಲೂಕಿನ ಜನತೆ ಸೇರ್ಪಡೆಯಾಗಿ ಕಾಂಗ್ರೆಸ್‌ಗೆ ಶಕ್ತಿ ತುಂಬುತ್ತಿದ್ದಾರೆ ಎಂದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಕುರುಬ ಸಮುದಾಯದ ಅಧ್ಯಕ್ಷ ಎಚ್.ಡಿ. ಗಣೇಶ್, ಬಿ.ಎಸ್. ರಾಮಚಂದ್ರ, ಪಿ. ಮಹದೇವ… ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷ ಧನರಾಜ…, ಸದಸ್ಯ ಶಿವಕುಮಾರ್ ಸೇರಿದಂತೆ ಇತರರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಜಿಪಂ ಮಾಜಿ ಸದಸ್ಯೆ ಕಾವೇರಿ ಶೇಖರ್, ತಾಪಂ ಮಾಜಿ ಸದಸ್ಯ ಶೇಖರ್, ಅನಿತಾ ತೊಟ್ಟಪ್ಪಶೆಟ್ಟಿ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಶಿವು, ಸದಸ್ಯೆ ವಿಂದ್ಯ, ಪ್ರಕಾಶ್, ಮುಖಂಡರಾದ ರೆಹಮಾತ್ ಜಾನ್ ಬಾಬು, ಲಕ್ಷ್ಮಿ ನಾರಾಯಣ, ಮಂಜು, ಅರವಿಂದ್‌ರಾಜೇ ಅರಸ್, ಗಣೇಶ್, ಧರ್ಮ, ಶಿವರುದ್ರಪ್ಪ, ಜಗದೀಶ್, ಸಿ. ತಮಣ್ಣಯ್ಯ, ರಿಯಾಜ…, ಮೋಹಿನುದ್ದಿನ್ ಇದ್ದರು.
ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದು, ಹಾಲಿ ಶಾಸಕರನ್ನು ಮರಳಿ ಹಿಲ್‌ಗಾರ್ಡ್‌ಗೆ ಕಳಿಸಿಕೊಡುವುದು ನಿಶ್ಚಿತ
ಯಮಕನಮರಡಿ ಮತಕ್ಷೇತ್ರದಲ್ಲಿ ಕೈಗೊಂಡಿರುವ ಸ್ವಾಭಿಮಾನ ಪಾದಯಾತ್ರೆಯಲ್ಲಿ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದು, ಹಾಲಿ ಶಾಸಕರನ್ನು ಮರಳಿ ಹಿಲ್‌ಗಾರ್ಡ್‌ಗೆ ಕಳಿಸಿಕೊಡುವುದು ನಿಶ್ಚಿತ ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಹೇಳಿದರು.
ಹತ್ತರಗಿ ಗ್ರಾಮದಲ್ಲಿ ಭಾನುವಾರ ಸ್ವಾಭಿಮಾನದ ಪಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ದಬ್ಬಾಳಿಕೆಯಿಂದ ಜನ-ಸಾಮಾನ್ಯರು ರೋಸಿಹೋಗಿದ್ದು, ಶಾಸಕರು ರೈತರ ಜಮೀನುಗಳನ್ನು ಕಡಿಮೆ ದರದಲ್ಲಿ ಖರೀದಿಸಿದ್ದಾರೆ. ಈ ಭಾಗದಿಂದ ಈ ಹಿಂದೆ ಪ್ರತಿನಿಧಿಸಿದ ಉಮೇಶ ಕತ್ತಿಯವರಾಗಲಿ, ಎ.ಬಿ.ಪಾಟೀಲರಾಗಲಿ ರೈತರ ಜಮೀನುಳನ್ನು ಖರೀಸಿದ ಉದಾಹರಣೆಗಳಿಲ್ಲ. ರುಸ್ತುಂಪೂರ ಯಾತ ನೀರಾವರಿ, ಕುರಣಿಯಾತ ನೀರಾವರಿ, ಅಪೂರ್ಣವಿದ್ದು ಕೊನೆ ಹಂತದವರೆಗೂ ಇಂದಿಗೂ ರೈತರಿಗೆ ನೀರು ತಲುಪಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಒಂದು ಮತ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ನೀಡಿದರೇ ಕಸದ ಬುಟ್ಟಿಗೆ ಹಾಕಿದಂತೆ. 2023 ವಿಧಾನಸಭಾ ಚುನಾವಣೆಯಲ್ಲಿ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.